ದೆಹಲಿ: ಕೇಂದ್ರ ಹಣಕಾಸು ಸಚಿವ ನಿರ್ಮಲ್ ಸೀತಾರಾಮನ್ (Nirmal Sitharaman)ಮಂಗಳವಾರ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು (Women centric schemes) ಘೋಷಿಸಿದರು. “ನಾರಿ ಶಕ್ತಿ’ಯ (Nari Shakti) ಪ್ರಾಮುಖ್ಯತೆಯನ್ನು ಗುರುತಿಸಿ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಒದಗಿಸಲು 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಮಕ್ಕಳಿಗಾಗಿ ಮಿಷನ್ ಪೋಷಣ್ 2.0, ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿಗಳನ್ನು ಸಮಗ್ರ ಪ್ರಯೋಜನಗಳನ್ನು ಒದಗಿಸಲು ಇತ್ತೀಚೆಗೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಸಕ್ಷಮ್ ಅಂಗನವಾಡಿಯು ಹೊಸ ಪೀಳಿಗೆಯ ಅಂಗನವಾಡಿಯಾಗಿದ್ದು, ಇದು ಉತ್ತಮ ಮೂಲಸೌಕರ್ಯ ಮತ್ತು ಉತ್ತಮ ವಾತಾವರಣದಿಂದ ಆವೃತವಾಗಿರುವ ಆಡಿಯೋ ವಿಶುವಲ್ ಸಾಧನಗಳನ್ನು ಹೊಂದಿದ್ದು, ಬಾಲ್ಯದ ಬೆಳವಣಿಗೆಗಳಿಗೆ ಸುಧಾರಿತ ಪರಿಸರವನ್ನು ಒದಗಿಸುತ್ತದೆ. ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಕಾರ, 2011 ರ ಜನಗಣತಿಯ ಪ್ರಕಾರ ಮಹಿಳೆಯರು ಮತ್ತು ಮಕ್ಕಳು ಭಾರತದ ಜನಸಂಖ್ಯೆಯ ಶೇ 67.7 ರಷ್ಟಿದ್ದಾರೆ. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು ಸಕ್ಷಂ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆಗೆ ₹ 20,105 ಕೋಟಿ, ಮಿಷನ್ ವಾತ್ಸಲ್ಯಕ್ಕೆ ₹ 900 ಕೋಟಿ ಮತ್ತು ಮಿಷನ್ ಶಕ್ತಿ (ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಮಿಷನ್) ₹ 3,109 ಕೋಟಿ ಮೀಸಲಿಟ್ಟಿದ್ದರು.
For women-led development, our government has launched:
1. Mission Shaki
2. Mission Vatsalya
3. Poshan 2.0
FM @nsitharaman #AatmaNirbharBharatKaBudget— DD News (@DDNewslive) February 1, 2022
ಶಿಕ್ಷಣದ ವಿಚಾರದಲ್ಲಿ ಉತ್ತ ಶಿಕ್ಷಣವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಅದನ್ನು ಹಬ್ ಮತ್ತು ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಔಪಚಾರಿಕ ಶಿಕ್ಷಣದ ನಷ್ಟವನ್ನು ಸರಿದೂಗಿಸಲು ಮಕ್ಕಳಿಗೆ ಪೂರಕ ಶಿಕ್ಷಣವನ್ನು ಒದಗಿಸಲು 1-ವರ್ಗ-1-ಟಿವಿ ಚಾನೆಲ್ ಅನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಈಶಾನ್ಯಕ್ಕೆ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ, PM-DevINE ಎಂಬ ಹೊಸ ಯೋಜನೆ ಈಶಾನ್ಯ ಕೌನ್ಸಿಲ್ ಮೂಲಕ ಜಾರಿಗೆ ಬರಲಿದೆ. ಇದು ಪ್ರಧಾನ ಮಂತ್ರಿ ಗತಿಶಕ್ತಿಯ ಉತ್ಸಾಹದಲ್ಲಿ ಮೂಲಸೌಕರ್ಯ ಮತ್ತು ಈಶಾನ್ಯದ ಅಗತ್ಯತೆಯ ಆಧಾರದ ಮೇಲೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯವನ್ನು ನೀಡುತ್ತದೆ. ಇದು ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯದ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಂತರವನ್ನು ತುಂಬುತ್ತದೆ. ಅಸ್ತಿತ್ವದಲ್ಲಿರುವ ಕೇಂದ್ರ ಅಥವಾ ರಾಜ್ಯ ಯೋಜನೆಗಳಿಗೆ ಇದು ಪರ್ಯಾಯವಾಗಿರುವುದಿಲ್ಲ. ಕೇಂದ್ರ ಸಚಿವಾಲಯಗಳು ತಮ್ಮ ಅಭ್ಯರ್ಥಿ ಯೋಜನೆಗಳನ್ನು ಮುಂದಿಡಬಹುದಾದರೂ, ರಾಜ್ಯಗಳು ಒಡ್ಡಿದ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ₹ 1,500 ಕೋಟಿಗಳ ಆರಂಭಿಕ ಹಂಚಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: Budget 2022: 90 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Published On - 1:23 pm, Tue, 1 February 22