ಅತಿಹೆಚ್ಚು ಸರಕು ನಿರ್ವಹಣೆ, ಮುಂದ್ರಾ ಪೋರ್ಟ್ ಹೊಸ ದಾಖಲೆ; ಅದಾನಿ ಪೋರ್ಟ್ ಷೇರಿಗೆ ಹೆಚ್ಚಿದ ಬೇಡಿಕೆ

|

Updated on: Nov 06, 2023 | 11:34 AM

Mundra port record: ಅಕ್ಟೋಬರ್ ತಿಂಗಳಲ್ಲಿ ಗುಜರಾತ್​ನ ಮುಂದ್ರಾ ಪೋರ್ಟ್​ನಲ್ಲಿ 16.1 ಮಿಲಿಯನ್ ಟನ್​ಗಳಷ್ಟು ಸರಕುಗಳನ್ನು ನಿರ್ವಹಿಸಲಾಗಿದೆ. ಭಾರತದ ಯಾವುದೇ ಪೋರ್ಟ್ ಒಂದು ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ಸರಕು ನಿರ್ವಹಣೆ ಮಾಡಿದ್ದು ಇದೇ ಮೊದಲು. ಮುಂದ್ರಾ ಪೋರ್ಟ್ ಭಾರತದ ಮೊದಲ ಖಾಸಗಿ ಪೋರ್ಟ್ ಆಗಿದೆ. ಅತಿದೊಡ್ಡ ಪೋರ್ಟ್ ಎಂಬ ಖ್ಯಾತಿಯನ್ನೂ ಪಡೆದಿದೆ. ಅಕ್ಟೋಬರ್​ನಲ್ಲಿ 16.1 ಮಿಲಿಯನ್ ಟನ್ ಕಾರ್ಗೋ ನಿರ್ವಹಣೆ ಆಗಿದೆ. ಅಕ್ಟೋಬರ್​ವರೆಗೆ ಈ ವರ್ಷದಲ್ಲಿ 102 ಎಂಎಂಟಿಗಳಷ್ಟು ಸರಕುಗಳನ್ನು ನಿರ್ವಹಿಸಲಾಗಿದೆ.

ಅತಿಹೆಚ್ಚು ಸರಕು ನಿರ್ವಹಣೆ, ಮುಂದ್ರಾ ಪೋರ್ಟ್ ಹೊಸ ದಾಖಲೆ; ಅದಾನಿ ಪೋರ್ಟ್ ಷೇರಿಗೆ ಹೆಚ್ಚಿದ ಬೇಡಿಕೆ
ಮುಂದ್ರಾ ಪೋರ್ಟ್
Follow us on

ಅಹ್ಮದಾಬಾದ್, ನವೆಂಬರ್ 6: ಅದಾನಿ ಗ್ರೂಪ್ ಕಾರ್ಯಾಚರಿಸುವ ಮುಂದ್ರಾ ಬಂದರು (Mundra Port) ಹೊಸ ದಾಖಲೆ ಬರೆದಿದೆ. ಅಕ್ಟೋಬರ್ ತಿಂಗಳಲ್ಲಿ ಈ ಪೋರ್ಟ್​ನಲ್ಲಿ 16.1 ಮಿಲಿಯನ್ ಟನ್​ಗಳಷ್ಟು ಸರಕುಗಳನ್ನು (Cargo) ನಿರ್ವಹಿಸಲಾಗಿದೆ. ಭಾರತದ ಯಾವುದೇ ಪೋರ್ಟ್ ಒಂದು ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ಸರಕು ನಿರ್ವಹಣೆ ಮಾಡಿದ್ದು (cargo handling) ಇದೇ ಮೊದಲು. ಕಚ್ಛ್ ಜಿಲ್ಲೆಯ ಮುಂದ್ರಾ ಕಡಲತೀರದಲ್ಲಿ 1998ರಲ್ಲಿ ಸ್ಥಾಪನೆಯಾದ ಮುಂದ್ರಾ ಪೋರ್ಟ್ ಅನ್ನು ಅದಾನಿ ಪೋರ್ಟ್ಸ್ ಅಂಡ್ ಸ್ಪೆಷನಲ್ ಎಕನಾಮಿಕ್ ಝೋನ್ಸ್ (APSEZ) ನಿರ್ವಹಿಸುತ್ತಿದೆ. ಈಗ ಅತಿಹೆಚ್ಚು ಸರಕುಗಳನ್ನು ನಿರ್ವಹಿಸುವ ದಾಖಲೆ ಬರೆದ ಬಳಿಕ ಅದಾನಿ ಪೋರ್ಟ್ಸ್​ನ ಷೇರುಗಳು ಏರತೊಡಗಿವೆ.

ಮುಂದ್ರಾ ಪೋರ್ಟ್ ಭಾರತದ ಮೊದಲ ಖಾಸಗಿ ಪೋರ್ಟ್ ಆಗಿದೆ. ಅತಿದೊಡ್ಡ ಪೋರ್ಟ್ ಎಂಬ ಖ್ಯಾತಿಯನ್ನೂ ಪಡೆದಿದೆ. ಅಕ್ಟೋಬರ್​ನಲ್ಲಿ 16.1 ಮಿಲಿಯನ್ ಟನ್ ಕಾರ್ಗೋ ನಿರ್ವಹಣೆ ಆಗಿದೆ. ಅಕ್ಟೋಬರ್​ವರೆಗೆ ಈ ವರ್ಷದಲ್ಲಿ 102 ಎಂಎಂಟಿಗಳಷ್ಟು ಸರಕುಗಳನ್ನು ನಿರ್ವಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಕುಗಳ ನಿರ್ವಹಣೆಯಲ್ಲಿ ಶೇ. 9ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ 100 ಎಂಎಂಟಿ ಸರಕುಗಳ ಗಡಿ ಮುಟ್ಟಲು 231 ದಿನಗಳು ಬೇಕಾಗಿತ್ತು. ಈ ವರ್ಷ 210 ದಿನಗಳಿಗೆಯೇ ಈ ಮಟ್ಟ ತಲುಪಲಾಗಿದೆ.

ಮುಂದ್ರಾ ಪೋರ್ಟ್​ನಲ್ಲಿ ಈ ವರ್ಷ ಹೈಡ್ರೋಲಿಸಿಸ್ ಪೈ ಗ್ರಾಸ್ (ಎಚ್​ಪಿಜಿ) ಇತ್ಯಾದಿ ಹೊಸ ಕಾರ್ಗೋಗಳನ್ನು ಒಳಗೊಳ್ಳಲಾಗಿದೆ. ವರದಿ ಪ್ರಕಾರ ಈ ವರ್ಷ ಖಾಸಗಿ ಬಂದರಿನಲ್ಲಿ ಒಟ್ಟು 2,480 ಹಡಗುಗಳ ನಿಲುಗಡೆ ಆಗಿದೆ.

ಇದನ್ನೂ ಓದಿ: ಅದಾನಿ ವಿಲ್ಮರ್​ನ ಸಂಪೂರ್ಣ ಪಾಲು ಬಿಟ್ಟುಕೊಡಲು ಅದಾನಿ ಗ್ರೂಪ್ ಮುಂದು; ಎಣ್ಣೆ ಬಿಸಿನೆಸ್​ನಿಂದ ಅದಾನಿ ಹೊರಬರೋದು ಯಾಕೆ?

ಮುಂದ್ರಾ ಪೋರ್ಟ್​ಗೆ ಇರುವ ಅನುಕೂಲವೆಂದರೆ ಅದರ ಸ್ಥಳ. ಡಬ್ಲ್ಯುಡಿಎಫ್​ಸಿ ಕಾರಿಡಾರ್​ಗೆ ಇದು ಸುಲಭ ಕನೆಕ್ಟಿವಿಟಿ ಹೊಂದಿದೆ. ಹೀಗಾಗಿ, ಬಹಳಷ್ಟು ಹಡಗುಗಳು ಬಂದು ಇಲ್ಲಿ ನಿಲುಗಡೆ ಪಡೆಯುತ್ತವೆ. ಸಿಂಗಾಪುರದ 397.88 ಮೀಟರ್ ಉದ್ದದ ಹಡಗೊಂದು 2021ರಲ್ಲಿ ಮುಂದ್ರಾ ಪೋರ್ಟ್​ಗೆ ಬಂದಿತ್ತು. ಈ ಹಡಗು ಭಾರತದ ಯಾವುದೇ ಬಂದರಿಗೆ ಬಂದಿದ್ದು ಅದೇ ಮೊದಲು.

ಸದ್ಯ ಮುಂದ್ರಾ ಪೋರ್ಟ್​ನಲ್ಲಿ 155 ಎಂಟಿಯಷ್ಟು ಕಾರ್ಗೋಗಳ ನಿರ್ವಹಣೆ ಆಗುತ್ತದೆ. ಭಾರತದ ಒಟ್ಟಾರೆ ಕಾರ್ಗೊ ನಿರ್ವಹಣೆಯಲ್ಲಿ ಈ ಪೋರ್ಟ್​ನ ಪಾಲು ಶೇ. 11ರಷ್ಟಿದೆ. 2024-25ರ ಹಣಕಾಸು ವರ್ಷದಲ್ಲಿ ಕಾರ್ಗೋ ನಿರ್ವಹಣೆಯ ಪ್ರಮಾಣವನ್ನು 200 ಎಂಟಿಗಳಿಗೆ ಏರಿಸುವ ಗುರಿ ಇರರಿಸಲಾಗಿದೆ. ಇನ್ನು, ಭಾರತದ ಶೇ. 33ರಷ್ಟು ಕಂಟೈನರ್ ಟ್ರಾಫಿಕ್ ಮುಂದ್ರಾ ಪೋರ್ಟ್​ಗೆ ಬರುತ್ತದೆ. ಆ ಮಟ್ಟಿಗೂ ಇದು ದಾಖಲೆಯಾಗಿದೆ.

ಅದಾನಿ ಪೋರ್ಟ್ ಷೇರುಬೆಲೆ

ಮುಂದ್ರಾ ಪೋರ್ಟ್​ನ ಸರಕು ನಿರ್ವಹಣೆಯ ದಾಖಲೆಯ ಸುದ್ದಿ ಹೊರಬರುತ್ತಿರುವಂತೆಯೇ ಅದಾನಿ ಪೋರ್ಟ್ಸ್ ಸಂಸ್ಥೆಯ ಷೇರುಗಳಿಗೆ ಬೇಡಿಕೆ ಹೆಚ್ಚಿದೆ. ಶುಕ್ರವಾರ ಅಂತ್ಯದಲ್ಲಿ 795 ರೂ ಇದ್ದ ಅದರ ಷೇರುಬೆಲೆ ಸೋಮವಾರ ಬೆಳಗಿನ ವಹಿವಾಟಿನಲ್ಲಿ 805 ರುಪಾಯಿಗೆ ಏರಿತ್ತು.

ಇದನ್ನೂ ಓದಿ: Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ

ನವೆಂಬರ್ 9ರಂದು ಅದಾನಿ ಪೋರ್ಟ್ಸ್​ನ ಎರಡನೇ ಕ್ವಾರ್ಟರ್ ವರದಿ ಪ್ರಕಟವಾಗಲಿದೆ. ಮೊದಲ ಕ್ವಾರ್ಟರ್​ನಲ್ಲಿ ಅದರ ಲಾಭ ಶೇ. 82ರಷ್ಟು ಹೆಚ್ಚಿತ್ತು. ಈ ಎರಡನೇ ಕ್ವಾರ್ಟರ್​ನಲ್ಲಿ ಲಾಭ ಎಷ್ಟು ಹೆಚ್ಚಿದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ