Bank Holidays: ದೇಶದಾದ್ಯಂತ ಹಬ್ಬದ ಪ್ರಯುಕ್ತ ಈ ವಾರದಲ್ಲಿ 5 ದಿನ ಬ್ಯಾಂಕ್ ರಜಾ

| Updated By: Srinivas Mata

Updated on: Nov 03, 2021 | 11:54 AM

ಈ ವಾರದಲ್ಲಿ 5 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್​ಗಳು ಕೆಲಸ ನಿರ್ವಹಿಸುವುದಿಲ್ಲ. ಎಲ್ಲೆಲ್ಲಿ ಮತ್ತು ಯಾವ ಕಾರಣಕ್ಕೆ ರಜಾ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Bank Holidays: ದೇಶದಾದ್ಯಂತ ಹಬ್ಬದ ಪ್ರಯುಕ್ತ ಈ ವಾರದಲ್ಲಿ 5 ದಿನ ಬ್ಯಾಂಕ್ ರಜಾ
ಸಾಂದರ್ಭಿಕ ಚಿತ್ರ
Follow us on

ಈ ವಾರದಲ್ಲಿ ಏನಾದರೂ ಬ್ಯಾಂಕ್​ ಶಾಖೆಗೆ ತೆರಳಿ ಮಾಡಬೇಕಾದ ಕೆಲಸಗಳೇನಾದರೂ ಇದ್ದವಾ? ಸರಿಯಾಗಿ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ಇಂದಿನಿಂದ, ಅಂದರೆ ನವೆಂಬರ್ 3ರಿಂದ 5 ದಿನಗಳ ಕಾಲ ದೇಶದ ನಾನಾ ಭಾಗಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಅಧಿಕೃತ ರಜಾ ದಿನಗಳ ಪಟ್ಟಿಯಂತೆಯೇ ಈ ರಜಗಳು ಇವೆ. ಆದ್ದರಿಂದ ಈಗಲೇ ನೋಡಿಕೊಂಡು ಬಿಡಿ; ಯಾವುದಾದರೂ ಬ್ಯಾಂಕ್​ ಕೆಲಸಗಳು ಇದ್ದಲ್ಲಿ ಮುಂದಕ್ಕೆ ಹಾಕಿಕೊಳ್ಳಿ. ಅಷ್ಟೇ ಅಲ್ಲ, ಮುಂದಿನ ವಾರ ಸಹ ಇದೇ ಥರ ಕಿಕ್ಕಿರಿದ ರಜಾ ದಿನಗಳಿವೆ. ಮುಂದಿನ ವಾರ ಸಹ 5 ದಿನಗಳ ಕಾಲ ರಜಾ ಇರಲಿದೆ. ಆದ್ದರಿಂದ ಬ್ಯಾಂಕ್​ಗಳ ಕಾರ್ಯ ನಿರ್ವಹಣೆ ಇಲ್ಲದ ದಿನಗಳು ಯಾವುವು ಎಂಬ ಕಡೆಗೆ ಗಮನ ನೀಡಿ.

ಬ್ಯಾಂಕ್ ರಜಾ ದಿನಗಳು
ನವೆಂಬರ್ 3: ನರಕ ಚತುರ್ದಶಿ ಪ್ರಯುಕ್ತ ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ರಜಾ.

ನವೆಂಬರ್ 4: ಕರ್ನಾಟಕವನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲೂ ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜಾ ಪ್ರಯುಕ್ತ ರಜಾ.

ನವೆಂಬರ್ 5: ಗುಜರಾತ್, ಕರ್ನಾಟಕ, ಉತ್ತರಪ್ರದೇಶ, ಉತ್ತರಾಖಂಡ, ಸಿಕ್ಕಿಂ, ರಾಜಸ್ಥಾನ, ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ/ ವಿಕ್ರಂ ಸಂವಂತ್ ಹೊಸ ವರ್ಷದ ದಿನ/ ಗೋವರ್ಧನ್ ಪೂಜೆ ರಜಾ ಇದೆ.

ನವೆಂಬರ್ 6
ಸಿಕ್ಕಿಂ, ಮಣಿಪುರ್, ಹಿಮಾಚಲ್ ಪ್ರದೇಶ್, ಉತ್ತರಪ್ರದೇಶದಲ್ಲಿ ಭಾಯ್ ದುಜ್/ ಚಿತ್ರಗುಪ್ತ್ ಜಯಂತಿ/ಲಕ್ಷ್ಮೀ ಪೂಜೆ/ದೀಪಾವಳಿ/ನಿಂಗೊಲ್ ಛಾಕೌಬ

ನವೆಂಬರ್ 7
ಭಾನುವಾರದ ಪ್ರಯುಕ್ತ ರಜಾ

ಈ ತಿಂಗಳಲ್ಲಿ ಇರುವ ಇತರ ಬ್ಯಾಂಕ್ ರಜಾ ದಿನಗಳು
ನವೆಂಬರ್ 10
ಛಾತ್ ಪೂಜಾ/ ಸೂರ್ಯ ಪಷ್ಟಿ ದಳ ಛಾತ್ (ಸಾಯನ್ ಅರ್ಧ್ಯ)

ನವೆಂಬರ್ 11
ಛಾತ್ ಪೂಜಾ

ನವೆಂಬರ್ 12
ವಂಗಲ ಹಬ್ಬ

ನವೆಂಬರ್ 13
ಎರಡನೇ ಶನಿವಾರ

ನವೆಂಬರ್ 14
ಭಾನುವಾರ

ನವೆಂಬರ್ 19
ಗುರು ನಾನಕ್ ಜಯಂತಿ/ಕಾರ್ತೀಕ ಪೂರ್ಣಿಮೆ

ನವೆಂಬರ್ 21
ಭಾನುವಾರ

ನವೆಂಬರ್ 22
ಕನಕದಾಸ ಜಯಂತಿ

ನವೆಂಬರ್ 23
ಸೆಂಗ್​ ಕುಟ್ಸೆನೆಮ್

ನವೆಂಬರ್ 27
ನಾಲ್ಕನೇ ಶನಿವಾರ

ನವೆಂಬರ್ 28
ಭಾನುವಾರ

ಇದನ್ನೂ ಓದಿ: Car Loans: ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ಒದಗಿಸುತ್ತಿವೆ ಈ 9 ಬ್ಯಾಂಕ್​ಗಳು