Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ

Explainer on Calculating Tax In Property Sale: ನೀವು ಚಿರಾಸ್ತಿ ಖರೀದಿಸಿ ಮೂರು ವರ್ಷದೊಳಗೆ ಮಾರಿ ಗಳಿಸುವ ಲಾಭಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ ಅನ್ವಯ ಆಗುತ್ತದೆ. ಮೂರು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಎನಿಸುತ್ತದೆ. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ಗೆ ನಿಮ್ಮ ಆದಾಯ ತೆರಿಗೆಯ ದರ ಅನ್ವಯ ಆಗುತ್ತದೆ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್​ಗೆ ಶೇ. 20ರಷ್ಟು ತೆರಿಗೆ ಅನ್ವಯ ಆಗುತ್ತದೆ. ಇದು ಲಾಭಕ್ಕೆ ವಿಧಿಸಲಾಗುವ ತೆರಿಗೆ. ಆದರೆ, ಎಷ್ಟು ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಎಂಬುದನ್ನು ನಿರ್ಧರಿಸಲು ಪ್ರತ್ಯೇಕ ಸೂತ್ರ ಇದೆ.

Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ
ಮನೆ ಮಾರಾಟ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 12:17 PM

ಬಹಳಷ್ಟು ಜನರು ಮನೆ ಅಥವಾ ನಿವೇಶನವನ್ನು ಹೂಡಿಕೆಗಾಗಿ ಖರೀದಿಸುವುದುಂಟು. ಬೆಂಗಳೂರು ಮಾತ್ರವಲ್ಲ ಬಹಳ ಪಟ್ಟಣಗಳಲ್ಲಿ ಭೂಮಿಗೆ ಬಹಳ ಬೆಲೆಯುಂಟು. ಇವತ್ತು ಇದ್ದ ಬೆಲೆ ನಾಲ್ಕೈದು ವರ್ಷದಲ್ಲಿ ಎರಡು ಪಟ್ಟಾದರೂ ಹೆಚ್ಚಾಗಿರುತ್ತದೆ. ಒಳ್ಳೆಯ ಲಾಭಕ್ಕೆ ಚಿರಾಸ್ತಿ (immovable property) ಮಾರಿದರೆ ತೆರಿಗೆ ಪಾವತಿಸಬೇಕಾಗುತ್ತದೆ. ಆಸ್ತಿ ಮಾರಾಟದಿಂದ ಗಳಿಸಿದ ಲಾಭಕ್ಕೆ ಕ್ಯಾಪಿಟಲ್ ಗೇಯ್ನ್ಸ್ ಟ್ಯಾಕ್ಸ್ (ಲಾಭ ತೆರಿಗೆ) ನಿಗದಿ ಮಾಡಲಾಗಿದೆ. ಅದರಲ್ಲಿ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ (capital gain tax) ಎಂದು ಎರಡು ವಿಧ ಇರುತ್ತದೆ.

ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಹೇಗೆ?

ನೀವು ಚಿರಾಸ್ತಿ ಖರೀದಿಸಿ ಮೂರು ವರ್ಷದೊಳಗೆ ಮಾರಿ ಗಳಿಸುವ ಲಾಭಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ ಅನ್ವಯ ಆಗುತ್ತದೆ. ಮೂರು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಎನಿಸುತ್ತದೆ.

ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ಗೆ ನಿಮ್ಮ ಆದಾಯ ತೆರಿಗೆಯ ದರ ಅನ್ವಯ ಆಗುತ್ತದೆ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್​ಗೆ ಶೇ. 20ರಷ್ಟು ತೆರಿಗೆ ಅನ್ವಯ ಆಗುತ್ತದೆ. ಇದು ಲಾಭಕ್ಕೆ ವಿಧಿಸಲಾಗುವ ತೆರಿಗೆ. ಆದರೆ, ಎಷ್ಟು ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಎಂಬುದನ್ನು ನಿರ್ಧರಿಸಲು ಪ್ರತ್ಯೇಕ ಸೂತ್ರ ಇದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 5,000 ರೂ ಪಿಂಚಣಿ ಸಿಗಲು ಎಷ್ಟು ಹೂಡಿಕೆ ಬೇಕು?

ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಲೆಕ್ಕ ಹಾಕುವುದು ಹೀಗೆ:

ಮನೆ ಮಾರಿದ ಹಣ, ಬ್ರೋಕರ್​ಗೆ ಆದ ವೆಚ್ಚ, ಮನೆಗೆ ಮಾಡಿದ ದುರಸ್ತಿ ಇತ್ಯಾದಿ ಖರ್ಚು ಇವೆಲ್ಲವೂ ಒಂದೆಡೆ ಲೆಕ್ಕಹಾಕಿ. ಈ ಮೊತ್ತವನ್ನು ನೀವು ಮನೆ ಖರೀದಿಸಲು ನೀಡಿದ ಹಣವನ್ನು ಕಳೆಯಿರಿ. ಅದರಲ್ಲಿ ಬಂದ ಮೊತ್ತವು ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಎನಿಸುತ್ತದೆ. ಈ ಮೊತ್ತ ಎಷ್ಟು ಎನ್ನುವುದರ ಮೇಲೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ಈ ಲಾಭದ ಮೊತ್ತವು 6 ಲಕ್ಷ ರೂ ಆಗಿದ್ದರೆ ಅದಕ್ಕೆ ಶೇ. 5ರಷ್ಟು ತೆರಿಗೆ ಅನ್ಯ ಆಗುತ್ತದೆ. 9 ಲಕ್ಷ ರೂ ಆಗಿದ್ದರೆ ಅದಕ್ಕೆ 45,000 ರೂ ಹಾಗು ಲಾಭ ಮೊತ್ತದ ಶೇ. 15ರಷ್ಟು ತೆರಿಗೆ ಅನ್ವಯ ಆಗುತ್ತದೆ.

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಹೇಗೆ?

ಮನೆ ಖರೀದಿಸಿ 3 ವರ್ಷದ ಬಳಿಕ ಮಾರಿ ಗಳಿಸಿ ಲಾಭವನ್ನು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಮನೆ ಮಾರಾಟದಿಂದ ಬಂದ ಲಾಭದ ಜೊತೆಗೆ ಕಾಸ್ಟ್ ಇನ್ಫ್ಲೇಶನ್ ಇಂಡೆಕ್ಸ್ ಅಥವಾ ವೆಚ್ಚದ ಹಣದುಬ್ಬರ ಇವೆಲ್ಲವೂ ಪರಿಗಣನೆಗೆ ಬರುತ್ತದೆ.

ಇದನ್ನು ಉದಾಹರಣೆ ಸಹಿತ ವಿವರಿಸಿದ ಸುಲಭವಾಗಿ ಅರ್ಥವಾಗಬಹುದು. ನೀವು 2018ರಲ್ಲಿ ಬೆಂಗಳೂರಿನಲ್ಲಿ 50 ಲಕ್ಷ ರೂಪಾಯಿಗೆ ಖರೀದಿಸಿರುತ್ತೀರಿ. ಈಗ 2023ರಲ್ಲಿ ಮಾರಲು ಹೊರಟಿರುತ್ತೀರಿ. ಸುಮಾರು 90 ಲಕ್ಷ ರುಪಾಯಿಗೆ ಅದನ್ನು ಮಾರುತ್ತೀರಿ ಎಂದಿಟ್ಟುಕೊಳ್ಳಿ. ಈ ವಹಿವಾಟಿನಲ್ಲಿ ನೀವು ಬ್ರೋಕರ್​ಗೆ 2 ಲಕ್ಷ ರೂ ಕೊಡುತ್ತೀರಿ. 2018ರಲ್ಲಿ ಮನೆ ನವೀಕರಣಕ್ಕೆ 3 ಲಕ್ಷ ರೂ ವೆಚ್ಚ ಮಾಡುತ್ತೀರಿ. ಈಗ ಕ್ಯಾಪಿಟಲ್ ಗೇಯ್ನ್ ತೆರಿಗೆ ಹೇಗೆ ಅನ್ವಯ ಆಗುತ್ತದೆ ಎಂದು ಗಮನಿಸಿ…

ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

ಮೊದಲಿಗೆ ಇಂಡೆಕ್ಸೇಶನ್ ಮೌಲ್ಯ ಲೆಕ್ಕ ಹಾಕಬೇಕು. 2018ರಲ್ಲಿ ನೀವು ನಿವೇಶನ ಖರೀದಿಸುವ ವರ್ಷದಲ್ಲಿ ಕಾಸ್ಟ್ ಇನ್​ಫ್ಲೇಶನ್ ಇಂಡೆಕ್ಸ್ 1,500 ಎಂದಿರುತ್ತದೆ. 2023ರಲ್ಲಿ ಇದು 2,000 ಇರುತ್ತದೆ. ಈಗ 2,000 ಅನ್ನು 1,500 ರಿಂದ ಭಾಗಿಸಬೇಕು. ಆಗ ಇಂಡೆಕ್ಸೇಶನ್ ಫ್ಯಾಕ್ಟರ್ 1.33 ಬರುತ್ತದೆ.

ಈಗ ಎಷ್ಟು ಲಾಭ ಎಂಬುದನ್ನು ಈ ರೀತಿ ಲೆಕ್ಕ ಹಾಕಿ. ನೀವು ಖರೀದಿಸಿದ ಬೆಲೆಯನ್ನು ಇಂಡೆಕ್ಸೇಶನ್ ಫ್ಯಾಕ್ಟರ್​ನಿಂದ ಗುಣಿಸಿ. ಮನೆ ದುರಸ್ತಿಗೆ ಆದ ವೆಚ್ಚವನ್ನೂ ಇದರಿಂದಲೇ ಗುಣಿಸಿ.

ಮನೆ ಮಾರಾಟದ ಮೊತ್ತ – ಬ್ರೋಕರೇಜ್ ವೆಚ್ಚ – ಮನೆ ಖರೀದಿ ಇಂಡೆಕ್ಸೇಶನ್ ಅಂಶ – ಮನೆ ದುರಸ್ತಿ ವೆಚ್ಚದ ಇಂಡೆಕ್ಸೇಶನ್ ಅಂಶ = ಕ್ಯಾಪಿಟಲ್ ಗೇಯ್ನ್ ಎನಿಸುತ್ತದೆ.

ಈಗ 50 ಲಕ್ಷ ರೂಗೆ ಮನೆ ಖರೀದಿಸಿರುತ್ತೀರಿ. ಅದಕ್ಕೆ ಇಂಡೆಕ್ಸೇಶನ್ ಫ್ಯಾಕ್ಟರ್ ಆದ 1.33 ಅನ್ನು ಗುಣಿಸಿ. ಆಗ ಅದು 66,50,000 ರೂ ಆಗುತ್ತದೆ.

ಮನೆ ದುರಸ್ತಿಗೆ ಆದ 3 ಲಕ್ಷ ರೂ ಮೊತ್ತವನ್ನು 1.33 ರಿಂದ ಗುಣಿಸಿದಾಗ 3,99,000 ರೂ ಅಗುತ್ತದೆ.

ಇದನ್ನೂ ಓದಿ: ಸಿಟಿಯಲ್ಲಿ ಸೈಟ್ ಕೊಳ್ಳಲು ಹೊರಟಿದ್ದೀರಾ? ಇಲ್ಲಿದೆ ನೀವು ನಿಗಾ ಇರಿಸಬೇಕಾದ ಅಂಶಗಳು

ಈಗ ಮನೆ ಮಾರಿದಾಗ ಬಂದ 90 ಲಕ್ಷ ರೂ ಹಣದಿಂದ ಇವೆಲ್ಲವನ್ನೂ ಕಳೆಯಿರಿ…

  • 1,50,000 ರೂ (ಬ್ರೋಕರೇಜ್ ವೆಚ್ಚ)
  • 66,50,000 ರೂ (ಮನೆ ಖರೀದಿಯ ಹಣದುಬ್ಬರ ಅಂಶ)
  • 3,99,000 ರೂ (ಮನೆ ದುರಸ್ತಿ ವೆಚ್ಚದ ಹಣದುಬ್ಬರ ಅಂಶ)

ಒಟ್ಟು, 71,99,000 ರೂ ಆಗುತ್ತದೆ. ಇದನ್ನು 90 ಲಕ್ಷ ರೂನಿಂದ ಕಳೆಯಿರಿ. 18,01,000 ರೂ ಆಗುತ್ತದೆ. ಅಂದರೆ ಈ 18 ಲಕ್ಷ ರುಪಾಯಿಗೆ ಶೇ. 20ರಷ್ಟು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ತೆರಿಗೆ ಅನ್ವಯ ಆಗುತ್ತದೆ. ಅಂದರೆ 3,60,000 ರೂನಷ್ಟು ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ