Budget 2022: 90 ನಿಮಿಷಗಳಲ್ಲಿ ಬಜೆಟ್​ ಭಾಷಣ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

2022 -23ನೇ ಸಾಲಿನ ಕೇಂದ್ರ ಬಜೆಟ್​ ಮುಕ್ತಾಯಗೊಂಡಿದೆ. 90 ನಿಮಿಷದೊಳಗೆ ತಮ್ಮ ಬಜೆಟ್ ಭಾಷಣವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಗಿಸಿದ್ದಾರೆ.

Budget 2022: 90 ನಿಮಿಷಗಳಲ್ಲಿ ಬಜೆಟ್​ ಭಾಷಣ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​
ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Follow us
TV9 Web
| Updated By: Digi Tech Desk

Updated on:Feb 01, 2022 | 3:46 PM

2022 -23ನೇ ಸಾಲಿನ ಕೇಂದ್ರ ಬಜೆಟ್ (Budget 2022) ​ ಮುಕ್ತಾಯಗೊಂಡಿದೆ. 90 ನಿಮಿಷದೊಳಗೆ ತಮ್ಮ ಬಜೆಟ್ ಭಾಷಣವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮುಗಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಸೂಚನೆ ಮೇರೆಗೆ ಸಚಿವರು ಹಣಕಾಸು ವಿಧೇಯಕ ಮಂಡಿಸಿದರು. ನಿರ್ಮಲಾ ಸೀತಾರಾಮನ್​ನ ಈ ಹಿಂದಿನ ಬಜೆಟ್ ಭಾಷಣಗಳಿಗೆ ಹೋಲಿಸಿದರೆ ಇದು ಕಡಿಮೆ ಅವಧಿಯಾಗಿದೆ. ಈ ಬಾರಿ ವಿತ್ತ ಸಚಿವರು 90 ನಿಮಿಷಗಳಲ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದರು. 2020ರಲ್ಲಿ ದಾಖಲೆಯ 160 ನಿಮಿಷ ಬಜೆಟ್ ಮಂಡಿಸಿದ್ದರು. ಈ ಬಾರಿ 90  ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದಾರೆ. ತೆರಿಗೆ ವಿಚಾರ ಮಾತನಾಡುವಾಗ ಮಹಾಭಾರತದ ಉಲ್ಲೇಖ ಹೊರತುಪಡಿಸಿದರೆ ಉಳಿದಂತೆ ಯಾವುದೇ ಕಾವ್ಯವನ್ನು ಈ ಬಾರಿಯ ಭಾಷಣದಲ್ಲಿ ಉಲ್ಲೇಖಿಸಲಿಲ್ಲ. 

ಡಿಜಿಟಲ್​ ರೂಪದಲ್ಲಿ ಬಜೆಟ್ ಮಂಡನೆ: ನಿರ್ಮಲಾ  ಇಂದು 4ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದು ನರೇಂದ್ರ ಮೋದಿ ನೇತೃತ್ವ ಸರ್ಕಾರದ 10ನೇ ಬಜೆಟ್. ಕೊರೊನಾ ಕಾರಣದಿಂದಾಗಿ ಬಜೆಟ್​ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಳೆದ 2 ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸಲಾಗುತ್ತಿಲ್ಲ. ಬದಲಾಗಿದೆ ಡಿಜಿಟಲ್​ ರೂಪದಲ್ಲಿ ಬಜೆಟ್ ಮಂಡಿಸಿದರು.

ಸಿಂಪಲ್ ನಿರ್ಮಲಾ, ಬಿಳಿ ಅಂಚಿನ ಸುಂದರ ವಿನ್ಯಾಸ: ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದು ಎನಿಸಿರುವ ಭಾರತದ ಬಜೆಟ್​ ಅನ್ನು ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತದೆ. ವಿಶ್ವದ ಬಹುತೇಕ ಮಾಧ್ಯಮಗಳಲ್ಲಿ ಭಾರತದ ಬಜೆಟ್​ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇಂಥ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹಜವಾಗಿಯೇ ಎಲ್ಲ ಗಮನ ಸೆಳೆಯುವ ಕೇಂದ್ರಬಿಂದು ಎನಿಸಿದ್ದಾರೆ.

ಬಜೆಟ್ ಮಂಡನೆಯ ದಿನ ಸಚಿವರು ಉಟ್ಟಿರುವ ಸೀರೆ ಗಮನ ಸೆಳೆದಿದೆ. ಬಿಳಿ ಅಂಚಿನ, ಕೆಂಪು ಛಾಯೆಯ ಬೂದು ಬಣ್ಣದ ಸೀರೆಯ ಆಯ್ಕೆಯ ಬಗ್ಗೆಯೂ ಕೆಲ ಮಾಧ್ಯಮಗಳು ಚರ್ಚಿಸುತ್ತಿವೆ. ಬೂದು, ಕೆಂಪು ಮತ್ತು ಬಿಳಿ ಬಣ್ಣಗಳು ವಿಶ್ವಾಸಾರ್ಹತೆ, ಭದ್ರತೆ ಮತ್ತು ಸರುಕ್ಷೆಯನ್ನು ಬಿಂಬಿಸುತ್ತವೆ. ಈ ಸೀರೆಗೆ ಬಳಕೆಯಾಗಿರುವ ಬೂದು ಛಾಯೆಯ ಕೆಂಪು ಅಧಿಕಾರದೊಂದಿಗೆ ಬರುವ ಪ್ರೀತಿಯ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ

Budget 2022: ಭಾರತದ ಆರ್ಥಿಕ ಬೆಳವಣಿಗೆ 9.27 ಪರ್ಸೆಂಟ್​, ಪ್ರಸಕ್ತ ಬಜೆಟ್​ನಲ್ಲಿ ಈ 7 ಅಂಶಗಳಿಗೆ ಪ್ರಾಮುಖ್ಯತೆ

Budget 2022: ಶೀಘ್ರದಲ್ಲೇ ಆರ್​ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ; 2023ಕ್ಕೆ 5ಜಿ ಸ್ಪೆಕ್ಟ್ರಂ ಹರಾಜು

Published On - 12:52 pm, Tue, 1 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ