Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ

Kalpana Saroj's Life: ಬಡತನದ ಕುಟುಂಬ, ಬಲವಂತದ ಬಾಲ್ಯವಿವಾಹ, ಸ್ಲಂನಲ್ಲಿ ವಾಸ, ಗಂಡನ ಮನೆಯಲ್ಲಿ ಕಿರುಕುಳ, ಗ್ರಾಮಸ್ಥರಿಂದಲೂ ತಿರಸ್ಕಾರ, ಸಾವಿನ ಆಲೋಚನೆ, ಇವಿಷ್ಟೂ ಯಾರದ್ದಾದರೂ ಬದುಕಿನಲ್ಲಿ ಆಗಿದ್ದರೆ ಜೀವ ಸವೆಸಿದವರೆ ಸಾಕೆಂದು ಕುಸಿದುಹೋಗುತ್ತಿದ್ದರು. ಕಲ್ಪನಾ ಸರೋಜ್ ಅವರನ್ನು ಇವ್ಯಾವುವೂ ಕೂಡ ಹಿನ್ನಡೆಗೆ ತಳ್ಳಲಿಲ್ಲ ಬದಲಾಗಿ ಆಕೆಗೆ ಹೊಸ ಕಿಚ್ಚು ಹಚ್ಚಿತ್ತು.

Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ
ಕಲ್ಪನಾ ಸರೋಜ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2023 | 6:51 PM

ಇವತ್ತು ದೊಡ್ಡ ಉದ್ಯಮಿಗಳಾಗಿರುವವರು (Big entrepreneurs) ಸಿರಿವಂತ ಕುಟುಂಬದ ಹಿನ್ನೆಲೆ, ಕೌಟುಂಬಿಕ ವ್ಯವಹಾರದ ಹಿನ್ನೆಲೆ ಇದ್ದವರೇ ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇವರ ಮಧ್ಯೆ ಸ್ವಂತ ಪರಿಶ್ರಮದಿಂದ, ಕಷ್ಟಪಟ್ಟು ತಳಮಟ್ಟದಿಂದ ಮೇಲೆ ಬಂದು ಉದ್ಯಮಿಗಳಾದವರೂ (Rag to Riches) ಕೆಲವರಿದ್ದಾರೆ. ಇವರ ಪೈಕಿ ಕಲ್ಪನಾ ಸರೋಜ್ (Kalpana Saroj) ಬಹಳ ಎದ್ದುಗಾಣುತ್ತಾರೆ. ಜಾತಿ ಬಲ, ಹಣಬಲ, ಕುಟುಂಬ ಬಲ, ಲಿಂಗ ಬಲ್ಲ ಇವ್ಯಾವುದೂ ಇಲ್ಲದಿದ್ದರೂ ತಮ್ಮ ಸ್ವಂತಬಲ ನೆಚ್ಚಿಕೊಂಡು ಇವತ್ತು ಕಲ್ಪನಾ ಸರೋಜ್ ಅವರು ಕಮಾನಿ ಟ್ಯೂಬ್ಸ್ ಸೇರಿದಂತೆ ಏಳು ಕಂಪನಿಗಳ ಒಡತೆಯಾಗಿದ್ದಾರೆ. ಇವರ ಜೀವನ ಎಲ್ಲರಿಗೂ ದಾರಿದೀಪದಂತಿದೆ (Inspiring story).

ಬಡತನದ ಕುಟುಂಬ, ಬಲವಂತದ ಬಾಲ್ಯವಿವಾಹ, ಸ್ಲಂನಲ್ಲಿ ವಾಸ, ಗಂಡನ ಮನೆಯಲ್ಲಿ ಕಿರುಕುಳ, ಗ್ರಾಮಸ್ಥರಿಂದಲೂ ತಿರಸ್ಕಾರ, ಸಾವಿನ ಆಲೋಚನೆ, ಇವಿಷ್ಟೂ ಯಾರದ್ದಾದರೂ ಬದುಕಿನಲ್ಲಿ ಆಗಿದ್ದರೆ ಜೀವ ಸವೆಸಿದವರೆ ಸಾಕೆಂದು ಕುಸಿದುಹೋಗುತ್ತಿದ್ದರು. ಕಲ್ಪನಾ ಸರೋಜ್ ಅವರನ್ನು ಇವ್ಯಾವುವೂ ಕೂಡ ಹಿನ್ನಡೆಗೆ ತಳ್ಳಲಿಲ್ಲ ಬದಲಾಗಿ ಆಕೆಗೆ ಹೊಸ ಕಿಚ್ಚು ಹಚ್ಚಿತ್ತು.

ಇದನ್ನೂ ಓದಿ: Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ

ಕಲ್ಪನಾ ಸರೋಜ್ ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ 1961ರಲ್ಲಿ ಜನಿಸಿದವರು. ಇವರ ತಂದೆ ಪೊಲೀಸ್ ಕಾನ್ಸ್​ಟೆಬಲ್ ಆಗಿದ್ದರು. 12ನೇ ವಯಸ್ಸಿನಲ್ಲಿ ಇವರನ್ನು ಮದುವೆ ಮಾಡಿ ಕಳುಹಿಸಲಾಯಿತು. ಮುಂಬೈನ ಸ್ಲಂನಲ್ಲಿ ಗಂಡ ಮನೆಯಲ್ಲಿ ಈಕೆ ಸಂಸಾರ ಶುರು ಮಾಡಿದರು. ಅಷ್ಟೇ ಆಗಿದ್ದರೆ ಜೀವನ ಹಾಗೇ ನಡೆದುಹೋಗುತ್ತಿತ್ತು. ಗಂಡನ ಮನೆಯಲ್ಲಿ ನಿರಂತರ ಶೋಷಣೆಗೊಳಗಾದರು. ದೀರ್ಘಕಾಲ ಕಿರುಕುಳ ಅನುಭವಿಸಿದರು.

ಅದೆಲ್ಲವನ್ನೂ ಸಹಿಸಿಕೊಂಡು ಕಲ್ಪನಾ ಸರೋಜ್ ಜೀವನದಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಏರತೊಡಗಿದರು. ಕೆಎಸ್ ಫಿಲಂ ಪ್ರೊಡಕ್ಷನ್ ಎಂಬ ಕಂಪನಿ ಆರಂಭಿಸಿದರು. ಇದು ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳ ಬಿಡುಗಡೆ ಮಾಡುತ್ತಿದ್ದ ಕಂಪನಿ. ಅದಾದ ಬಳಿಕ ರಿಯಲ್ ಎಸ್ಟೇಟ್ ಬಿಸಿನೆಸ್​ಗೆ ಇಳಿದರು. ಈ ಸಂದರ್ಭದಲ್ಲಿ ಕಮಾನಿ ಟ್ಯೂಬ್ಸ್ ಕಂಪನಿಯ ಚುಕ್ಕಾಣಿ ಹಿಡಿದರು. ತಳಹಿಡಿದು ಹೋಗಿದ್ದ ಕಂಪನಿಗೆ ಕಲ್ಪನಾ ಮರುಜೀವ ಕೊಟ್ಟರು.

ಇದನ್ನೂ ಓದಿ: ದುಡ್ಡು ಮಾಡಲು ಹೋಗಿ 50 ಬಾರಿ ಕೈಸುಟ್ಟುಕೊಂಡವನ ಕೈಹಿಡಿಯಿತು ನಾಟಿಕೋಳಿಮೊಟ್ಟೆ; ಇದು ವೈಟಲ್ ಫಾರ್ಮ್ಸ್ ಕಥೆ..!

ಇವತ್ತು ಕಲ್ಪನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥೆಯ ಅಡಿಯಲ್ಲಿ ಏಳು ಕಂಪನಿಗಳಿವೆ. ಈಕೆಯ ಸಂಪತ್ತು 1,000 ಕೋಟಿ ರೂಗೂ ಹೆಚ್ಚು ಇದೆ. ಫಿಲಂ ಪ್ರೊಡಕ್ಷನ್​ನಿಂದ ಹಿಡಿದು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದವರೆಗೆ ಇವರ ಬಿಸಿನೆಸ್ ಹರಡಿದೆ.

ಕಲ್ಪನಾ ಸರೋಜ್ ಒಬ್ಬ ಗಟ್ಟಿಗಿತ್ತಿ ಮಹಿಳೆಗೆ ರೋಲ್ ಮಾಡೆಲ್ ಆಗಿದ್ದಾರೆ. ಭಾರತದ ಮೊದಲ ಸರ್ವ ಮಹಿಳೆಯರ ಬ್ಯಾಂಕ್ ಎನಿಸಿದ ಭಾರತೀಯ ಮಹಿಳಾ ಬ್ಯಾಂಕ್​ಗೆ ಒಮ್ಮೆ ಡೈರೆಕ್ಟರ್ ಕೂಡ ಆಗಿದ್ದವರು. ಹಲವು ಅಂತಾರಾಷ್ಟ್ರೀಯ ದಲಿತ ಸಮ್ಮೇಳನ, ಬೌದ್ಧ ಸಮ್ಮೇಳನಗಳಲ್ಲಿ ಭಾರತವನ್ನು ಇವರು ಪ್ರತಿನಿಧಿಸಿದ್ದಾರೆ. ವಿವಿಧ ಸರ್ಕಾರಗಳಿಂದ ಸಾಕಷ್ಟು ಸನ್ಮಾನ, ಪ್ರಶಸ್ತಿಗಳು ಸಿಕ್ಕಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ