Cheaper and Costlier: ಯಾವುದು ಅಗ್ಗ, ಯಾವುದು ದುಬಾರಿ- ಇಲ್ಲಿದೆ ಪಟ್ಟಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 01, 2023 | 1:10 PM

Union Budget 2023: ಈ ಬಾರಿಯ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಇದರ ಪರಿಣಾಮವಾಗಿ ಒಂದಷ್ಟು ವಸ್ತುಗಳ ಬೆಲೆ ಏರಿಳಿಕೆ ಆಗಿದೆ. ನಿರೀಕ್ಷೆಯಂತೆ ಸಿಗರೇಟುಗಳ ಬೆಲೆ ಏರಿಕೆಯಾಗಿದೆ. ಚಿನ್ನ ಇತ್ಯಾದಿ ವಸ್ತುಗಳ ಬೆಲೆಗಳೂ ಏರಿವೆ.

Cheaper and Costlier: ಯಾವುದು ಅಗ್ಗ, ಯಾವುದು ದುಬಾರಿ- ಇಲ್ಲಿದೆ ಪಟ್ಟಿ
ಬೆಲೆ ಹೆಚ್ಚಳ
Follow us on

ನವದೆಹಲಿ: ಈ ಬಾರಿಯ ಬಜೆಟ್​ನಲ್ಲಿ (Budget 2023) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಇದರ ಪರಿಣಾಮವಾಗಿ ಒಂದಷ್ಟು ವಸ್ತುಗಳ ಬೆಲೆ ಏರಿಳಿಕೆ ಆಗಿದೆ. ನಿರೀಕ್ಷೆಯಂತೆ ಸಿಗರೇಟುಗಳ ಬೆಲೆ ಏರಿಕೆಯಾಗಿದೆ. ಚಿನ್ನ ಇತ್ಯಾದಿ ವಸ್ತುಗಳ ಬೆಲೆಗಳೂ ಏರಿವೆ. ಆದರೆ, ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡದೇ ಇರುವುದು ಗಮನಾರ್ಹ. ಅಗತ್ಯವಲ್ಲದ ವಸ್ತುಗಳಾದ ಸಿಗರೇಟು, ಚಿನ್ನ ಇತ್ಯಾದಿಗಳಿಗೆ ಹೆಚ್ಚು ಸುಂಕ ಹಾಕಲಾಗಿದೆ. ಸಿಗರೇಟು ಬೆಲೆ ಶೇ. 10ರಷ್ಟು ಹೆಚ್ಚುವ ಸಾಧ್ಯತೆ ಇದೆ. ಗೋಲ್ಡ್ ಬಾರ್​ಗಳಿಂದ ಮಾಡಿದ ಆರ್ಟಿಕಲ್​ಗಳ ಮೇಲಿನ ಬೇಸಿಕ್ ಕಸ್ಟಮ್ಸ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ.

ದುಬಾರಿಯಾಗಲಿರುವ ವಸ್ತುಗಳು:

ಸಿಗರೇಟು

ಚಿನ್ನ

ಬೆಳ್ಳಿ

ಆಮದಿತ ರಬ್ಬರ್

ಆಮದಿತ ಬೆಳ್ಳಿ ವಸ್ತು

ಎಲೆಕ್ಟ್ರಿಕ್ ಅಡುಗೆ ಚಿಮಣಿ

ವಜ್ರ

ಪ್ಲಾಟಿನಮ್

ಬ್ರಾಂಡೆಡ್ ಬಟ್ಟೆ

ಎಕ್ಸ್​ರೇ

ಹೆಡ್​ಫೋನ್, ಇಯರ್ ಫೋನ್

ವೈದ್ಯಕೀಯ ಉತ್ಪನ್ನಗಳು

 

ಅಗ್ಗವಾಗಲಿರುವ ವಸ್ತುಗಳು

ಎಲೆಕ್ಟ್ರಿಕ್ ವಾಹನ

ಸೈಕಲ್

ಆಟಿಕೆ

ಆಟೊಮೊಬೈಲ್

ಎಲ್​ಇಡಿ ಟಿವಿ

ಮೊಬೈಲ್ ಫೋನ್

ಕ್ಯಾಮೆರಾ ಲೆನ್ಸ್

ಜೈವಿಕ ಅನಿಲ ಆಧಾರಿತ ಉತ್ಪನ್ನಗಳು

 

ಹಿಂದಿನ ಬಜೆಟ್​ಗಳಲ್ಲಿ ಬೆಲೆ ಏರಿಳಿಕೆಯಾಗಿದ್ದು:

ಈ ಹಿಂದಿನ ಮೂರು ವರ್ಷಗಳಲ್ಲಿ ಯಾವ್ಯಾವ ವಸ್ತುಗಳ ಬೆಲೆ ಏರಿಕೆ ಮತ್ತು ಬೆಲೆ ಇಳಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ:

ಬೆಲೆ ಹೆಚ್ಚಳವಾಗಿದ್ದು:

2022: ಲೌಡ್ ಸ್ಪೀಕರ್ಸ್, ಹೆಡ್​ಫೋನ್, ಇಯರ್ ಫೋನ್, ಛತ್ರಿ, ಇಮಿಟೇಶನ್ ಜ್ಯೂವೆಲರಿ, ಸ್ಮಾರ್ಟ್ ಮೀಟರ್ಸ್, ಸೋಲಾರ್ ಸೆಲ್, ಸೋಲಾರ್ ಮಾಡ್ಯೂಲ್ಸ್, ಎಕ್ಸ್ ರೇ ಮೆಷೀನ್, ಎಲೆಕ್ಟ್ರಾನಿಕ್ ಟಾಯ್​ಗಳ ಬಿಡಿಭಾಗಗಳು.

2021: ಎಲೆಕ್ಟ್ರಾನಿಕ್ ವಸ್ತು, ಮೊಬೈಲ್, ಮೊಬೈಲ್ ಚಾರ್ಜರ್, ಲೆದರ್ ಶೂ, ಕಾಬೂಲು ಕಡಲೆ.

2020: ಸಿಗರೇಟು, ತಂಬಾಕು, ಚಪ್ಪಲಿ, ವೈದ್ಯಕೀಯ ಉಪಕರಣ, ಪೀಠೋಕರಣ, ಸೀಲಿಂಗ್ ಫ್ಯಾನ್, ಕೆಲ ಬಗೆಯ ಪಾತ್ರೆಪಗಡೆಗಳು.

ಬೆಲೆ ಇಳಿಕೆಯಾಗಿದ್ದು:

2022: ಬಟ್ಟೆ, ಮೊಬೈಲ್ ಫೋನ್ ಚಾರ್ಜರ್, ಹಿಂಗು, ಕೊಕೋವಾ ಬೀಜ, ಮೀಥೈಲ್ ಆಲ್ಕೋಹಾಲ್, ಪಾಲಿಶ್ ಮಾಡಿದ ಡೈಮಂಡ್, ಸ್ಮಾರ್ಟ್​ಫೋನ್​ನ ಕ್ಯಾಮೆರಾ ಲೆನ್ಸ್

2021: ಕಬ್ಬಿಣ, ಉಕ್ಕು, ನೈಲಾನ್ ಬಟ್ಟೆ, ಕಾಪರ್ ವಸ್ತು, ಇನ್ಷೂರೆನ್ಸ್, ವಿದ್ಯುತ್,

2020: ಕಚ್ಛಾ ಸಕ್ಕರೆ, ಕೃಷಿಪ್ರಾಣಿ ಆಧಾರಿತ ಉತ್ಪನ್ನಗಳು, ಸ್ಕಿಮ್ಡ್ ಮಿಲ್ಕ್ ಕೆಲ ಆಲ್ಕೋಹಾಲ್ ಪಾನೀಯಗಳು, ಸೋಯಾ ಫೈಬರ್, ಸೋಯಾ ಪ್ರೋಟೀನ್

Published On - 12:53 pm, Wed, 1 February 23