Aadhaar card: ಆಧಾರ್ ನಂಬರ್ ಇಲ್ಲದೆ ಸರ್ಕಾರದ ಸವಲತ್ತು ಸಿಗಲ್ಲ!

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 18, 2022 | 1:07 PM

ಸರ್ಕಾರಗಳು ಕೊಡಮಾಡುವ ಸಹಾಯಧನ ಮತ್ತು ಇತರೆ ಸವಲತ್ತು ಪಡೆಯಲು ಆಧಾರ್‌ (Aadhaar Number)ಸಂಖ್ಯೆ ಇನ್ನು ಮುಂದೆ ಕಡ್ಡಾಯ. ವಿಶಿಷ್ಟಗುರುತಿನ ಪ್ರಾಧಿಕಾರ (UIDAI) ಆ. 11 ರಂದು ಈ ಬಗ್ಗೆಸುತ್ತೋಲೆ ಹೊರಡಿಸಿದೆ.

Aadhaar card: ಆಧಾರ್ ನಂಬರ್ ಇಲ್ಲದೆ ಸರ್ಕಾರದ ಸವಲತ್ತು ಸಿಗಲ್ಲ!
Aadhaar number
Follow us on

ನವದೆಹಲಿ: ಸರ್ಕಾರಗಳು ಕೊಡಮಾಡುವ ಸಹಾಯಧನ ಮತ್ತು ಇತರೆ ಸವಲತ್ತು ಪಡೆಯಲು ಆಧಾರ್‌ (Aadhaar Number)ಸಂಖ್ಯೆ ಇನ್ನು ಮುಂದೆ ಕಡ್ಡಾಯ. ವಿಶಿಷ್ಟಗುರುತಿನ ಪ್ರಾಧಿಕಾರ (UIDAI) ಆ. 11 ರಂದು ಈ ಬಗ್ಗೆಸುತ್ತೋಲೆ ಹೊರಡಿಸಿದೆ. ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ತಿಳಿವಳಿಕೆ ನೀಡಲಾಗಿದೆ. ದೇಶದ ಶೇ. 99 ರಷ್ಟು ವಯಸ್ಕರಿಗೆ ಆಧಾರ್ ನಂಬರ್ ನೀಡಲಾಗಿದೆ. ಹನ್ನೆರಡು ಡಿಜಿಟ್ ಸಂಖ್ಯೆಯ ನಂಬರ್ ಸರ್ಕಾರದ ಸವಲತ್ತು ನೇರವಾಗಿ ಪಡೆಯಲು ನೆರವಾಗುತ್ತಿವೆ ಎಂಬ ವಿಚಾರವನ್ನು ಉಲ್ಲೇಖಿಸಲಾಗಿದೆ.

ಹಳೆಯ ವ್ಯವಸ್ಥೆ ಹೇಗಿತ್ತು?

ಆಧಾರ್‌ ಕಾಯ್ದೆಯ ಸೆಕ್ಷನ್‌ 7 ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ ಸಹಾಯಧನ ಅಥವಾ ಸರ್ಕಾರದ ಇನ್ಯಾವುದೇ ಲಾಭ ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿತ್ತು. ಒಂದು ವೇಳೆಗೆ ಯಾವುದೇ ವ್ಯಕ್ತಿಗೆ ಆಧಾರ್‌ ಸಂಖ್ಯೆ ಅಲಭ್ಯ ಎಂದಾರೆ ಪರ್ಯಾಯ ಗುರುತಿನ ಚೀಟಿ ನೀಡಿ ಸೌಲಭ್ಯ ಪಡೆದುಕೊಳ್ಳಬಹುದಿತ್ತು.

ಇನ್ನು ಮುಂದೆ ಏನಾಗಲಿದೆ?

ಆ.11ರಂದು ಹೊರಡಿಸಿರುವ ಸುತ್ತೋಲೆ ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ, ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಆಧಾರ್‌ ನೀಡಿರದೇ ಇದ್ದರೆ, ಅಂಥ ವ್ಯಕ್ತಿ ಆಧಾರ್‌ ನೋಂದಣಿಗೆ ತಕ್ಷಣವೇ ಅರ್ಜಿ ಸಲ್ಲಿಸಬೇಕು. ಆಧಾರ್ ನಂಬರ್ ಸಿಗುವವರೆಗೆ ಪರ್ಯಾಯ ಗುರುತಿನ ಚೀಟಿ ಬಳಕೆ ಮಾಡಬಹುದು. ಆದರೆ ತಕ್ಷಣವೇ ಆಧಾರ್ ಗೆ ಅರ್ಜಿ ಸಲ್ಲಿಸಲೇಬೇಕಾಗುತ್ತದೆ.

ಆಧಾರ್‌ ಸಂಖ್ಯೆ ದುರ್ಬಳಕೆ ತಪ್ಪಿಸುವುದರ ಜತೆಗೆ ಪಾರದರ್ಶಕವಾಗಿರಲು ಆಧಾರ್‌ ಸಂಖ್ಯೆ ಇಲ್ಲದವರಿಗೆ ಇ- ಕೆವೈಸಿ ಮತ್ತು ಇತರೆ ಆಧಾರ್‌ ಅಥೆಂಟಿಕೇಷನ್‌ಗೆ ವರ್ಚುವಲ್‌ ಐಡೆಂಟಿಫೈರ್‌ (ವಿಐಡಿ) ಮಾದರಿಯನ್ನು ಪರಿಚಯಿಸಲಾಗಿದೆ.

ಈ ಹಿಂದೆ ಸಹ ಪ್ರಾಧಿಕಾರವು ನಾಗರಿಕರಿಗೆ ವರ್ಚುವಲ್ ಐಡೆಂಟಿಫೈಯರ್ (VID) ಸೌಲಭ್ಯವನ್ನು ನೀಡಿತ್ತು. VID ಒಂದು ತಾತ್ಕಾಲಿಕ ಮತ್ತು ಹಿಂತೆಗೆದುಕೊಳ್ಳಬಹುದಾದ 16 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು ಇದನ್ನು ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಿ ಇ-ಕೆವೈಸಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ವಿಐಡಿ ಒಂದು ಐಚ್ಛಿಕ ಆಯ್ಕೆಯಾಗಿದ್ದು ಗ್ರಾಹಕ ಅಥವಾ ಫಲಾನುಭವಿ ಬೇಕೆಂದರೆ ನೀಡಬಹುದು ಇಲ್ಲವೇ ನಿರಾಕರಿಸಬಹುದು. ಆದರೆ ಸರ್ಕಾರಿ ಯೋಜನೆ ಮತ್ತು ಸವಲತ್ತು ಪಡೆದುಕೊಳ್ಳಲು ಆಧಾರ್ ನಂಬರ್ ಕಡ್ಡಾಯವಾಗಿದೆ.

ಮಧುಸೂದನ ಹೆಗಡೆ

Published On - 1:06 pm, Thu, 18 August 22