Budget 2022: ಬಜೆಟ್ ದಿನಾಂಕ, ಸಮಯ, ಎಲ್ಲಿ ನೋಡುವುದು ಮತ್ತು ಇತರ ಮಾಹಿತಿಗಳು ಇಲ್ಲಿವೆ

Budget 2022 Date, Time: ಕೇಂದ್ರ ಬಜೆಟ್ 2022ರ ಮಂಡನೆ ದಿನಾಂಕ, ಸಮಯ ಹಾಗೂ ಎಲ್ಲಿ ನೋಡುವುದು ಮತ್ತಿತರ ಮಾಹಿತಿ ಈ ಲೇಖನದಲ್ಲಿದೆ.

Budget 2022: ಬಜೆಟ್ ದಿನಾಂಕ, ಸಮಯ, ಎಲ್ಲಿ ನೋಡುವುದು ಮತ್ತು ಇತರ ಮಾಹಿತಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 31, 2022 | 12:16 PM

ಕೊರೊನಾ ಮೂರನೇ ಅಲೆಯ ಮಧ್ಯೆ ಮಂಡನೆ ಆಗಲಿರುವ ಕೇಂದ್ರ ಬಜೆಟ್​ 2022ಕ್ಕೆ (Union Budget 2022) 24 ಗಂಟೆಗಿಂತ ಕಡಿಮೆ ಸಮಯ ಬಾಕಿ ಇದೆ. ಇದೀಗ ಎಲ್ಲರ ಕಣ್ಣು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಕಡೆ ನೆಟ್ಟಿದೆ. ಏಕೆಂದರೆ ಫೆಬ್ರವರಿ 1ನೇ ತಾರೀಕಿನಂದು ತಮ್ಮ ನಾಲ್ಕನೇ ಬಜೆಟ್​ ಅನ್ನು ಅವರು ಮಂಡಿಸಲಿದ್ದಾರೆ. ಕಳೆದ ವರ್ಷ ಕಾಗದರಹಿತವಾದ ಬಜೆಟ್​ ಮಂಡನೆ ಆಗಿತ್ತು. ಅದು ಕೂಡ ಮೊದಲ ಬಾರಿಗೆ ಅಂಥದ್ದೊಂದು ಪ್ರಯತ್ನವಾಗಿತ್ತು. ಕಳೆದ ವರ್ಷಕ್ಕೂ ಮುನ್ನ ಸಾಂಪ್ರದಾಯಿಕವಾಗಿ “ಬಹಿ-ಖಾತಾ” ತರುತ್ತಿದ್ದ ಕೇಂದ್ರ ಹಣಕಾಸು ಸಚಿವರು, 2021-22ರ ಬಜೆಟ್​ಗಾಗಿ ಸಂಸತ್​ಗೆ ತಂದದ್ದು ಟ್ಯಾಬ್ಲೆಟ್ (ಗ್ಯಾಜೆಟ್​). ಈ ಬಾರಿ ಕೂಡ ನಿರ್ಮಲಾ ಸೀತಾರಾಮನ್ ಅವರು ಕಾಗದ ರಹಿತವಾದ ಬಜೆಟ್ ಮಂಡನೆ ಮಾಡಲಿದ್ದಾರೆ.

ಸಂಸತ್​ನ ಬಜೆಟ್ ಅಧಿವೇಶನ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು ಭಾಷಣದೊಂದಿಗೆ ಸಂಸತ್​ನ ಬಜೆಟ್ ಅಧಿವೇಶನಕ್ಕೆ ಜನವರಿ 31ನೇ ತಾರೀಕು ಚಾಲನೆ ದೊರೆಯಲಿದೆ. ಮೊದಲ ಭಾಗದ ಕೇಂದ್ರ ಬಜೆಟ್ ಅಧಿವೇಶನವು ಜನವರಿ 31ರಿಂದ ಫೆಬ್ರವರಿ 11ರ ತನಕ ನಡೆಯಲಿದೆ. ಮತ್ತು ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14ರಿಂದ ಏಪ್ರಿಲ್ 8ರ ತನಕ ನಡೆಯುತ್ತದೆ.

ಬಜೆಟ್ ದಿನಾಂಕ ಮತ್ತು ಸಮಯ ಕೇಂದ್ರ ಬಜೆಟ್ 2022 ಫೆಬ್ರವರಿ 1 (ಮಂಗಳವಾರ) ಬೆಳಗ್ಗೆ 11ಕ್ಕೆ ಮಂಡನೆ ಆಗುವ ಸಾಧ್ಯತೆ ಇದೆ. ಬಜೆಟ್ ಮಂಡನೆಯ ಅವಧಿ 90ರಿಂದ 120 ನಿಮಿಷ ಇರಲಿದೆ. ಆದರೆ 2020ರಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಇತಿಹಾಸದಲ್ಲೇ ಅತಿ ದೀರ್ಘಾವಧಿಯ ಬಜೆಟ್ ಭಾಷಣ, ಅಂದರೆ 160 ನಿಮಿಷಗಳಷ್ಟು ದೀರ್ಘವಾಗಿ ಮಾಡಿದ್ದರು.

ಬಜೆಟ್ 2022 ಎಲ್ಲಿ ನೋಡುವುದು ಲೋಕ್​ ಸಭಾ ಟೀವಿಯಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ ಆಗುತ್ತದೆ. ಬಜೆಟ್​ಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಇತರ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಮತ್ತು ಟ್ವಿಟರ್​ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು. ಕಳೆದ ವರ್ಷ ಮೊದಲ ಬಾರಿಗೆ ಎಂಬಂತೆ (ಮೊದಲ ಬಜೆಟ್ ಮಂಡನೆ ಆದ ನವೆಂಬರ್ 26, 1947ರಿಂದ ಮೊದಲುಗೊಂಡು) ಹೊಸ ಆರ್ಥಿಕ ವರ್ಷದ ಆದಾಯ ಮತ್ತು ವೆಚ್ಚವನ್ನು ಒಳಗೊಂಡ ಸ್ಟೇಟ್​ಮೆಂಟ್, ಹಣಕಾಸು ಮಸೂದೆ, ಹೊಸ ತೆರಿಗೆ ಹಾಗೂ ಇತರ ಕ್ರಮಗಳ ಮಾಹಿತಿಯನ್ನು ಭೌತಿಕವಾಗಿ ಮುದ್ರಣ ಮಾಡಲಿಲ್ಲ.

ಸಂಸತ್ ಸದಸ್ಯರು ಮತ್ತು ಜನ ಸಾಮಾನ್ಯರಿಗೆ ಬಜೆಟ್ ಡಾಕ್ಯುಮೆಂಟ್​ ಸುಲಭವಾಗಿ ಹಾಗೂ ಯಾವುದು ಸಮಸ್ಯೆ ಇಲ್ಲದಂತೆ ದೊರೆಯುವುದಕ್ಕೆ ಕಳೆದ ವರ್ಷ ಹಣಕಾಸು ಸಚಿವರು ಬಜೆಟ್ ಮೊಬೈಲ್ ಆ್ಯಪ್ ಆರಂಭಿಸಿದ್ದರು.

ಇದನ್ನೂ ಓದಿ: Budget 2022: ಬಜೆಟ್​ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್​ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್