Aadhaar Card Update: ಮನೆಯಲ್ಲೇ ಕ್ಯೂಆರ್ ಕೋಡ್ ಮೂಲಕ ಆಧಾರ್ ಕಾರ್ಡ್ ಪರಿಶೀಲಿಸಬಹುದು

|

Updated on: May 14, 2023 | 4:39 PM

QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್‌ನ ಸತ್ಯಾಸತ್ಯತೆಯನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಿದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್ ನಕಲಿ ಅಥವಾ ಮೂಲವನ್ನು ಹೇಗೆ ತಿಳಿಯಬಹುದು.

Aadhaar Card Update: ಮನೆಯಲ್ಲೇ ಕ್ಯೂಆರ್ ಕೋಡ್ ಮೂಲಕ ಆಧಾರ್ ಕಾರ್ಡ್ ಪರಿಶೀಲಿಸಬಹುದು
ಸಾಂದರ್ಭಿಕ ಚಿತ್ರ
Follow us on

ಆಧಾರ್ ಕಾರ್ಡ್ (Aadhaar Card) ಎಂಬುದು ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಸರ್ಕಾರಿ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕು. ಈ ಡಾಕ್ಯುಮೆಂಟ್ ನಿಮ್ಮ ಗುರುತಿನ ಪುರಾವೆ ಮತ್ತು ದೇಶದಲ್ಲಿ ಎಲ್ಲಿಯಾದರೂ ಪ್ರಯಾಣಿಸುವಾಗ ಇದು ಬೇಕು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಾರ್ಡ್ ಮತ್ತು ಪ್ಯಾನ್ ಲಿಂಕ್ ಮಾಡಬೇಕು ಎಂಬ ಆದೇಶ ಈಗಾಗಲೇ ಬಂದಿದೆ. ಐರಿಸ್ ಸ್ಕ್ಯಾನ್, ಫಿಂಗರ್‌ಪ್ರಿಂಟ್, ಯಾವುದೇ ವ್ಯಕ್ತಿಯ ಫೋಟೋವನ್ನು ಈ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಈ ಮಧ್ಯೆ, ಈ ಆಧಾರ್ ಕಾರ್ಡ್ ಆಧರಿಸಿ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಆಧಾರ್ ಕಾರ್ಡ್ ಪರಿಶೀಲನೆ ಮುಖ್ಯ. ಈಗ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್‌ನ ಸತ್ಯಾಸತ್ಯತೆಯನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಿದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್ ನಕಲಿ ಅಥವಾ ಮೂಲವನ್ನು ಹೇಗೆ ತಿಳಿಯುವುದು ಎಂದು ನೋಡೋಣ.

ಆಧಾರ್ 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ. ಈ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಬಹುದು. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕವೂ ಪರಿಶೀಲನೆ ಮಾಡಬಹುದು. ಇದರಿಂದ ಆಧಾರ್ ಕಾರ್ಡ್ ನಕಲಿಯೋ ಅಸಲಿಯೋ ತಿಳಿಯಲಿದೆ. ಇದು ಆಧಾರ್ ಕಾರ್ಡ್ ಮಾಹಿತಿ ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ ಎಂಬುದನ್ನು ಸಹ ತೋರಿಸುತ್ತದೆ.

ಇದನ್ನೂ ಓದಿ;Aadhaar Card Update: ಆನ್​ಲೈನ್​ನಲ್ಲಿ ಆಧಾರ್ ದಾಖಲೆ ಅಪ್​ಡೇಶನ್; 3 ತಿಂಗಳು ಶುಲ್ಕ ಇಲ್ಲ

QR ಕೋಡ್ ಮೂಲಕ ಪರಿಶೀಲಿಸಿ

1. ಮೊದಲಿಗೆ, ಗೂಗಲ್ ಪ್ಲೇ ಸ್ಟೋರ್‌ನಿಂದ ಆಧಾರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

2. ಅಪ್ಲಿಕೇಶನ್ ಅನ್ನು ತೆರೆದ ನಂತರ ನೀವು ಪರದೆಯ ಮೇಲಿನ ಬಲ ಮೂಲೆಯಲ್ಲಿ QR ಕೋಡ್ ಐಕಾನ್ ಅನ್ನು ನೋಡುತ್ತೀರಿ. ಅಲ್ಲಿ ಕ್ಲಿಕ್ ಮಾಡಿ.

3. ನಿಮ್ಮ ಮೊಬೈಲ್ ಕ್ಯಾಮರಾದಿಂದ ಆಧಾರ್ ಕಾರ್ಡ್, ಇ-ಆಧಾರ್ ಅಥವಾ ಆಧಾರ್ PVC ಯಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

4. ಆಧಾರ್ ಕಾರ್ಡ್‌ನ ಸಂಪೂರ್ಣ ವಿವರಗಳು ನಿಮ್ಮ ಮುಂದೆ ಕಾಣಿಸುತ್ತವೆ.

ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ

1. UIDAI ವೆಬ್‌ಸೈಟ್‌ಗೆ ಹೋಗಿ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಒದಗಿಸಲಾದ ದಾಖಲಾತಿ ID ಅನ್ನು ನಮೂದಿಸಿ.

2. ಭದ್ರತಾ ಬಾಕ್ಸ್​​ನಲ್ಲಿ ನೀವು ಸ್ವೀಕರಿಸುವ ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು ‘ಸ್ಥಿತಿಯನ್ನು ಪರಿಶೀಲಿಸಿ’ ಕ್ಲಿಕ್ ಮಾಡಿ.

3. ನಿಮ್ಮ ಆಧಾರ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸ್ಥಿತಿಯನ್ನು ನೀವು ಪರದೆಯ ಮೇಲೆ ನೋಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ