ಭಾರತ ಆಸ್ಟ್ರೇಲಿಯಾ ಮೊದಲ ಎಐಇಎಸ್ಸಿ ಸಭೆ; ಧರ್ಮೇಂದ್ರ ಪ್ರಧಾನ್ ಜೊತೆ ಆಸ್ಟ್ರೇಲಿಯಾ ಸಚಿವರ ಭೇಟಿ
AIESC Meeting in Gujarat: ಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ ಮಂಡಳಿಯ (ಎಐಇಎಸ್ಸಿ) ಮೊದಲ ಸಭೆ ಗುಜರಾತ್ನ ಗಾಂಧಿನಗರ್ನಲ್ಲಿ ನವೆಂಬರ್ 6ಕ್ಕೆ ಆರಂಭಗೊಂಡಿದೆ. ಭಾರತದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್, ಅಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್, ಕೌಶಲ್ಯ ಮತ್ತು ಅಲ್ಲಿನ ತರಬೇತಿ ಸಚಿವ ಬ್ರೆಂಡಾನ್ ಓಕಾನಾರ್ ಅವರು ಈ ಸಭೆ ಸಹ-ಅಧ್ಯಕ್ಷರಾಗಿದ್ದಾರೆ. ಶಿಕ್ಷಣ ಮತ್ತು ಕೌಶಲ್ಯ ಎರಡೂ ಒಂದೇ ಸಾಂಸ್ಥಿಕ ರಚನೆಯಲ್ಲಿರುವುದು ಇದೇ ಮೊದಲು.
ಗಾಂಧಿನಗರ್, ನವೆಂಬರ್ 6: ಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ ಮಂಡಳಿಯ (AIESC) ಮೊದಲ ಸಭೆ ಗುಜರಾತ್ನ ಗಾಂಧಿನಗರ್ನಲ್ಲಿ ಇಂದು ಸೋಮವಾರ ಆರಂಭಗೊಂಡಿತು. ಭಾರತದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ (Minister of Eduction and Skill Development and entrepreneurship) ಅವರು ಈ ಸಭೆಯ ಸಹ-ಅಧ್ಯಕ್ಷರಾಗಿದ್ದರು. ಅಸ್ಟ್ರೇಲಿಯಾದ ಶಿಕ್ಷಣ ಸಚಿವ ಜೇಸನ್ ಕ್ಲೇರ್ (Jason Clare), ಕೌಶಲ್ಯ ಮತ್ತು ತರಬೇತಿ ಸಚಿವ ಬ್ರೆಂಡಾನ್ ಓಕಾನಾರ್ (Brendon O’Connor) ಅವರೂ ಕೂಡ ಈ ಕಾರ್ಯಕ್ರಮದ ಸಹ-ಅಧ್ಯಕ್ಷರಾಗಿದ್ದರು.
ಶಿಕ್ಷಣ ಮತ್ತು ಕೌಶಲ್ಯಗಳನ್ನು ಸಾಂಸ್ಥಿಕ ರಚನೆಯಲ್ಲಿ ಸೇರಿಸಿರುವುದು ಇದೇ ಮೊದಲ ಬಾರಿಗೆ. ಈ ಸಭೆಯಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಮತ್ತು ಸಂಯೋಗ ಸಾಧಿಸುವ ಅವಕಾಶಗಳನ್ನು ಹುಡುಕುವ ಪ್ರಯತ್ನವಾಗುತ್ತಿದೆ. ಭವಿಷ್ಯದ ಕೆಲಸಗಳು, ಶಿಕ್ಷಣದಲ್ಲಿ ಸಾಂಸ್ಥಿಕ ಜೊತೆಗಾರಿಕೆ, ಸಂಶೋಧನೆಯ ಪರಿಣಾಮ ಈ ಮೂರು ಅಂಶಗಳ ಬಗ್ಗೆ ಈ ಸಭೆಯಲ್ಲಿ ಅವಲೋಕನ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ
ಈ ಸಭೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಶಿಕ್ಷಣ ಮತ್ತು ಕೌಶಲ್ಯಗಳ ಸಚಿವರಷ್ಟೇ ಅಲ್ಲದೇ ಎರಡೂ ದೇಶಗಳ ಈ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
#WATCH | Gujarat: Union Education Minister Dharmendra Pradhan and Australian Minister for Education Jason Clare hold the 1st Australia India Education and Skills Council (AIESC) meeting in Gandhinagar. pic.twitter.com/hP4m5k30qW
— ANI (@ANI) November 6, 2023
ಸಾಂಸ್ಥಿಕ ಸಹಯೋಗ ಸಾಧಿಸುವ ಸಾಧ್ಯತೆಗಳನ್ನು ಅವಲೋಕಿಸಲು ಸಚಿವರು ವಿವಿಧ ಉನ್ನತ ವ್ಯಾಸಂಗ ಸಂಸ್ಥೆಗಳಿಗೆ ಭೇಟಿ ಕೊಡಲಿದ್ದಾರೆ. ಗಾಂಧಿನಗರದಲ್ಲೇ ಇರುವ ಐಐಟಿ, ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಡಿಯು), ವಿದ್ಯಾ ಸಮೀಕ್ಷಾ ಕೇಂದ್ರಗಳಿಗೆ (ವಿಎಸ್ಕೆ) ಇವರುಗಳು ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: PM Kisan 15th Installment: ಪಿಎಂ ಕಿಸಾನ್ ಯೋಜನೆ, ಹೊಸ ಕಂತು ಬಿಡುಗಡೆಗೆ ದಿನಗಣನೆ; ಫಲಾನುಭವಿಗಳ ಪಟ್ಟಿ ಇಲ್ಲಿದೆ
ಎಐಇಎಸ್ಸಿ ಸಮಾವೇಶ ಎರಡು ದಿನಗಳದ್ದಿರಲಿದೆ. ನಾಳೆಯೂ ಸಚಿವರು ಮತ್ತು ಅಧಿಕಾರಿಗಳು ವಿವಿಧ ಕ್ಯಾಂಪಸ್ಗಳಿಗೆ ಭೇಟಿ ಕೊಡುವುದಿದೆ. ಗಿಫ್ಟ್ ಸಿಟಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಟ್ರೇಲಿಯಾದ ಡೀಕಿನ್ ಯೂನಿವರ್ಸಿಟಿ ಮತ್ತು ವಾಲೋಂಗೋಂಗ್ ಯೂನಿವರ್ಸಿಟಿಯ ಕ್ಯಾಂಪಸ್ಗಳಿಗೂ ಅವರು ಭೇಟಿ ಮಾಡಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ