Budget 2022: ಫೆ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ: ಇಲ್ಲಿದೆ ಬಜೆಟ್ ಬಗ್ಗೆ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ

Nirmala Sitharaman: ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರದಿಂದ (ಜ 31) ಆರಂಭವಾಗಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

Budget 2022: ಫೆ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ: ಇಲ್ಲಿದೆ ಬಜೆಟ್ ಬಗ್ಗೆ ನೀವು ತಿಳಿಯಬೇಕಾದ ಮುಖ್ಯ ಮಾಹಿತಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 30, 2022 | 7:20 PM

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ (ಫೆ.1) ತಮ್ಮ ನಾಲ್ಕನೇ ಬಜೆಟ್ (Union Budget) ಮಂಡಿಸಲಿದ್ದಾರೆ. ಕೊರೊನಾ ಸೋಂಕಿನ 3ನೇ ಅಲೆಯ (Coronavirus 3rd Wave) ವಿರುದ್ಧ ದೇಶವು ಹೋರಾಡುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಈ ವರ್ಷದ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್​ನಿಂದ ತಮಗೆ ಏನಾದರೂ ರಿಯಾಯ್ತಿ ಅಥವಾ ಅನುಕೂಲಗಳು ಸಿಗಬಹುದು ಎಂದು ದೇಶದ ಎಲ್ಲ ನಾಗರಿಕರು ಕುತೂಹಲದಿಂದ (Budget Expectations) ಎದುರು ನೋಡುತ್ತಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರದಿಂದ (ಜ 31) ಆರಂಭವಾಗಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿಯನ್ನು (Economic Survey) ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ಪ್ರತಿವರ್ಷವೂ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮಂಡನೆಗಳೂ ಮುನ್ನಾ ಆರ್ಥಿಕ ಸಮೀಕ್ಷೆ ಮಂಡಿಸುವುದು ವಾಡಿಕೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗಳ ಮೇಲೆ ಈ ವರದಿಯು ಬೆಳಕು ಚೆಲ್ಲಲಿದೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ಅದಕ್ಕಿರುವ ಸಂಭಾವ್ಯ ಪರಿಹಾರಗಳ ಬಗ್ಗೆಯೂ ಈ ವರದಿ ಗಮನಸೆಳೆಯುತ್ತದೆ.

ಕಳೆದ ವರ್ಷದಂತೆ ಈ ವರ್ಷವೂ ಕೇಂದ್ರ ಬಜೆಟ್ ಕಾಗದ ರಹಿತವಾಗಿರುತ್ತದೆ. ಫೆ.7ರಂದು ಪ್ರಧಾನಿ ನರೇಂದ್ರ ಮೋದಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಬಜೆಟ್​ ಅನ್ನು ಸರ್ಕಾರದ ಪರವಾಗಿ ಪ್ರಧಾನಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ಪ್ರತಿವರ್ಷವೂ ಕುತೂಹಲದಿಂದ ಎದುರುನೋಡಲಾಗುತ್ತದೆ. ಇದರ ಜೊತೆಗೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ವರ್ತನೆಯೂ ಸುದ್ದಿಯಾಗುತ್ತದೆ. ರೈತರ ಸಮಸ್ಯೆಗಳು, ಪೆಗಾಸಸ್ ಸ್ಪೈವೇರ್ ಮೂಲಕ ನಡೆದ ಬೇಹುಗಾರಿಕೆ, ಚೀನಾ ಅತಿಕ್ರಮಣದಂಥ ವಿಷಯಗಳನ್ನು ಮುಂದಿರಿಸಿಕೊಂಡು ಸರ್ಕಾರವನ್ನು ಹಣಿಯಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಪಂಚ ರಾಜ್ಯಗಳ ಚುನಾವಣೆಯು ಇದೇ ಅವಧಿಯಲ್ಲಿ ನಡೆಯಲಿರುವುದು ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಲು ಮತ್ತೊಂದು ಮುಖ್ಯ ಕಾರಣ ಎನಿಸಿದೆ.

ಕೇಂದ್ರ ಬಜೆಟ್ (Budget 2022-2023) ಮಂಡನೆ ಯಾವಾಗ? ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಫೆ.1) ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಮೊದಲಾರ್ಧವು ಫೆ.2ರಿಂದ 11ರವರೆಗೆ ನಡೆಯಲಿದೆ. ಅಲ್ಲಿಂದಾಚೆಗೆ ಸುಮಾರು ಒಂದು ತಿಂಗಳ ಅವಧಿ ವಿರಾಮ ಇರುತ್ತದೆ. ಅಧಿವೇಶನದ ದ್ವಿತೀಯಾರ್ಧವು ಮಾರ್ಚ್ 14ರಂದು ಆರಂಭವಾಗಲಿದ್ದು ಏಪ್ರಿಲ್ 8ಕ್ಕೆ ಮುಕ್ತಾಯವಾಗಲಿದೆ.

ಬಜೆಟ್ ಅಧಿವೇಶನ ಹೇಗೆ ನಡೆಯುತ್ತದೆ? ಒಂದು ದಿನದ ಪ್ರತ್ಯೇಕ ಅವಧಿಯಲ್ಲಿ ಸಂಸತ್ತಿನ ಎರಡೂ ಸದನಗಳು ಸಭೆ ಸೇರಲಿವೆ. ದಿನದ ಮೊದಲಾರ್ಧದಲ್ಲಿ ರಾಜ್ಯಸಭೆಯ ಅಧಿವೇಶನ ನಡೆದರೆ, ದ್ವಿತೀಯಾರ್ಧದಲ್ಲಿ ಲೋಕಸಭೆಯ ಅಧಿವೇಶನ ನಡೆಯಲಿದೆ. ಕೊವಿಡ್-19 ಶಿಷ್ಟಾಚಾರ ಪಾಲನೆಯಾಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ನಿಯಮ ಜಾರಿಗೊಳಿಸಲಾಗಿದೆ. ಒಟ್ಟಾರೆ ಬಜೆಟ್​ ಅಧಿವೇಶನದಲ್ಲಿ 29 ಕಲಾಪಗಳು ನಡೆಯಲಿವೆ. ಪ್ರತಿದಿನ ವಾಡಿಕೆಗಿಂತ ಒಂದು ತಾಸು ಕಡಿಮೆ ಸದನಗಳು ಕಾರ್ಯನಿರ್ವಹಿಸಲಿವೆ. ರಾಜ್ಯಸಭೆಯಲ್ಲಿ ಶೂನ್ಯವೇಳೆಯ ಕಲಾಪವನ್ನು 30 ನಿಮಿಷಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತದ ಅಧಿವೇಶನದಲ್ಲಿ 10 ಮತ್ತು 2ನೇ ಹಂತದಲ್ಲಿ 19 ಕಲಾಪಗಳನ್ನು ನಿಗದಿ ಮಾಡಲಾಗಿದೆ. ಒಟ್ಟಾರೆ ಸುಮಾರು 80 ತಾಸು ಕಲಾಪ ನಡೆಯಲಿದೆ.

ಬಜೆಟ್ ಭಾಷಣದ ಅವಧಿ ಎಷ್ಟು? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಅವಧಿಯ ಬಜೆಟ್ ಭಾಷಣಗಳನ್ನು ಮಾಡಲು ಹೆಸರುವಾಸಿಯಾದವರು. 2019ರಲ್ಲಿ ಅವರು ದಾಖಲೆ ಅವಧಿಯ ಭಾಷಣ ಮಾಡಿದ್ದರು. 135 ನಿಮಿಷಗಳ ಈ ಭಾಷಣ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಸುದೀರ್ಘವಾದುದು ಎಂದು ಹೆಸರುವಾಸಿಯಾಗಿತ್ತು. 2020ರಲ್ಲಿ ಅವರು ತಮ್ಮದೇ ದಾಖಲೆ ಮುರಿದರು. 162 ನಿಮಿಷಗಳ ಭಾಷಣ ಮಾಡಿದ್ದರು. ಈ ವರ್ಷವೂ ಸುದೀರ್ಘ ಭಾಷಣ ಇರಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಬಜೆಟ್ 2022: ಕಾಗದರಹಿತ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಿದ್ಧ; ಇಲ್ಲಿದೆ ಮಾಹಿತಿ ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತೈಲ ಬೆಲೆಗಳ ಏರಿಕೆ, ಬಜೆಟ್ ಮತ್ತು ಹಣದುಬ್ಬರದ ಮೇಲೆ ಹೇಗೆ ಪ್ರಭಾವ ಬೀರಲಿದೆ?

Published On - 7:19 pm, Sun, 30 January 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್