AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IDFC Merger: ಎಚ್​ಡಿಎಫ್​ಸಿ ಹಾದಿ ತುಳಿದ ಐಡಿಎಫ್​ಸಿ; ಎರಡು ಸೋದರ ಸಂಸ್ಥೆಗಳು ವಿಲೀನಕ್ಕೆ ಮುಂದು

IDFC Ltd To Merge With IDFC First Bank: 1997ರಲ್ಲಿ ಶುರುವಾದ ಐಡಿಎಫ್​ಸಿ ಲಿಮಿಟೆಡ್ ಸಂಸ್ಥೆ ಇದೀಗ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಜೊತೆ ವಿಲೀನಗೊಳ್ಳುತ್ತಿದೆ. 100 ವರ್ಸಸ್ 155 ಸೂತ್ರದಲ್ಲಿ ಷೇರುಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

IDFC Merger: ಎಚ್​ಡಿಎಫ್​ಸಿ ಹಾದಿ ತುಳಿದ ಐಡಿಎಫ್​ಸಿ; ಎರಡು ಸೋದರ ಸಂಸ್ಥೆಗಳು ವಿಲೀನಕ್ಕೆ ಮುಂದು
ಐಡಿಎಫ್​ಸಿ ಫಸ್ಟ್ ಬ್ಯಾಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 04, 2023 | 12:31 PM

Share

ನವದೆಹಲಿ: ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನಗೊಂಡ ಬೆನ್ನಲ್ಲೇ ಈಗ ಐಡಿಎಫ್​ಸಿ ಸಂಸ್ಥೆಗಳೂ (IDFC Entities Merger) ಕೂಡ ಒಂದುಗೂಡಲು ಹೊರಟಿವೆ. ಐಡಿಎಫ್​ಸಿ ಲಿ ಅನ್ನು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಜೊತೆ ವಿಲೀನಗೊಳಿಸಲು ಬ್ಯಾಂಕ್​ನ ಮಂಡಳಿ ಅನುಮೋದನೆ ಕೊಟ್ಟಿದೆ. ಪ್ರಾಧಿಕಾರ ಹಾಗೂ ಷೇರುದಾರರು ಈ ವಿಲೀನಕ್ಕೆ ಒಪ್ಪಿಗೆ ಸೂಚಿಸಿದರೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಒಂದೇ ಉಳಿಯಲಿದೆ. ಬ್ಯಾಂಕ್​ನ ಕಾರ್ಪೊರೇಟ್ ವ್ಯವಸ್ಥೆ ಸರಳಗೊಳಿಸಲು ಈ ವಿಲೀನ ಸಹಾಯವಾಗಲಿದೆ. ವಿಲೀನಗೊಂಡ ಬಳಿಕ ಇತರ ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳಂತೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲೂ ಪ್ರೊಮೋಟರ್​ಗಳ ಷೇರುದಾರಿಕೆ ಪ್ರಮಾಣ ಕಡಿಮೆಗೊಳ್ಳುತ್ತದೆ. ಸಾರ್ವಜನಿಕ ಮತ್ತು ಸಾಂಸ್ಥಿಕ ಹೂಡಿಕೆದಾರರ ಪ್ರಮಾಣ ಹೆಚ್ಚಾಗಲಿದೆ.

ಐಡಿಎಫ್​ಸಿ ಸಂಸ್ಥೆಗಳ ವಿಲೀನ ಹೇಗೆ?

ಐಡಿಎಫ್​ಸಿ ಲಿಮಿಟೆಡ್ ಮತ್ತು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ವಿಲೀನ ಎಷ್ಟು ಕೋಟಿ ಮೊತ್ತದ ಡೀಲ್ ಎಂಬುದು ನಿರ್ದಿಷ್ಟವಾಗಿಲ್ಲ. 100:155 ಷೇರುಹಂಚಿಕೆ ಸೂತ್ರ ಸದ್ಯಕ್ಕೆ ನಿರ್ಧರಿಸಲಾಗಿದೆ. ಅದರ ಪ್ರಕಾರ ಐಡಿಎಫ್​ಸಿ ಲಿ ಸಂಸ್ಥೆಯ ಪ್ರತೀ 100 ಷೇರಿಗೆ ಬದಲಾಗಿದೆ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ 155 ಈಕ್ವಿಟಿ ಷೇರುಗಳು ಸಿಗುತ್ತವೆ. ಐಡಿಎಫ್​ಸಿಯಲ್ಲಿ 100 ಷೇರುಗಳನ್ನು ಹೊಂದಿರುವವರಿಗೆ ಈಗ ಬ್ಯಾಂಕ್​ನ 155 ಷೇರುಗಳು ಸಿಗುತ್ತವೆ. ವಿಲೀನ ಮುಗಿದ ಬಳಿಕ ಐಡಿಎಫ್​ಸಿ ಬ್ಯಾಂಕ್​ನ ಷೇರುಮೌಲ್ಯ ಶೇ. 4.9ರಷ್ಟು ಹೆಚ್ಚಾಗಬಹುದು ಎಂದು ಲೆಕ್ಕ ಮಾಡಲಾಗಿದೆ.

ಇದನ್ನೂ ಓದಿ: HDFC: ‘ಪ್ರತೀ 4 ವರ್ಷಕ್ಕೆ ಹೊಸ ಎಚ್​ಡಿಎಫ್​ಸಿ ಬ್ಯಾಂಕ್’- ವಿಲೀನದ ಬಳಿಕ ಮಹತ್ವಾಕಾಂಕ್ಷೆ ಬಿಚ್ಚಿಟ್ಟ ಸಿಇಒ

ಐಡಿಎಫ್​ಸಿ ಸಂಸ್ಥೆಯ ಇತಿಹಾಸ…

ಸೌಕರ್ಯ ಯೋಜನೆಗಳಿಗೆ ಫಂಡಿಂಗ್ ಒದಗಿಸಲು 1997ರಲ್ಲಿ ಐಡಿಎಫ್​ಸಿ ಲಿ ಸ್ಥಾಪನೆಯಾಗಿತ್ತು. ಆರ್​ಬಿಐ ಒಪ್ಪಿಗೆ ಪಡೆದು 2014ರಲ್ಲಿ ಐಡಿಎಫ್​ಸಿ ಬ್ಯಾಂಕ್ ಸ್ಥಾಪನೆ ಆಯಿತು. 2018ರ ಡಿಸೆಂಬರ್ 18ರಂದು ಕ್ಯಾಪಿಟಲ್ ಫಸ್ಟ್ ಕಂಪನಿ ಜೊತೆ ಐಡಿಎಫ್​ಸಿ ಬ್ಯಾಂಕ್ ವಿಲೀನಗೊಂಡು ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಎಂದು ಹೆಸರು ಬದಲಾಯಿತು. ಈ ಬ್ಯಾಂಕ್​ನಲ್ಲಿ ಐಡಿಎಫ್​ಸಿ ಲಿ ಸಂಸ್ಥೆ ಶೇ. 39.93ರಷ್ಟು ಷೇರುಪಾಲು ಹೊಂದಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಷೇರುಬೆಲೆ ಇಳಿಕೆ

ಐಡಿಎಫ್​ಸಿಯ ಎರಡು ಸಂಸ್ಥೆಗಳು ವಿಲೀನಗೊಳ್ಳಲು ಮುಂದಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಮಿಶ್ರ ಸ್ಪಂದನೆ ಸಿಕ್ಕಿದೆ. ಐಡಿಎಫ್​ಸಿ ಲಿ ಸಂಸ್ಥೆಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ, ಅದರ ಮೌಲ್ಯ ಸಾರ್ವಕಾಲಿಕ ಎತ್ತರಕ್ಕೆ ಹೋಗಿದೆ. ಅದಕ್ಕೆ ತದ್ವಿರುದ್ಧವಾಗಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಷೇರುಮೌಲ್ಯ ಜುಲೈ 4ರ ಬೆಳಗಿನ ವಹಿವಾಟಿನಲ್ಲಿ ತೀವ್ರ ಹಿನ್ನಡೆ ಕಾಣುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್