Tina Ambani: ನಿನ್ನೆ ಅನಿಲ್ ಅಂಬಾನಿ, ಇವತ್ತು ಪತ್ನಿ ಟೀನಾ ಅಂಬಾನಿ; ಫೆಮಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಇಡಿ ವಿಚಾರಣೆ

|

Updated on: Jul 04, 2023 | 11:19 AM

ED Probe In FEMA Violation Case: ಫಾರೀನ್ ಎಕ್ಸ್​ಚೇಂಜ್ ನಿಯಮ ಉಲ್ಲಂಘನೆಯ ಪ್ರಕರಣದಲ್ಲಿ ನಿನ್ನೆ ಅನಿಲ್ ಅಂಬಾನಿ ಇಡಿ ವಿಚಾರಣೆಗೆ ಹಾಜರಾಗಿದ್ದರು. ಇವತ್ತು ಟೀನಾ ಅಂಬಾನಿ ವಿಚಾರಣೆ ಎದುರಿಸಿದ್ದಾರೆ.

Tina Ambani: ನಿನ್ನೆ ಅನಿಲ್ ಅಂಬಾನಿ, ಇವತ್ತು ಪತ್ನಿ ಟೀನಾ ಅಂಬಾನಿ; ಫೆಮಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಇಡಿ ವಿಚಾರಣೆ
ಟೀನಾ ಅಂಬಾನಿ
Follow us on

ಮುಂಬೈ: ಭಾರತದ ನಂಬರ್ ಒನ್ ಉದ್ಯಮಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿಯವರ ಪತ್ನಿ ಟೀನಾ (Tina Ambani) ಅವರು ಜುಲೈ 4ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಮಾಜಿ ಸಿನಿಮಾ ನಟಿಯೂ ಆದ ಟೀನಾ ಅಂಬಾನಿ ಅವರು ಫೋರೆಕ್ಸ್ ನಿಯಮ ಉಲ್ಲಂಘನೆಯ ಪ್ರಕರಣವೊಂದರ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಿರುವುದು ತಿಳಿದುಬಂದಿದೆ. ವಿದೇಶ ವಿನಿಮಯ ನಿರ್ವಹಣ ಕಾಯ್ದೆ (FEMA- Foreign Exchange Management Act) ಅಡಿಯಲ್ಲಿನ ವಿವಿಧ ಸೆಕ್ಷನ್ಸ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದೆ. ಪತಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ನಿನ್ನೆ ಸೋಮವಾರ (ಜುಲೈ 3) ಜಾರಿ ನಿರ್ದೇಶನಾಲಯದ ಮುಂಚೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿ ಬಂದಿದ್ದರು.

ಪಿಟಿಐ ವರದಿ ಪ್ರಕಾರ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಯಲ್ಲಿ 64 ವರ್ಷದ ಅನಿಲ್ ಅಂಬಾನಿ ವಿಚಾರಣೆ ನಡೆಸಲಾಗಿತ್ತು. ಫೆಮಾ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಹೊಸ ಪ್ರಕರಣವೊಂದು ದಾಖಲಾಗಿದ್ದು ಅದರ ಸಂಬಂಧ ಅಂಬಾನಿ ವಿಚಾರಣೆ ನಡೆದಿದೆ.

ಇದನ್ನೂ ಓದಿವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾದ ಅನಿಲ್ ಅಂಬಾನಿ: ವರದಿ

ಯೆಸ್ ಬ್ಯಾಂಕ್ ಪ್ರವರ್ತಕ (Promoter) ರಾಣಾ ಕಪೂರ್ ಮತ್ತಿತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 2020ರಲ್ಲಿ ಅನಿಲ್ ಅಂಬಾನಿ ಅವರನ್ನು ಇಡಿ ವಿಚಾರಣೆ ನಡೆಸಿತ್ತು.

2022ರ ಆಗಸ್ಟ್ ತಿಂಗಳಲ್ಲಿ ಅನಿಲ್ ಅಂಬಾನಿಗೆ ಐಟಿ ಇಲಾಖೆಯಿಂದ ನೋಟೀಸ್ ಹೋಗಿತ್ತು. ಅಂಬಾನಿ ಹೊಂದಿರುವ ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿರುವ ಹಣದ ಪೈಕಿ 814 ಕೋಟಿಗೂ ಹೆಚ್ಚು ಹಣದ ಮೂಲ ಮರೆಮಾಚಲಾಗಿದೆ. ಈ ಸಂಬಂಧ 420 ಕೋಟಿ ರೂನಷ್ಟು ತೆರಿಗೆ ವಂಚನೆ ಆಗಿದೆ ಎಂದು ಆರೋಪಿಸಿ ಐಟಿ ಇಲಾಖೆ ಅನಿಲ್ ಅಂಬಾನಿಗೆ ಶೋಕಾಸ್ ನೋಟೀಸ್ ನೀಡಿತ್ತು. ಆದರೆ, 2023ರ ಮಾರ್ಚ್ ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯ ನೋಟೀಸ್​ಗೆ ತಾತ್ಕಾಲಿಕ ತಡೆ ನೀಡಿತ್ತು.

ಇದನ್ನೂ ಓದಿMukesh Ambani: ಅಂಬಾನಿ ಹುಟ್ಟಾ ಶ್ರೀಮಂತರಲ್ಲ; ಪೆಟ್ರೋಲ್ ಬಂಕ್ ಕಾರ್ಮಿಕನ ಮಗನಾಗಿ ಮುಕೇಶ್ ಅಂಬಾನಿ ಬೆಳೆದ ರೋಚಕ ಕಥೆ

ಇದೀಗ ಫಾರೀನ್ ಎಕ್ಸ್​ಚೇಂಜ್ ನಿಯಮಗಳ ಉಲ್ಲಂಘನೆಯ ಆರೋಪಗಳಿರುವ ಹೊಸ ಪ್ರಕರಣವೊಂದು ದಾಖಲಾಗಿದ್ದು, ಆ ಸಂಬಂಧ ಅನಿಲ್ ಅಂಬಾನಿ ಮತ್ತು ಈಗ ಟೀನಾ ಅಂಬಾನಿ ವಿಚಾರಣೆ ನಡೆಯುತ್ತಿದೆ. ಒಂದು ಸಮಯದಲ್ಲಿ ವಿಶ್ವದ ಆರನೇ ಅತಿಶ್ರೀಮಂತ ವ್ಯಕ್ತಿ ಎನಿಸಿದ್ದ ಅನಿಲ್ ಅಂಬಾನಿಯ ಶ್ರೀಮಂತಿಕೆ ಸಾಕಷ್ಟು ಕರಗಿದೆ. ಸದ್ಯ ರಿಲಾಯನ್ಸ್ ಕ್ಯಾಪಿಟಲ್, ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್, ರಿಲಾಯನ್ಸ್ ಪವರ್, ರಿಲಾಯನ್ಸ್ ಕಮ್ಯೂನಿಕೇಶನ್ಸ್ ಇತ್ಯಾದಿ ಕಂಪನಿಗಳನ್ನು ಒಳಗೊಂಡಿರುವ ರಿಲಾಯನ್ಸ್ ಎಡಿಎ ಗ್ರೂಪ್​ನ ಛೃ್ಮನ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ