PM Kisan 15th Installment: ಪಿಎಂ ಕಿಸಾನ್ ಯೋಜನೆ, ಹೊಸ ಕಂತು ಬಿಡುಗಡೆಗೆ ದಿನಗಣನೆ; ಫಲಾನುಭವಿಗಳ ಪಟ್ಟಿ ಇಲ್ಲಿದೆ

Know How To See Beneficiaries List: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಮಾಡಿಸುವುದು ಕಡ್ಡಾಯ. ಕೆವೈಸಿ ಅಪ್​ಡೇಟ್ ಮಾಡಿರುವವರಿಗೆ ಮಾತ್ರವೇ ಹಣ ಸಿಗುತ್ತದೆ. ಇನ್ನೂ ಕೆವೈಸಿ ಅಪ್​ಡೇಟ್ ಮಾಡದವರು, ಮತ್ತು ಆಧಾರ್ ದಾಖಲೆಯಲ್ಲಿರುವ ಹೆಸರಿನ ಪ್ರಕಾರ ನೊಂದಣಿ ಮಾಡದವರ ಖಾತೆಗಳಿಗೂ ಹಣ ಸಿಗುವುದಿಲ್ಲ. ಆನ್​ಲೈನ್ ಮೂಲಕ ಕೆವೈಸಿ ಅಪ್​ಡೇಟ್ ಮಾಡಲು ಸರ್ಕಾರ ವಿವಿಧ ಮಾರ್ಗಗಳನ್ನು ನೀಡಿದೆ.

PM Kisan 15th Installment: ಪಿಎಂ ಕಿಸಾನ್ ಯೋಜನೆ, ಹೊಸ ಕಂತು ಬಿಡುಗಡೆಗೆ ದಿನಗಣನೆ; ಫಲಾನುಭವಿಗಳ ಪಟ್ಟಿ ಇಲ್ಲಿದೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Nov 06, 2023 | 12:44 PM

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) 15ನೇ ಕಂತಿನ ಹಣ ಬಿಡುಗಡೆ ದೀಪಾವಳಿ ಹಬ್ಬದ ಬಳಿಕ ಆಗಲಿದೆ. ವರದಿಗಳ ಪ್ರಕಾರ, ನವೆಂಬರ್ ಕೊನೆಯ ವಾರದಲ್ಲಿ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಬಹುದು. ಬೆಳಗಾವಿಯಲ್ಲಿ ಮಾರ್ಚ್ 27ರಂದು 13ನೇ ಕಂತಿನ ಹಣ ಬಿಡುಗಡೆಯನ್ನು ನರೇಂದ್ರ ಮೋದಿ ಘೋಷಿಸಿದ್ದರು. 14ನೇ ಕಂತಿನ ಹಣವನ್ನು ರಾಜಸ್ಥಾನದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ 15ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಮಾಡಿಸುವುದು ಕಡ್ಡಾಯ. ಕೆವೈಸಿ ಅಪ್​ಡೇಟ್ ಮಾಡಿರುವವರಿಗೆ ಮಾತ್ರವೇ ಹಣ ಸಿಗುತ್ತದೆ. ಇನ್ನೂ ಕೆವೈಸಿ ಅಪ್​ಡೇಟ್ ಮಾಡದವರು, ಮತ್ತು ಆಧಾರ್ ದಾಖಲೆಯಲ್ಲಿರುವ ಹೆಸರಿನ ಪ್ರಕಾರ ನೊಂದಣಿ ಮಾಡದವರ ಖಾತೆಗಳಿಗೂ ಹಣ ಸಿಗುವುದಿಲ್ಲ. ಆನ್​ಲೈನ್ ಮೂಲಕ ಕೆವೈಸಿ ಅಪ್​ಡೇಟ್ ಮಾಡಲು ಸರ್ಕಾರ ವಿವಿಧ ಮಾರ್ಗಗಳನ್ನು ನೀಡಿದೆ.

ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಇಕೆವೈಸಿ ಅಪ್​ಡೇಟ್ ಮಾಡುವ ಆಯ್ಕೆ ಇದೆ. ಆನ್ಲೈನ್​ನಲ್ಲಿ ಕಷ್ಟವಾದವರಿಗೆ ಅವರ ಗ್ರಾಮದ ಸಮೀಪದ ಸಿಎಸ್​ಸಿ ಸೆಂಟರ್​ಗಳಿಗೆ ಹೋಗಿ ಬಯೋಮೆಟ್ರಿಕ್ ನೀಡಿ ಇಕೆವೈಸಿ ಸಲ್ಲಿಸಬಹುದು.

ಇದನ್ನೂ ಓದಿ
Image
ದೇಶದ ಪ್ರಮುಖ ನಗರಗಳಲ್ಲಿ ನ.6ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
Image
Gold Rates 6 Nov: ಇವತ್ತಿನ ಚಿನ್ನ, ಬೆಳ್ಳಿ ಬೆಲೆಗಳೆಷ್ಟು?
Image
ಮನೆ ಮೇಲೆ ರಿವರ್ಸ್ ಮಾರ್ಟ್​ಗೇಜ್ ಲೋನ್; ಸಾಲ ಮರುಪಾವತಿಸಬೇಕಿಲ್ಲ
Image
ಸುಭದ್ರ ಹಣಕಾಸು ಜೀವನಕ್ಕೆ ಈ ಸೂತ್ರಗಳನ್ನು ಅಳವಡಿಸಿಕೊಳ್ಳಿ

ಇದನ್ನೂ ಓದಿ: Inspiring: ಸ್ಲಂನಲ್ಲಿ ಬೆಳೆದು, 12 ವರ್ಷಕ್ಕೆ ಮದುವೆಯಾಗಿ, ಕೌಟುಂಬಿಕ ಹಿಂಸಾಚಾರಕ್ಕೊಳಗಾದರೂ ಜಗ್ಗದೇ ಬೆಳೆದ ಕಲ್ಪನಾ ಸರೋಜ್; ಇವತ್ತು 7 ಕಂಪನಿಗಳ ಒಡತಿ

ಪಿಎಂ ಕಿಸಾನ್ ಯೋಜನೆ, ಫಲಾನುಭವಿಗಳ ಪಟ್ಟಿ ನೋಡುವ ಕ್ರಮ

  • ಪಿಎಂ ಕಿಸಾನ್ ಯೋಜನೆಯ ಪೋರ್ಟಲ್​ಗೆ ಭೇಟಿ ನೀಡಿ: pmkisan.gov.in
  • ಪೋರ್ಟಲ್​ನಲ್ಲಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅಲ್ಲಿ ಹಲವು ಟ್ಯಾಬ್​​ಗಳನ್ನು ನೋಡಬಹುದು. ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ಅಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಅಂತಿಮವಾಗಿ ಗ್ರಾಮವನ್ನು ಆಯ್ದುಕೊಂಡು ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ.
  • ಇಲ್ಲಿ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು.

ಇದನ್ನೂ ಓದಿ: RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ

ಏನಿದು ಕಿಸಾನ್ ಸ್ಕೀಮ್?

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ವ್ಯವಸಾಯಕ್ಕೆ ಧನ ಸಹಾಯ ನೀಡುವ ಉದ್ದೇಶ ಹೊಂದಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ 2,000 ರೂಗಳಂತೆ ಒಟ್ಟು ಒಂದು ವರ್ಷದಲ್ಲಿ 6,000 ರೂ ನೀಡಲಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜುಲೈವರೆಗೆ, ಆಗಸ್ಟ್​ನಿಂದ ನವೆಂಬರ್​ವರೆಗೆ, ಹಾಗೂ ಡಿಸೆಂಬರ್​ನಿಂದ ಮಾರ್ಚ್​ವರೆಗೆ ಹೀಗೆ ಮೂರು ಅವಧಿಗಳಲ್ಲಿ ರೈತರ ಖಾತೆಗಳಿಗೆ ಸರ್ಕಾರ ನೇರವಾಗಿ ಹಣ ಬಿಡುಗಡೆ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Mon, 6 November 23