ಅದಾನಿ ವಿಲ್ಮರ್​ನ ಸಂಪೂರ್ಣ ಪಾಲು ಬಿಟ್ಟುಕೊಡಲು ಅದಾನಿ ಗ್ರೂಪ್ ಮುಂದು; ಎಣ್ಣೆ ಬಿಸಿನೆಸ್​ನಿಂದ ಅದಾನಿ ಹೊರಬರೋದು ಯಾಕೆ?

Adani Wilmar Stakes On Sale: ಅದಾನಿ ವಿಲ್ಮರ್​ನಲ್ಲಿ ಅದಾನಿ ಗ್ರೂಪ್ ಶೇ. 43.97ರಷ್ಟು ಪಾಲು ಇದೆ. ಇಷ್ಟನ್ನೂ ಗ್ರೂಪ್ ಮಾರಲು ಹೊರಟಿದೆ. ವಿವಿಧ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಅದಾನಿ ಗ್ರೂಪ್ ಮಾತುಕತೆ ನಡೆಸಲು ಮುಂದಾಗಿದ್ದು, ಇನ್ನೊಂದು ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು ಎನ್ನಲಾಗಿದೆ. ಅದಾನಿ ವಿಲ್ಮರ್​ನಲ್ಲಿರುವ ಶೇ. 43.97ರಷ್ಟು ಪಾಲು 2.5ರಿಂದ 3 ಬಿಲಿಯನ್ ಡಾಲರ್ (ಸುಮಾರು 20ರಿಂದ 25 ಸಾವಿರ ಕೋಟಿ ರೂ) ಮೊತ್ತಕ್ಕೆ ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿ ಗೌತಮ್ ಅದಾನಿ ಇದ್ದಾರೆ.

ಅದಾನಿ ವಿಲ್ಮರ್​ನ ಸಂಪೂರ್ಣ ಪಾಲು ಬಿಟ್ಟುಕೊಡಲು ಅದಾನಿ ಗ್ರೂಪ್ ಮುಂದು; ಎಣ್ಣೆ ಬಿಸಿನೆಸ್​ನಿಂದ ಅದಾನಿ ಹೊರಬರೋದು ಯಾಕೆ?
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 06, 2023 | 10:45 AM

ನವದೆಹಲಿ, ನವೆಂಬರ್ 6: ಅದಾನಿ ಗ್ರೂಪ್​ಗೆ ಸೇರಿದ ಅದಾನಿ ವಿಲ್ಮರ್ (Adani Wilmar) ಕಂಪನಿಯ ಶೇ. 40ಕ್ಕೂ ಹೆಚ್ಚು ಪಾಲನ್ನು ಮಾರಾಟಕ್ಕಿಡಲಾಗಿರುವುದು ತಿಳಿದುಬಂದಿದೆ. ವರದಿ ಪ್ರಕಾರ, ಅದಾನಿ ವಿಲ್ಮರ್​ನಲ್ಲಿ ಅದಾನಿ ಗ್ರೂಪ್ ಶೇ. 43.97ರಷ್ಟು ಪಾಲು ಇದೆ. ಇಷ್ಟನ್ನೂ ಗ್ರೂಪ್ ಮಾರಲು ಹೊರಟಿದೆ. ವಿವಿಧ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಅದಾನಿ ಗ್ರೂಪ್ ಮಾತುಕತೆ ನಡೆಸಲು ಮುಂದಾಗಿದ್ದು, ಇನ್ನೊಂದು ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು ಎನ್ನಲಾಗಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಈ ಬಗ್ಗೆ ಇಂದು ವರದಿ ಪ್ರಕಟವಾಗಿದೆ. ಕೇವಲ ಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಲಾಗಿರುವ ಈ ವರದಿ ಪ್ರಕಾರ ಅದಾನಿ ವಿಲ್ಮರ್​ನಲ್ಲಿರುವ ಶೇ. 43.97ರಷ್ಟು ಪಾಲು 2.5ರಿಂದ 3 ಬಿಲಿಯನ್ ಡಾಲರ್ (ಸುಮಾರು 20ರಿಂದ 25 ಸಾವಿರ ಕೋಟಿ ರೂ) ಮೊತ್ತಕ್ಕೆ ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿ ಗೌತಮ್ ಅದಾನಿ ಇದ್ದಾರೆ.

ಅದಾನಿ ವಿಲ್ಮರ್ ಸಂಸ್ಥೆ ಅಡಿಯಲ್ಲಿ ಫಾರ್ಚೂನ್ ಬ್ರ್ಯಾಂಡ್​ನ ಹಲವು ಅಡುಗೆ ಎಣ್ಣೆಗಳು ಮಾರುಕಟ್ಟೆಯಲ್ಲಿವೆ. ಅದರ ಜೊತೆಗೆ ಐಸ್ ಕ್ರೀಮ್, ಬಿಸ್ಕತ್ ಇತ್ಯಾದಿ ಹಲವು ಅಡುಗೆ ವಸ್ತುಗಳನ್ನು ಸಂಸ್ಥೆ ತಯಾರಿಸುತ್ತದೆ. ಸಿಂಗಾಪುರದ ವಿಲ್ಮರ್ ಇಂಟರ್ನ್ಯಾಷನಲ್ ಮತ್ತು ಅದಾನಿ ಗ್ರೂಪ್ ಜೊತೆ ಸೇರಿ 1999ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದವು. ಇದರಲ್ಲಿ ಅದಾನಿ ಗ್ರೂಪ್ ಶೇ. 43.97ರಷ್ಟು ಪಾಲು ಹೊಂದಿದರೆ, ವಿಲ್ಮರ್ ಇಂಟರ್ನ್ಯಾಷನಲ್ ಶೇ. 43.87ರಷ್ಟು ಪಾಲು ಹೊಂದಿದೆ. ಇದೀಗ ತನ್ನ ಅಷ್ಟೂ ಪಾಲನ್ನು ಯಾವುದಾದರೂ ಸಂಸ್ಥೆಗೆ ಮಾರಲು ಅದಾನಿ ಗ್ರೂಪ್ ಹೊರಟಿದೆ.

ಇದನ್ನೂ ಓದಿ: Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ

ಅದಾನಿ ವಿಲ್ಮರ್​ನಿಂದ ಅದಾನಿ ಗ್ರೂಪ್ ಹಿಂದಕ್ಕೆ ಸರಿಯುತ್ತಿರುವುದು ಯಾಕೆ?

ಅದಾನಿ ಗ್ರೂಪ್ ಉದ್ದಿಮೆಗಳು ಸಾಕಷ್ಟು ವಿಸ್ತಾರ ಪಡೆದಿವೆ. ಅಡುಗೆ ಎಣ್ಣೆ ಈಗ ಅದರ ಪ್ರಮುಖ ಬಿಸಿನೆಸ್ ಆಗಿ ಉಳಿದಿಲ್ಲ. ಪೋರ್ಟ್, ಏರ್​ಪೋರ್ಟ್, ಇನ್​ಫ್ರಾಸ್ಟ್ರಕ್ಚರ್ ಇತ್ಯಾದಿ ದೊಡ್ಡ ಬಂಡವಾಳದ ಕ್ಷೇತ್ರಗಳಲ್ಲಿ ಗ್ರೂಪ್ ದೊಡ್ಡ ವ್ಯವಹಾರಗಳನ್ನು ಹೊಂದಿದೆ. ಈ ಪ್ರಮುಖ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸುವ ಸಲುವಾಗಿ ಅದಾನಿ ವಿಲ್ಮರ್ ಇತ್ಯಾದಿ ಕೆಲ ಬಿಸಿನೆಸ್​ಗಳಿಂದ ಹೊರಬರಲು ಗ್ರೂಪ್ ನಿರ್ಧರಿಸಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ