ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?

Post Office Monthly Income Scheme: ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.4ರಷ್ಟಿದೆ. ಗರಿಷ್ಠ 9,250 ರೂವರೆಗೆ ಮಾಸಿಕ ಆದಾಯ ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿ 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಜಂಟಿಯಾಗಿ ಯೋಜನೆ ಪಡೆಯುವುದಾದರೆ 15 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ನೀವು ಜಂಟಿ ಖಾತೆ ಸೃಷ್ಟಿಸಿ 15 ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 1.11 ಲಕ್ಷ ರೂ ಮೊತ್ತದಷ್ಟು ಬಡ್ಡಿಯೇ ಸಿಗುತ್ತದೆ. ತಿಂಗಳಿಗೆ 9,250 ರೂ ಅನ್ನು ಪಿಂಚಣಿ ರೀತಿಯಲ್ಲಿ ಪಡೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?
ಅಂಚೆ ಕಚೇರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 10:43 AM

ಪೋಸ್ಟ್ ಆಫೀಸ್​ನಲ್ಲಿ ಹಲವು ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿವೆ. ಇವೆಲ್ಲವೂ ಸರ್ಕಾರಿ ಬೆಂಬಲಿತ ಸ್ಕೀಮ್​ಗಳಾದ್ದರಿಂದ ವಿಶ್ವಾಸಾರ್ಹ ಮತ್ತು ಸುರಕ್ಷಿತ ಎನಿಸಿವೆ. ಕೆಲ ಸ್ಕೀಮ್​ಗಳು ಅಲ್ಪಕಾಲದ ಹೂಡಿಕೆಗೆಂದು ಇವೆ. ಇನ್ನೂ ಕೆಲವು ದೀರ್ಘಕಾಲದ ಹೂಡಿಕೆಗೆ ಹೇಳಿ ಮಾಡಿಸಿದ್ದಿವೆ. ಈ ಮಧ್ಯೆ ಮಾಸಿಕ ಆದಾಯ ಸೃಷ್ಟಿಸುವ ಒಂದು ಸ್ಕೀಮ್ ಅನ್ನು ಇಲ್ಲಿ ಗಮನಿಸಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಥವಾ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income scheme) ಇದು. ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಒಮ್ಮೆಗೇ ಹಣ ಠೇವಣಿ ಇಟ್ಟು, ನಿಗದಿತ ವರ್ಷಗಳ ಬಳಿಕ ನಿಗದಿತ ಮಾಸಿಕ ಆದಾಯ ತರುತ್ತದೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.4ರಷ್ಟಿದೆ. ಗರಿಷ್ಠ 9,250 ರೂವರೆಗೆ ಮಾಸಿಕ ಆದಾಯ ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿ 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಜಂಟಿಯಾಗಿ ಯೋಜನೆ ಪಡೆಯುವುದಾದರೆ 15 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.

ನೀವು ಜಂಟಿ ಖಾತೆ ಸೃಷ್ಟಿಸಿ 15 ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 1.11 ಲಕ್ಷ ರೂ ಮೊತ್ತದಷ್ಟು ಬಡ್ಡಿಯೇ ಸಿಗುತ್ತದೆ. ತಿಂಗಳಿಗೆ 9,250 ರೂ ಅನ್ನು ಪಿಂಚಣಿ ರೀತಿಯಲ್ಲಿ ಪಡೆಯಬಹುದು. ಆದರೆ, ಸಿಂಗಲ್ ಅಕೌಂಟ್ ಆದರೆ ಒಬ್ಬ ವ್ಯಕ್ತಿ ಗರಿಷ್ಠ 9 ಲಕ್ಷ ರೂ ಹೂಡಿಕೆ ಮಾಡಬಹುದು. ಆಗ ಒಂದು ವರ್ಷದ ಬಡ್ಡಿಮೊತ್ತ 66,600 ರೂ ಆಗುತ್ತದೆ. ತಿಂಗಳಿಗೆ 5,550 ರೂ ಆದಾಯ ಸಿಗುತ್ತದೆ.

ಇದನ್ನೂ ಓದಿ: ಪಿಎಂಜೆಡಿವೈ ಅಡಿಯ ಬ್ಯಾಂಕ್ ಖಾತೆಗಳು; ಯಾತಕ್ಕಾಗಿ ಈ ಯೋಜನೆ? ಪ್ರಯೋಜನಗಳೇನು?

ಪೋಸ್ಟ್ ಆಫೀಸ್ ಮಾಸಿಕ ಪಿಂಚಣಿ ಯೋಜನೆ:  5,00,000 ರೂ ಠೇವಣಿ ಇಟ್ಟರೆ?

ಒಂದು ವೇಳೆ ನೀವು ಈ ಮಾಸಿಕ ಆದಾಯ ಯೋಜನೆಯಲ್ಲಿ 5 ಲಕ್ಷ ರೂ ಹಣವನ್ನು ಠೇವಣಿ ಇಟ್ಟರೆ, ಸುಮಾರು 3,000 ರೂನಷ್ಟು ಮಾಸಿಕ ಆದಾಯ ಸಿಗುತ್ತದೆ.

ಎಷ್ಟು ಅವಧಿಯವರೆಗೆ ಈ ಪೋಸ್ಟ್ ಆಫೀಸ್ ಯೋಜನೆ?

ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ 5 ವರ್ಷದ ಅವಧಿಯದ್ದಾಗಿರುತ್ತದೆ. ಇದರಲ್ಲಿ ಸಿಗುವ ಬಡ್ಡಿ ಹಣವನ್ನು ಪ್ರತೀ ತಿಂಗಳು ಗ್ರಾಹಕರಿಗೆ ಕೊಡಲಾಗುತ್ತದೆ. ಐದು ವರ್ಷದ ಮೆಚ್ಯೂರಿಟಿ ಬಳಿಕ ನಿಮ್ಮ ಠೇವಣಿ ಹಿಂಪಡೆಯಬಹುದು. ನಿಮಗೆ ಬೇಕೆಂದರೆ ಇನ್ನೂ 5 ವರ್ಷ ಈ ಸ್ಕೀಮ್ ಮುಂದುವರಿಸಬಹುದು.

ಇದನ್ನೂ ಓದಿ: ಜಂಟಿಯಾಗಿ ಗೃಹಸಾಲ ಪಡೆಯಬಹುದಾ? ಅನುಕೂಲ, ಅನನುಕೂಲಗಳೇನು? ಇಲ್ಲಿದೆ ಡೀಟೇಲ್ಸ್

ಒಂದು ವೇಳೆ, ಮೆಚ್ಯುರಿಟಿಗೆ ಮುನ್ನವೇ, ಅಂದರೆ 5 ವರ್ಷಕ್ಕಿಂತ ಮುಂಚಿತವಾಗಿ ಠೇವಣಿ ಹಿಂಪಡೆಯಬೇಕೆಂದರೆ ಅದಕ್ಕೂ ಅವಕಾಶ ಇರುತ್ತದೆ. ಆದರೆ, ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಠೇವಣಿ ಇಟ್ಟು ಕನಿಷ್ಠ 1 ವರ್ಷದವರೆಗೆ ಹಿಂಪಡೆಯಲು ಆಗುವುದಿಲ್ಲ. ಒಂದರಿಂದ ಮೂರು ವರ್ಷದೊಳಗೆ ಠೇವಣಿ ಹಿಂಪಡೆದರೆ ಶೇ. 2ರಷ್ಟು ಶುಲ್ಕ ಮುರಿದುಕೊಳ್ಳಲಾಗುತ್ತದೆ. ಅಂದರೆ, ನೀವು 10 ಲಕ್ಷ ರೂ ಠೇವಣಿ ಇಟ್ಟಿದ್ದು 3 ವರ್ಷದೊಳಗೆ ಸ್ಕೀಮ್ ಅನ್ನು ರದ್ದು ಮಾಡಿದರೆ 20,000 ರೂ ಶುಲ್ಕ ಪಾವತಿಸಬೇಕು. ಮೂರು ವರ್ಷ ಬಳಿಕ ಮತ್ತು 5 ವರ್ಷಕ್ಕೆ ಮುಂಚಿತವಾಗಿ ಠೇವಣಿ ಹಿಂಪಡೆದರೆ ಶೇ. 1ರಷ್ಟು ಶುಲ್ಕ ಕಟ್ಟಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ