ಭಾರತೀಯ ನೌಕಾಪಡೆ ಬತ್ತಳಿಕೆಗೆ ಸೇರಿದ ಶಕ್ತಿಶಾಲಿ ‘ದೃಷ್ಟಿ’ ಡ್ರೋನ್; ಅದಾನಿ ಕಂಪನಿಯಿಂದ ಎರಡನೇ ಯುಎವಿ ಸರಬರಾಜು

|

Updated on: Dec 04, 2024 | 5:09 PM

Drishti-10 starliner, Indian version of Israeli Hermes-900 UAV: ಇಸ್ರೇಲ್​ನ ಎಲ್​ಬಿಟ್ ಸಿಸ್ಟಮ್ಸ್ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ತಯಾರಿಸುತ್ತಿರುವ ದೃಷ್ಟಿ-10 ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದಿದೆ. ಅದಾನಿ ಕಂಪನಿಯಿಂದ ನೌಕಾಪಡೆಗೆ ನೀಡಲಾಗಿರುವ ಎರಡನೇ ಡ್ರೋನ್ ಇದು. ಎಲ್ಬಿಟ್ ಸಿಸ್ಟಮ್ಸ್ ತಯಾರಿಸಿರುವ ಹರ್ಮಿಸ್-900 ಡ್ರೋನ್​ನ ಪರಿಷ್ಕೃತ ಆವೃತ್ತಿ ದೃಷ್ಟಿ-10 ಸ್ಟಾರ್​ಲೈನರ್ ಡ್ರೋನ್.

ಭಾರತೀಯ ನೌಕಾಪಡೆ ಬತ್ತಳಿಕೆಗೆ ಸೇರಿದ ಶಕ್ತಿಶಾಲಿ ‘ದೃಷ್ಟಿ’ ಡ್ರೋನ್; ಅದಾನಿ ಕಂಪನಿಯಿಂದ ಎರಡನೇ ಯುಎವಿ ಸರಬರಾಜು
ದೃಷ್ಟಿ 10 ಸ್ಟಾರ್​ಲೈನರ್
Follow us on

ನವದೆಹಲಿ, ಡಿಸೆಂಬರ್ 4: ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ನಿರ್ಮಿಸಿರುವ ದೃಷ್ಟಿ-10 ಸ್ಟಾರ್​ಲೈನರ್ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದುಕೊಂಡಿದೆ. ಇದು ಅದಾನಿಯಿಂದ ಸರಬರಾಜು ಆದ ಎರಡನೇ ಡ್ರೋನ್ ಆಗಿದೆ. ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ಕಣ್ಣಿಡಲು ಮತ್ತು ಸಾಗರ ವಲಯದ ಭದ್ರತೆಗೆ ಸಹಾಯವಾಗಲು ಈ ಡ್ರೋನ್​ಗಳನ್ನು ಬಳಸಲಾಗುತ್ತದೆ. 2024ರ ಜನವರಿಯಲ್ಲಿ ಮೊದಲ ದೃಷ್ಟಿ-10 ಸ್ಟಾರ್​ಲೈನರ್ ಡ್ರೋನ್ ಅನ್ನು ನೌಕಾಪಡೆಗೆ ನೀಡಲಾಗಿತ್ತು. ಭಾರತೀಯ ಸೇನೆಯೂ ಕೂಡ ಈ ಡ್ರೋನ್​ಗಳನ್ನು ಪಡೆಯುತ್ತಿದೆ.

ಇಸ್ರೇಲ್​ನ ಎಲ್ಬಿಟ್ ಸಿಸ್ಟಮ್ಸ್ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ದೃಷ್ಟಿ-10 ಸ್ಟಾರ್​ಲೈನರ್ ಡ್ರೋನ್ ಅನ್ನು ತಯಾರಿಸುತ್ತಿದೆ. ಇದು ಮೂಲತಃ ಎಲ್ಬಿಟ್ ಸಿಸ್ಟಮ್ಸ್​ನ ಹರ್ಮಿಸ್-900 ಎನ್ನುವ ಡ್ರೋನ್​ನ ಭಾರತೀಯ ಆವೃತ್ತಿಯಾಗಿದೆ.

ಇದನ್ನೂ ಓದಿ: ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ

ಹರ್ಮಿಸ್-900 ವಿಶ್ವದ ಬಲಶಾಲಿ ಡ್ರೋನ್​ಗಳಲ್ಲಿ ಒಂದೆನಿಸಿದೆ. ಎಂಕ್ಯೂ-9 ರೀಪರ್, ಗ್ಲೋಬ್ ಹಾಕ್, ಬಾಯ್ರಾಕ್ತರ್ ಟಿಬಿ2, ವಿಂಗ್ ಲೂಂಗ್-2 ನಂತರ ಹರ್ಮಿಸ್-900 ಪ್ರಬಲ ಡ್ರೋನ್ ಎಂದು ಗುರುತಿಸಲಾಗಿದೆ. ಇದು 30,000 ಅಡಿ ಎತ್ತರದವರೆಗೂ ಹೋಗಬಲ್ಲುದು. 30 ಗಂಟೆ ನಿರಂತರವಾಗಿ ಚಾಲನೆಯಲ್ಲಿರಬಹುದು. ಹತ್ತಿರ ಹತ್ತಿರ ಒಂದು ಟನ್ ತೂಕದ ಈ ಡ್ರೋನ್ ಸುಮಾರು 300 ಕಿಲೋ ಪೇಲೋಡ್ ಹೊತ್ತು ಹಾರಾಟ ಮಾಡಬಲ್ಲುದು.

ಭಾರತೀಯ ನೌಕಾಪಡೆಯ ಅಧಿಕಾರಿಗಳು

ಸರಹದ್ದುಗಳನ್ನು ಕಾಯಲು, ಶತ್ರುಗಳ ಮೇಲೆ ನಿಗಾ ಇಡಲು, ಭದ್ರತೆ ಹೆಚ್ಚಿಸಲು ಈ ಡ್ರೋನ್ ಬಹಳ ಉಪಯುಕ್ತವಾಗಿದೆ. ಇದೇ ಡ್ರೋನ್ ಅನ್ನು ಇಸ್ರೇಲೀ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಭಾರತದಲ್ಲಿ ತಯಾರಿಸುತ್ತಿದೆ. ಹೈದರಾಬಾದ್ ಫ್ಯಾಕ್ಟರಿಯಲ್ಲಿ ಇದರ ತಯಾರಿಕೆ ನಡೆಯುತ್ತಿದೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್​ನಿಂದ 5.84 ಲಕ್ಷ ನೇರ ಉದ್ಯೋಗಗಳ ಸೃಷ್ಟಿ; ಸ್ಮಾರ್ಟ್​ಫೋನ್, ಫಾರ್ಮಾ, ಆಹಾರ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ

ಜೂನ್ ತಿಂಗಳಲ್ಲಿ ಭಾರತೀಯ ಸೇನೆಯು ದೃಷ್ಟಿ-10 ಡ್ರೋನ್ ಅನ್ನು ಪಡೆದಿದ್ದು, ಅದನ್ನು ಭಾರತ ಮತ್ತು ಪಾಕಿಸ್ತಾನದ ಗಡಿ ಉದ್ದಗಲಕ್ಕೂ ನಿಗಾ ಇಡಲು ಬಳಕೆ ಮಾಡಲಾಗುತ್ತಿದೆ. ಇದೇ ರೀತಿ ಮತ್ತೊಂದು ಡ್ರೋನ್ ಅನ್ನು ಸೇನೆಯು ಪಡೆಯುತ್ತಿದೆ. ಭಾರತದ ಮಿಲಿಟರಿಗೆ ಒಟ್ಟು ಇಂಥ ನಾಲ್ಕು ಡ್ರೋನ್​ಗಳು ಸಿಕ್ಕಂತಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ