Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ

Dream11 Co-founder Harsh Jain: ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆದ ಡ್ರೀಮ್11 ಇವತ್ತು 64,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಆದರೆ, ಈ ವ್ಯವಹಾರದ ಆರಂಭಿಕ ತೊಡರುಗಳು ಅಷ್ಟಿಷ್ಟಲ್ಲ. ಹರ್ಷ್ ಜೈನ್ ಮತ್ತು ಭವಿತ್ ಶುರು ಮಾಡಿದ ಈ ಯಶಸ್ವಿ ಉದ್ಯಮದ ಹಿಂದಿನ ಕೆಲ ಶ್ರಮಗಳು ಮತ್ತು ಹತಾಶೆಗಳನ್ನು ಸ್ಮರಿಸಬಹುದು. ಆ ಕಷ್ಟಗಳ ಬಗ್ಗೆ ಹರ್ಷ್ ಜೈನ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ.

Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ
ಹರ್ಷ್ ಜೈನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 1:39 PM

ನೀವು ಪಠ್ಯಪುಸ್ತಕಗಳಲ್ಲಿ ಈ ದಂತಕಥೆ ಓದಿರಬಹುದು. ಶತಮಾನಗಳ ಹಿಂದೆ ಸ್ಕಾಟ್ಲೆಂಡ್ ದೊರೆ ರಾಬರ್ಟ್ ದಿ ಬ್ರೂಸ್ (Robert The Bruce) ಅವರು ಇಂಗ್ಲೆಂಡ್ ರಾಜನೊಂದಿಗೆ ಆರು ಬಾರಿ ಯುದ್ದ ಮಾಡಿ ಸೋತುಹೋಗಿದ್ದ. ಕೊನೆಗೆ ಗುಹೆಯಲ್ಲಿ ಅಡಗಿಕೊಳ್ಳಬೇಕಾಯಿತು. ಅಲ್ಲಿ ಜೇಡವೊಂದು ಬಲೆ (story of spider weaving web) ಕಟ್ಟುತ್ತಿರುವುದನ್ನು ನೋಡಿದ. ಬಲೆ ಕಟ್ಟುವ ಕಾರ್ಯದಲ್ಲಿ ಆರು ಬಾರಿ ವಿಫಲವಾಗಿತ್ತು. ಆದರೂ ಅದು ಪ್ರಯತ್ನ ನಿಲ್ಲಿಸಲಿಲ್ಲ. ಏಳನೇ ಬಾರಿ ಅದು ಯಶಸ್ವಿಯಾಯಿತು. ಇದನ್ನು ಕಂಡ ರಾಬರ್ಟ್ ಬ್ರೂಸ್ ಜಾಗೃತಗೊಂಡು ಹೊಸ ಹುಮ್ಮಸ್ಸಿನಲ್ಲಿ ಯುದ್ಧಕ್ಕೆ ಹೋಗಿ ಗೆದ್ದನಂತೆ. ಇಂಗ್ಲೀಷ್​ನಲ್ಲಿ ನೆವರ್ ಗಿವ್ ಅಪ್ ಎನ್ನುವುದಕ್ಕೆ ಇಂಥ ಘಟನೆಗಳು ನಿದರ್ಶನ. ಇವತ್ತಿನ ಉದ್ಯಮಸಾಹಸಗಳಿಗೆ ಇದು ಖಂಡಿತವಾಗಿ ಅನ್ವಯ ಆಗುತ್ತದೆ. ಡ್ರೀಮ್ ಇಲವೆನ್ ಸಂಸ್ಥೆಯ ಸಂಸ್ಥಾಪಕ ಹರ್ಷ್ ಜೈನ್ (Inspiring story of Dream11 co-founder Harsh Jain) ಅವರ ಕಥೆಯೂ ಉಲ್ಲೇಖನೀಯ.

ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆದ ಡ್ರೀಮ್11 ಇವತ್ತು 64,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಆದರೆ, ಈ ವ್ಯವಹಾರದ ಆರಂಭಿಕ ತೊಡರುಗಳು ಅಷ್ಟಿಷ್ಟಲ್ಲ. ಹರ್ಷ್ ಜೈನ್ ಮತ್ತು ಭವಿತ್ ಶುರು ಮಾಡಿದ ಈ ಯಶಸ್ವಿ ಉದ್ಯಮದ ಹಿಂದಿನ ಕೆಲ ಶ್ರಮಗಳು ಮತ್ತು ಹತಾಶೆಗಳನ್ನು ಸ್ಮರಿಸಬಹುದು. ಆ ಕಷ್ಟಗಳ ಬಗ್ಗೆ ಹರ್ಷ್ ಜೈನ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ.

ಇದನ್ನೂ ಓದಿ: ದುಡ್ಡು ಮಾಡಲು ಹೋಗಿ 50 ಬಾರಿ ಕೈಸುಟ್ಟುಕೊಂಡವನ ಕೈಹಿಡಿಯಿತು ನಾಟಿಕೋಳಿಮೊಟ್ಟೆ; ಇದು ವೈಟಲ್ ಫಾರ್ಮ್ಸ್ ಕಥೆ..!

ನೀವು ಪ್ರಾರಂಭಿಸಿದ ಹೊಸ ಬಿಸಿನೆಸ್​ಗೆ ಬಂಡವಾಳ ಪಡೆಯಲು ಯಾರಾದರೂ ಬಳಿ ಹೋಗುತ್ತೀರಿ. ಯಾರೂ ಕೊಡಲು ಮುಂದೆ ಬರದಿದ್ದರೆ? ಹತಾಶರಾಗುವುದು ಹೌದು. ಹತ್ತು, ಇಪ್ಪತ್ತು ಮಂದಿಯನ್ನು ಹಣ ಕೇಳಿ ಇಲ್ಲ ಎನಿಸಿಕೊಂಡಾಗ ಈ ಬಿಸಿನೆಸ್ ಸಹವಾಸ ಸಾಕಪ್ಪ ಎಂದುಬಿಡುತ್ತೇವೆ. ಆದರೆ, ಹರ್ಷ್ ಜೈನ್ ಬಹಳ ಸಂಯಮ ತೋರಿದರು. ಅವರ ಡ್ರೀಮ್11 ಬಿಸಿನೆಸ್ ಮಾಡೆಲ್ ಕೇಳಿ ಬಂಡವಾಳ ಕೊಡಲು 150 ಸಂಸ್ಥೆಗಳು ನಿರಾಕರಿಸಿದವು.

ಹರ್ಷ್ ಜೈನ್ ಮೈಕ್ರೋಸಾಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಸ್ನೇಹಿತ ಭವಿತ್ ಶೇಠ್ ಜೊತೆ ಸೇರಿ ಡ್ರೀಮ್11 ಕನಸು ಶುರು ಮಾಡಿದ್ದರು. 2008ರಲ್ಲಿ ಐಪಿಎಲ್ ಸೀಸನ್ ವೇಳೆ ಡ್ರೀಮ್11 ಆರಂಭವಾಯಿತು. ಆ ಕಂಪನಿಗೆ ಹಣ ಕ್ರೋಢೀಕರಿಸಲು ಎರಡು ವರ್ಷ ಸತತವಾಗಿ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಇವರ ಫ್ಯಾಂಟಸಿ ಸ್ಪೋರ್ಟ್ಸ್ ಬಿಸಿನೆಸ್​ಗೆ ಹಣ ಕೊಡಲು ಯಾರೂ ಮುಂದೆ ಬರಲಿಲ್ಲ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

ಆದರೂ ಕೂಡ ಹರ್ಷ್ ಜೈನ್ ಮತ್ತು ಭವಿತ್ ಶೇಠ್ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಅವರ ಡ್ರೀಮ್ ಇಲವೆನ್ ವೆಬ್​ಸೈಟ್ ನಿಧಾನವಾಗಿ ಜನಪ್ರಿಯವಾಗತೊಡಗಿತು. ಆರು ವರ್ಷದ ಬಳಿಕ, ಅಂದರೆ 2014ರಲ್ಲಿ ವೆಬ್​ಸೈಟ್ ಯೂಸರ್​ಗಳ ಸಂಖ್ಯೆ 10 ಲಕ್ಷಕ್ಕೆ ಏರಿತು. ಈಗ ಇದನ್ನು ಗಂಭೀರ ಬಿಸಿನೆಸ್ ಎಂದು ಪರಿಗಣಿತವಾಯಿತು. 2019ರಲ್ಲಿ ಯೂಸರ್ಸ್ ಸಂಖ್ಯೆ 20 ಕೋಟಿ ಮುಟ್ಟಿತು. ಇವತ್ತು ಯೂನಿಕಾರ್ನ್ ಕಂಪನಿಯಾಗಿ ಬೆಳೆದಿದೆ. ಟೀಮ್ ಇಂಡಿಯಾ ಜರ್ಸಿಯ ಸ್ಪಾನ್ಸರ್ ಹಕ್ಕು ಪಡೆಯುವ ಮಟ್ಟಕ್ಕೆ ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ