ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾವುದೇ ವಯಸ್ಸಿನವರೂ ಆಧಾರ್ ಕಾರ್ಡ್ ಮಾಡಿಸಬಹುದು. ಒಂದು ವರ್ಷದೊಳಗಿನ ಮಗುವಿಗೂ ಆಧಾರ್ ಕಾರ್ಡ್ ಮಾಡಿಸಬಹುದು. ಬೇರೆ ಬೇರೆ ವಯೋಮಾನದವರಿಗೆ ಆಧಾರ್ ಎನ್ರೋಲ್ಮೆಂಟ್ ಮತ್ತು ಅಪ್ಗ್ರೆಡೇಶನ್ ವಿಧಾನದಲ್ಲಿ ಬದಲಾವಣೆ ಇರುತ್ತದೆ. 18 ವರ್ಷ ಮೇಲ್ಪಟ್ಟ ವಯಸ್ಕ ಭಾರತೀಯರಿಗೆ ಬೇರೆ ರೀತಿಯ ಕ್ರಮ ಇರುತ್ತದೆ. 5 ವರ್ಷದೊಳಗಿನವರಿಗೆ ಮತ್ತು 5ರಿಂದ 18 ವರ್ಷ ವಯೋಮಾನದವರಿಗೆ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ.
ಸಣ್ಣ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಉಚಿತವಾಗಿ ಮಾಡಿಸಬಹುದು. ಐದು ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ್ ಮಾಡಿಸಿದಾಗ ಅವರಿಂದ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್ (ಐರಿಸ್), ಫೋಟೋ ಇತ್ಯಾದಿ ಪಡೆಯಲಾಗುವುದಿಲ್ಲ. ಅವರ ವಯಸ್ಸು 5 ವರ್ಷದ ದಾಟಿದಾಗ ಆಧಾರ್ ಕಾರ್ಡ್ಗೆ ಬಯೋಮೆಟ್ರಿಕ್ಸ್ ಡಾಟಾ ಸೇರಿಸಬೇಕಾಗುತ್ತದೆ. ಐದರಿಂದ ಏಳು ವರ್ಷ ವಯಸ್ಸಿನಲ್ಲಿ ಉಚಿತವಾಗಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಬಹುದು. ಹಾಗೆಯೇ, 15ರಿಂದ 17 ವರ್ಷ ವಯಸ್ಸಿನಲ್ಲೂ ಉಚಿತವಾಗಿ ಅಪ್ಡೇಟ್ ಮಾಡಿಸಬಹುದು.
ಇದನ್ನೂ ಓದಿ: ಏಕೀಕೃತ ಪೆನ್ಷನ್ ಸ್ಕೀಮ್; ಯಾವಾಗಿಂದ ಜಾರಿ? 2004ಕ್ಕೆ ಮುಂಚೆ ಇದ್ದ ಒಪಿಎಸ್ಗಿಂತ ಇದು ಎಷ್ಟು ಭಿನ್ನ?
ಇದನ್ನೂ ಓದಿ: ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ
ಎನ್ರೋಲ್ಮೆಂಟ್ ಸೆಂಟರ್ನಲ್ಲಿ ಈ ಪ್ರಕ್ರಿಯೆ ಮುಗಿದಂತೆ. ಇದಾದ ಬಳಿಕ ನಿಗದಿತ ದಿನದಲ್ಲಿ ಬಾಲ್ ಆಧಾರ್ ಕಾರ್ಡ್ ಅನ್ನು ನೊಂದಾಯಿತ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ.
ಬಾಲ್ ಆಧಾರ್ ಕಾರ್ಡ್ಗೆ ಲಿಂಕ್ ಆದ ಪೋಷಕರ ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ನಂಬರ್ ಮತ್ತು ಇಮೇಲ್ಗೆ ನೋಟಿಫಿಕೇಶನ್ ಬರುತ್ತದೆ.
ಬಾಲ್ ಆಧಾರ್ ಕಾರ್ಡ್ನಲ್ಲಿ ಆಧಾರ್ ನಂಬರ್, ಹೆಸರು, ವಿಳಾಸ, ಪೋಷಕರ ಹೆಸರು ಇತ್ಯಾದಿ ಡೆಮಾಗ್ರಫಿಕ್ ವಿವರ ಇರುತ್ತದೆ. ಕ್ಯೂಆರ್ ಕೋಡ್ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ