ಬಾಪ್ ಆಫ್ ಚಾರ್ಟ್: ಷೇರುಮಾರುಕಟ್ಟೆಯ ಕಿಂಗ್ ಮೇಕರ್ ಆಗುತ್ತೇನೆಂದು ಜನರಿಗೆ ಮಂಕುಬೂದಿ ಹಾಕಿರುವ ನಸೀರ್ ಅನ್ಸಾರಿ ಕಥೆ ಕೇಳಿ..!

Baap of Chart and Share Market: ನಸೀರ್ ಅನ್ಸಾರಿ ತನ್ನ ಬಾಪ್ ಆಫ್ ಚಾರ್ಟ್ ಯೂಟ್ಯೂಬ್ ಚಾನಲ್​ನಲ್ಲಿ ಷೇರು ಟ್ರೆಡಿಂಗ್ ಕುರಿತು ಟಿಪ್ಸ್ ಕೊಡುತ್ತಿರುತ್ತಾನೆ. 1 ಲಕ್ಷ ಬಂಡವಾಳ ಇಟ್ಟುಕೊಂಡು 10 ಕೋಟಿ ರೂ ಲಾಭ ಮಾಡುವುದು ಹೇಗೆ; ತಿಂಗಳಿಗೆ ಐದರಿಂದ ಹತ್ತು ಲಕ್ಷ ರೂ ಆದಾಯ ಮಾಡುವುದು ಹೇಗೆ, ಹೀಗೆ ಜನರನ್ನು ಬಹಳ ಬೇಗ ಆಕರ್ಷಿಸುವ ವಿಷಯದ ಕುರಿತು ವಿಡಿಯೋ ಮಾಡಿದ್ದಾನೆ. ಒಂದು ದಿನದಲ್ಲಿ ತಾನು ಎರಡು ಕೋಟಿ ರೂ ಹೇಗೆ ಮಾಡಿದೆ ಎಂದು ಟಿಪ್ಸ್ ಕೊಡುತ್ತಾನೆ.

ಬಾಪ್ ಆಫ್ ಚಾರ್ಟ್: ಷೇರುಮಾರುಕಟ್ಟೆಯ ಕಿಂಗ್ ಮೇಕರ್ ಆಗುತ್ತೇನೆಂದು ಜನರಿಗೆ ಮಂಕುಬೂದಿ ಹಾಕಿರುವ ನಸೀರ್ ಅನ್ಸಾರಿ ಕಥೆ ಕೇಳಿ..!
ನಸೀರ್ ಅನ್ಸಾರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 5:49 PM

ನವದೆಹಲಿ, ಅಕ್ಟೋಬರ್ 26: ಇವರ ಖುದ್ದಾಗಿ ಷೇರುವಹಿವಾಟು ನಡೆಸಿ ಕೋಟಿಗಟ್ಟಲೆ ಹಣ ಕಳೆದುಕೊಂಡವ… ಆದರೆ, ದಿಢೀರ್ ಆಗಿ ಕೋಟಿಕೋಟಿ ಹಣ ಸಂಪಾದಿಸುವುದು ಹೇಗೆ ಎಂದು ಜನರಿಗೆ ಟಿಪ್ಸ್ ಕೊಡುತ್ತಾನೆ. ಅಷ್ಟೇ ಅಲ್ಲ, ಆನ್ಲೈನ್ ತರಬೇತಿಗಳನ್ನೂ ನೀಡುತ್ತಾನೆ. ಹೀಗೆ ಮಾಡುತ್ತಾ 17 ಕೋಟಿ ರೂ ಕೂಡ ಸಂಪಾದಿಸಿದ್ದಾನೆ. ಇದೀಗ ಈತನಿಗೆ ಟ್ರೇಡಿಂಗ್ (share trading) ಮಾಡದಂತೆ ನಿಷೇಧಿಸಲಾಗಿದೆ. ಜನರಿಂದ ಈತ ಪಡೆದಿದ್ದ 17 ಕೋಟಿ ರೂ ಹಣವನ್ನು ಎಸ್​ಕ್ರೋ ಖಾತೆಗೆ ವರ್ಗಾಯಿಸಲಾಗಿದೆ. ಈ ವ್ಯಕ್ತಿಯ ಹೆಸರು ನಸೀರ್ ಅನ್ಸಾರಿ. ಬಾಪ್ ಅಫ್ ಚಾರ್ಟ್ ಹೆಸರಿನಲ್ಲಿ ಈತನ ನಡೆಸುವ ಯೂಟ್ಯೂಬ್ ಚಾನಲ್​ಗೆ ಹೆಚ್ಚೂಕಡಿಮೆ ನಾಲ್ಕೂವರೆ ಲಕ್ಷದಷ್ಟು ಸಬ್​ಸ್ಕ್ರೈಬರ್​ಗಳಿದ್ದಾರೆ.

ನಸೀರ್ ಅನ್ಸಾರಿ ತನ್ನ ಬಾಪ್ ಆಫ್ ಚಾರ್ಟ್ ಯೂಟ್ಯೂಬ್ ಚಾನಲ್​ನಲ್ಲಿ ಷೇರು ಟ್ರೆಡಿಂಗ್ ಕುರಿತು ಟಿಪ್ಸ್ ಕೊಡುತ್ತಿರುತ್ತಾನೆ. 1 ಲಕ್ಷ ಬಂಡವಾಳ ಇಟ್ಟುಕೊಂಡು 10 ಕೋಟಿ ರೂ ಲಾಭ ಮಾಡುವುದು ಹೇಗೆ; ತಿಂಗಳಿಗೆ ಐದರಿಂದ ಹತ್ತು ಲಕ್ಷ ರೂ ಆದಾಯ ಮಾಡುವುದು ಹೇಗೆ, ಹೀಗೆ ಜನರನ್ನು ಬಹಳ ಬೇಗ ಆಕರ್ಷಿಸುವ ವಿಷಯದ ಕುರಿತು ವಿಡಿಯೋ ಮಾಡಿದ್ದಾನೆ. ಒಂದು ದಿನದಲ್ಲಿ ತಾನು ಎರಡು ಕೋಟಿ ರೂ ಹೇಗೆ ಮಾಡಿದೆ ಎಂದು ಟಿಪ್ಸ್ ಕೊಡುತ್ತಾನೆ. ಇದಕ್ಕಿಂತ ಹೆಚ್ಚಾಗಿ ನಸೀರ್ ಅನ್ಸಾರಿ ಷೇರು ಟ್ರೇಡಿಂಗ್ ಕುರಿತು ಆನ್ಲೈನ್ ಕೋರ್ಸ್ ಕೂಡ ಆಫರ್ ಮಾಡುತ್ತಾನೆ.

ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ

ಈ ಕೋರ್ಸ್​ಗೆ ಹಣ ಕೊಟ್ಟು ಸೇರಿದಂತೆ ತಿಂಗಳಿಗೆ ಕನಿಷ್ಠ 3 ಲಕ್ಷ ರೂ ರಿಟರ್ನ್ ಸಿಗುವಂತೆ ಮಾಡುತ್ತೇನೆ. ಲೈವ್ ಟ್ರೇಡಿಂಗ್​ ವಿಚಾರದಲ್ಲಿ ಮಾರ್ಗದರ್ಶನ ನೀಡುವುದಾಗಿ ಜನರಿಗೆ ಭರವಸೆ ನೀಡುತ್ತಾನೆ. ಬಹಳಷ್ಟು ಜನರು ಲಾಭದ ಆಸೆಗೆ ಬಿದ್ದು ಈತನ ಕೋರ್ಸ್ ಖರೀದಿಸಿದ್ದಾರೆ. ಆದರೆ, ಭರವಸೆ ನೀಡಿದಂತೆ ಲಾಭ ತರುತ್ತಿಲ್ಲದಿರುವುದು ಗೊತ್ತಾಗಿ ಈತನ ವಿರುದ್ಧ ಸೆಬಿಗೆ ದೂರು ಕೊಟ್ಟಿದ್ದಾರೆ.

ಸೆಬಿಯಿಂದ ನಿಷೇಧ…!

ಷೇರು ಟ್ರೇಡಿಂಗ್ ಬಗ್ಗೆ ಮತ್ತು ಷೇರುಗಳನ್ನು ಖರೀದಿಸುವ ಬಗ್ಗೆ ಸೆಬಿ ಅನುಮೋದಿತ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮಾತ್ರ ಸಲಹೆ ಅಥವಾ ಶಿಫಾರಸು ನೀಡಬಹುದು. ನಸೀರ್ ಅನ್ಸಾರಿ ಅಕ್ರಮವಾಗಿ ಶಿಫಾರಸುಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಟ್ರೇಡಿಂಗ್ ಮಾಡದಂತೆ ಈತನನ್ನು ನಿಷೇಧಿಸಲಾಗಿದೆ. ಆನ್ಲೈನ್ ಕೋರ್ಸ್ ಹೆಸರಿನಲ್ಲಿ ಪಡೆದಿದ್ದ 17.20 ಕೋಟಿ ರೂ ಹಣವನ್ನು ಎಸ್​ಕ್ರೋ ಅಕೌಂಟ್​ನಲ್ಲಿ ಹಾಕಲಾಗಿದೆ.

ಇದನ್ನೂ ಓದಿ: ವನ್ಯಜೀವಿ ಕಳ್ಳಸಾಗಾಣಿಕೆ ಭಾರೀ ದೊಡ್ಡ ಬಿಸಿನೆಸ್; ವರ್ಷದಲ್ಲಿ ಎಷ್ಟು ಅಕ್ರಮ ಟ್ರೇಡಿಂಗ್ ನಡೆಯುತ್ತೆ ಗೊತ್ತಾ?

ಕುತೂಹಲದ ಸಂಗತಿ ಎಂದರೆ, ಕಳೆದ ಎರಡೂವರೆ ವರ್ಷದಲ್ಲಿ ನಸೀರ್ ಅನ್ಸಾರಿ ಷೇರು ಮಾರುಕಟ್ಟೆಯಲ ಟ್ರೇಡಿಂಗ್​ನಲ್ಲಿ ಹೆಚ್ಚೂಕಡಿಮೆ 3 ಕೋಟಿ ರೂನಷ್ಟು ನಷ್ಟ ಮಾಡಿಕೊಂಡಿದ್ದಾನಂತೆ. ಈ ವಿಷಯವನ್ನು ಜನರಿಂದ ಮುಚ್ಚಿಟ್ಟು, ತಾನು ದಿನಕ್ಕೆ ಕೋಟಿಗಟ್ಟಲೆ ಹಣ ಹೇಗೆ ಸಂಪಾದಿಸಿದೆ ಎಂಬೆಲ್ಲಾ ಸುಳ್ಳು ಕಥೆಗಳನ್ನು ಹಬ್ಬಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಈತನ ಒಂದಷ್ಟು ವಿಡಿಯೋಗಳ ಲಿಂಕ್ ಇಲ್ಲಿವೆ…

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ