AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7th Pay Commission: ಶೀಘ್ರದಲ್ಲೇ ಡಿಎ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ; ಏನಿದು ಫಿಟ್ಮೆಂಟ್ ಏರಿಕೆ?

Central Government Soon May Rise Fitment Factor, DA & DR: ಒಂದು ವೇಳೆ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಏರಿಕೆ ಮಾಡಿದಲ್ಲಿ 18,000 ರೂ ಇರುವ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಸಂಬಳದಲ್ಲಿ ಭಾರೀ ಹೆಚ್ಚಳವಾಗಲಿದೆ. ಮೂಲಗಳ ಪ್ರಕಾರ ಕನಿಷ್ಠ ಸಂಬಳ 26 ಸಾವಿರ ರುಪಾಯಿಗೆ ಹೆಚ್ಚಾಗಬಹುದು.

7th Pay Commission: ಶೀಘ್ರದಲ್ಲೇ ಡಿಎ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ; ಏನಿದು ಫಿಟ್ಮೆಂಟ್ ಏರಿಕೆ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 09, 2023 | 3:23 PM

Share

ನವದೆಹಲಿ: ಹಲವು ದಿನಗಳಿಂದ ಕಾತರದಿಂದ ಕಾಯುತ್ತಿರುವ ಕೇಂದ್ರ ಸರಕಾರಿ ನೌಕರರಿಗೆ ಶೀಘ್ರದಲ್ಲೇ ಖುಷಿಯ ಸುದ್ದಿ ಸಿಗಲಿದೆ. ಕೇಂದ್ರ ಉದ್ಯೋಗಿಗಳ ಸಂಬಳದಲ್ಲಿ ಭರಪೂರ ಏರಿಕೆಯಾಗಲಿದೆ. ಸರ್ಕಾರ ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆ (DR- Dearness Allowance) ಮತ್ತು ಫಿಟ್ಮೆಂಟ್ ಫ್ಯಾಕ್ಟರ್ (Fitment Factor) ಎರಡನ್ನೂ ಹೆಚ್ಚಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ವರದಿಗಳ ಪ್ರಕಾರ ಸರ್ಕಾರ ಈ ತಿಂಗಳು ಮುಗಿಯುವುದರೊಳಗೆ ಸಂಬಳ ಏರಿಕೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಒಂದು ವೇಳೆ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಏರಿಕೆ ಮಾಡಿದಲ್ಲಿ 18,000 ರೂ ಇರುವ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಸಂಬಳದಲ್ಲಿ ಭಾರೀ ಹೆಚ್ಚಳವಾಗಲಿದೆ. ಮೂಲಗಳ ಪ್ರಕಾರ ಕನಿಷ್ಠ ಸಂಬಳ 26 ಸಾವಿರ ರುಪಾಯಿಗೆ ಹೆಚ್ಚಾಗಬಹುದು. ಇನ್ನೂ ಕೆಲ ವರದಿಗಳ ಪ್ರಕಾರ ಇನ್ನೊಂದು ಅಥವಾ ಎರಡು ವಾರದೊಳಗೆ ಸರ್ಕಾರ ಘೋಷಣೆ ಹೊರಡಿಸಬಹುದು. ಇದರೊಂದಿಗೆ 50 ಲಕ್ಷ ಸರ್ಕಾರಿ ನೌಕರರಿಗೆ ಯುಗಾದಿಗೆ ಮುನ್ನ ಸುಗ್ಗಿಯೋ ಸುಗ್ಗಿ ಆಗಬಹುದು.

ಏನಿದು ಫಿಟ್ಮೆಂಟ್ ಫ್ಯಾಕ್ಟರ್?

ಇದು ಎಷ್ಟು ಸಂಬಳ ಹೆಚ್ಚಿಸಬೇಕು ಎಂಬ ಕ್ರಮಬದ್ಧ ಲೆಕ್ಕಾಚಾರ. ಸದ್ಯ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. 7ನೇ ವೇತನ ಆಯೋಗವು ಈ ದರ ನಿಗದಿ ಮಾಡಿತ್ತು. ಆಗ ಇದ್ದ ಕನಿಷ್ಠ ವೇತನ 7 ಸಾವಿರ ರೂ ವೇತನಕ್ಕೆ 2.57ರ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಗುಣಿಸಿದಾಗ ಕನಿಷ್ಠ ವೇತನ 18,000 ರುಪಾಯಿಗೆ ಹೆಚ್ಚಾಗಿತ್ತು. ಈಗ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 3.68ಕ್ಕೆ ಹೆಚ್ಚಿಸಬೇಕೆಂಬುದು ಸರ್ಕಾರಿ ನೌಕರರ ಒತ್ತಾಯವಾಗಿದೆ. ಇದಕ್ಕೆ ಸರ್ಕಾರ ಸಮ್ಮತಿಸಿದಲ್ಲಿ 18,000 ರೂ ಇರುವ ಕನಿಷ್ಠ ವೇತನ 26,000 ರುಪಾಯಿಗೆ ಹೆಚ್ಚಾಗಬಹುದು.

ಇದನ್ನೂ ಓದಿ: Fact Check: ಆರು ವರ್ಷ ಹಿಂದೆ ಬ್ಯಾನ್ ಆದ 500 ರು, 1000 ರು ನೋಟುಗಳ ವಿನಿಮಯಕ್ಕೆ ಇನ್ನೂ ಅವಕಾಶ ಇದೆಯಾ?

ಉದಾಹರಣೆಗೆ, 20,000 ರುಪಾಯಿಯ ಬೇಸಿಕ್ ಸ್ಯಾಲರಿ ಹೊಂದಿರುವ ಉದ್ಯೋಗಿಯ ಸಂಬಳಕ್ಕೆ ಫಿಟ್ಮೆಂಟ್ ಫ್ಯಾಕ್ಟರ್ ಸೇರಿಸಿದರೆ 20,000 X 3.68 = 73,600 ರೂ ಆಗುತ್ತದೆ.

ಡಿಎ ಶೇ. 4 ಹೆಚ್ಚಳ?

ಇದೇ ವೇಳೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಬಲ್ ಧಮಾಕ ಸಿಗಬಹುದು. ಈ ಬಾರಿಯೂ ಸರ್ಕಾರ ಡಿಎ ಮತ್ತು ಡಿರ್ ದರಗಳನ್ನು ಏರಿಸಬಹುದು. ವರದಿಗಳ ಪ್ರಕಾರ ಡಿಎ ಮತ್ತು ಡಿಆರ್​ಗಳು ಶೇ. 4ರಷ್ಟು ಹೆಚ್ಚಾಗಬಹುದು. ಸರ್ಕಾರ ಪ್ರತೀ ವರ್ಷ ಎರಡು ಬಾರಿ ಡಿಎ ಮತ್ತು ಡಿಆರ್ ಹೆಚ್ಚಿಸುತ್ತದೆ. 2022ರ ಸೆಪ್ಟಂಬರ್​ನಲ್ಲಿ ಶೇ. 4ರಷ್ಟು ಡಿಎ ಹೆಚ್ಚಿಸಿತ್ತು. ಅದಕ್ಕೂ ಮುನ್ನ ಶೇ. 3ರಷ್ಟು ಹೆಚ್ಚಿಗೆಯಾಗಿತ್ತು. ಈ ಬಾರಿ ಶೇ. 4ರಷ್ಟು ಡಿಎ ಹೆಚ್ಚಾದರೆ ಒಟ್ಟು ತುಟ್ಟಿಭತ್ಯೆ ಶೇ. 42 ಆಗುತ್ತದೆ.

ಡಿಎ ಎಂದರೆ ಡಿಯರ್ನೆಸ್ ಅಲೋಯನ್ಸ್, ಅಥವಾ ತುಟ್ಟಿಭತ್ಯೆ. ಇದು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಏರಿಕೆ ಮಾಡಲಾಗುವ ದರ. ಜೀವನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಉದ್ಯೋಗಿಗಳ ಸಂಬಳದ ಮೌಲ್ಯ ಕಡಿಮೆ ಆಗದಂತೆ ನೋಡಿಕೊಳ್ಳಲು ತೆಗೆದುಕೊಳ್ಳಲಾಗುವ ಕ್ರಮ ಇದು. ಇದು 50 ಲಕ್ಷ ಸರ್ಕಾರಿ ನೌಕರರ ಸಂಬಳಕ್ಕೆ ಅನ್ವಯ ಆಗುತ್ತದೆ.

ಇದನ್ನೂ ಓದಿ: LIC Bima Ratna Policy: ಬಿಮಾ ರತ್ನ ಪಾಲಿಸಿಯಲ್ಲಿ ದಿನಕ್ಕೆ 138 ಕಟ್ಟಿ, 13.5 ಲಕ್ಷ ರೂ ರಿಟರ್ನ್ ಪಡೆಯಿರಿ

ಇನ್ನು ಡಿಯರ್ನೆಸ್ ರಿಲೀಫ್ ಅಥವಾ ತುಟ್ಟಿ ಪರಿಹಾರವೂ ಇದೇ ಉದ್ದೇಶ ಹೊಂದಿದ್ದು, ಇದು ನಿವೃತ್ತರಾಗಿರುವ ಸರ್ಕಾರಿ ನೌಕರರ ಪಿಂಚಣಿಗೆ ಅನ್ವಯ ಆಗುತ್ತದೆ. ಒಟ್ಟು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿದ್ದಾರೆ.

ಡಿಎ ಅರಿಯರ್ಸ್ ಸಿಗುತ್ತಾ?

ಸರ್ಕಾರ ನಿಯಮಿತವಾಗಿ ಡಿಎ ಹೆಚ್ಚಿಸುತ್ತಾ ಬಂದರೂ 2020ರಿಂದ ಕೋವಿಡ್ ಕಾರಣಕ್ಕೆ ಡಿಎ ಮೊತ್ತವನ್ನು ಉದ್ಯೋಗಿಗಳಿಗೆ ವರ್ಗಾವಣೆ ಮಾಡಲಾಗಿರಲಿಲ್ಲ. 18 ತಿಂಗಳಿಂದ ಬಾಕಿ ಇರುವ ಡಿಎ ಮತ್ತು ಡಿಆರ್ ಅನ್ನು ಸರ್ಕಾರ ಈ ಬಾರಿ ಒಟ್ಟಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Thu, 9 March 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ