ಏರ್ ಇಂಡಿಯಾ ಲಿಮಿಟೆಡ್ನಿಂದ ಉದ್ದ ಮೈ ಆಕಾರದ ಸುಮಾರು 300 ವಿಮಾನಗಳನ್ನು ಆರ್ಡರ್ ಮಾಡಲು ಚಿಂತನೆ ನಡೆದಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಮಾಹಿತಿ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯಾಗಿದ್ದ ಏರ್ ಇಂಡಿಯಾವು (Air India) ಹೊಸ ಮಾಲೀಕತ್ಚದಲ್ಲಿ ದೊಡ್ಡ ಬದಲಾವಣೆ ಕಂಡು, ಹೊಸದಾಗಿ ವಿಮಾನಗಳನ್ನು ಖರೀದಿಸುವ ನಿರೀಕ್ಷೆ ಇದೆ. ಅಂದ ಹಾಗೆ ಇದು ವಾಣಿಜ್ಯ ವಿಮಾನಯಾನ ಇತಿಹಾಸದಲ್ಲಿ ಅತಿದೊಡ್ಡ ಆರ್ಡರ್‌ಗಳಲ್ಲಿ ಒಂದಾಗಬಹುದಾಗಿದೆ. ವಿಮಾನ ಯಾನ ಸಂಸ್ಥೆಯಿಂದ ಏರ್‌ಬಸ್ ಎಸ್ಇಯ A320 ನಿಯೋ ಕುಟುಂಬಕ್ಕೆ ಜೆಟ್‌ಗಳು ಅಥವಾ ಬೋಯಿಂಗ್ ಕಂಪೆನಿಗೆ ಸೇರಿದ 737 ಮ್ಯಾಕ್ಸ್ ಮಾಡೆಲ್‌ಗಳನ್ನು ಅಥವಾ ಎರಡರ ಮಿಶ್ರಣವನ್ನು ಆರ್ಡರ್ ಮಾಡಬಹುದು. ಚರ್ಚೆಗಳು ಗೋಪ್ಯವಾಗಿರುವುದರಿಂದ ತಮ್ಮ ಗುರುತನ್ನು ಬಹಿರಂಗ ಮಾಡಬಾರದು ಎಂದು ಮೂಲಗಳು ಕೇಳಿಕೊಂಡಿವೆ. 737 ಮ್ಯಾಕ್ಸ್-10ರ 300 ವಿಮಾನಗಳ ಒಪ್ಪಂದವು ಸ್ಟಿಕ್ಕರ್ ಬೆಲೆಗಳಲ್ಲಿ 40.5 ಶತಕೋಟಿ ಡಾಲರ್ ಮೌಲ್ಯದ್ದಾಗಿರಬಹುದು, ಆದರೆ ಅಂತಹ ದೊಡ್ಡ ಖರೀದಿಗಳಲ್ಲಿ ರಿಯಾಯಿತಿಗಳು ಸಾಮಾನ್ಯವಾಗಿರುತ್ತವೆ.
ಭಾರತದಲ್ಲಿ ಉದ್ದ ಮೈ ಆಕಾರದ ಆರ್ಡರ್ ಗೆಲ್ಲುವುದು ಬೋಯಿಂಗ್‌ಗೆ ಸಂಚಲನ ಎಂಬಂತಾಗಿದೆ. ಏಕೆಂದರೆ ಪ್ರತಿಸ್ಪರ್ಧಿ ಏರ್‌ಬಸ್ ದೇಶದಲ್ಲಿ ಪ್ರಾಬಲ್ಯ ಹೊಂದಿದೆ. ಇದು ಕೋವಿಡ್ ಸಾಂಕ್ರಾಮಿಕದ ಮೊದಲು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆ ಆಗಿದೆ. ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ನಿರ್ವಹಿಸುವ ಇಂಡಿಗೋ, ಯುರೋಪಿಯನ್ ತಯಾರಕರ ಉತ್ತಮ-ಮಾರಾಟದ ಉದ್ದನೆ ಮೈನ 700ಕ್ಕೂ ಹೆಚ್ಚು ಆರ್ಡರ್ ಮಾಡುವ ವಿಶ್ವದ ಅತಿದೊಡ್ಡ ಗ್ರಾಹಕವಾಗಿದೆ ಮತ್ತು ವಿಸ್ತಾರಾ, ಗೋ ಏರ್‌ಲೈನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಏರ್‌ಏಷ್ಯಾ ಇಂಡಿಯಾ ಲಿಮಿಟೆಡ್ ಸೇರಿದಂತೆ ಇತರವು ಒಂದೇ ಕುಟುಂಬಕ್ಕೆ ಸೇರಿದ ವಿಮಾನಗಳನ್ನು ಹಾರಿಸುತ್ತವೆ.
300 ವಿಮಾನಗಳ ಉತ್ಪಾದನೆ ಮತ್ತು ರವಾನೆಗೆ ವರ್ಷಗಳು ಅಥವಾ ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏರ್‌ಬಸ್ ಒಂದು ತಿಂಗಳಲ್ಲಿ ಸುಮಾರು 50 ನ್ಯಾರೋಬಾಡಿ ಜೆಟ್‌ಗಳನ್ನು ನಿರ್ಮಿಸುತ್ತದೆ, ಇದನ್ನು 2023ರ ಮಧ್ಯದ ವೇಳೆಗೆ 65ಕ್ಕೆ ಮತ್ತು 2025ರ ವೇಳೆಗೆ 75ಕ್ಕೆ ಹೆಚ್ಚಿಸಲು ಯೋಜಿಸಿದೆ. ಏರ್ ಇಂಡಿಯಾ ಮತ್ತು ಬೋಯಿಂಗ್‌ನ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಏರ್‌ಬಸ್ ಪ್ರತಿನಿಧಿಯೊಬ್ಬರು ಕಂಪೆನಿಯು ಯಾವಾಗಲೂ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕದಲ್ಲಿದೆ, ಆದರೆ ಯಾವುದೇ ಚರ್ಚೆಗಳು ಗೋಪ್ಯವಾಗಿರುತ್ತವೆ ಎಂದಿದೆ.
ಏರ್ ಇಂಡಿಯಾದ ಮಾಲೀಕ ಟಾಟಾ ಗ್ರೂಪ್ ಕೂಡ ಏರ್‌ಬಸ್ A350 ದೀರ್ಘ-ಶ್ರೇಣಿಯ ಜೆಟ್‌ಗಳ ಆರ್ಡರ್‌ಗೆ ಹತ್ತಿರದಲ್ಲಿದ್ದು, ಅದು ನವದೆಹಲಿಯಿಂದ ಅಮೆರಿಕದ ವೆಸ್ಟ್ ಕೋಸ್ಟ್‌ನವರೆಗೆ ಹಾರಬಲ್ಲದು ಎಂದು ಬ್ಲೂಮ್‌ಬರ್ಗ್ ನ್ಯೂಸ್ ಈ ತಿಂಗಳು ವರದಿ ಮಾಡಿದೆ. ಒಮ್ಮೆ ತನ್ನ ಪ್ರೀಮಿಯಂ ಸೇವೆಗಳು ಮತ್ತು ಬಾಲಿವುಡ್ ತಾರೆಯರನ್ನು ಒಳಗೊಂಡ ಜಾಹೀರಾತುಗಳಿಗೆ ಹೆಸರುವಾಸಿಯಾಗಿದ್ದ ವಿಮಾನಯಾನವು ಇನ್ನೂ ಹೆಚ್ಚಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಲಾಭದಾಯಕ ಲ್ಯಾಂಡಿಂಗ್ ಸ್ಲಾಟ್‌ಗಳನ್ನು ಹೊಂದಿದೆ. ಆದರೆ ಇದು ಭಾರತಕ್ಕೆ ತಡೆರಹಿತ ಸೇವೆಗಳೊಂದಿಗೆ ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಜೊತೆಗೆ ಮಧ್ಯಪ್ರಾಚ್ಯದಲ್ಲಿ ಹಬ್‌ಗಳ ಮೂಲಕ ಹಾರುವ ವಿಮಾನ ಯಾನ ಸಂಸ್ಥೆಗಳನ್ನು ಹೊಂದಿದೆ.
ಈ ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಅತ್ಯಂತ ಉನ್ನತ ಮಟ್ಟದ ಖಾಸಗೀಕರಣದಲ್ಲಿ ವಿಮಾನಯಾನವನ್ನು ಟಾಟಾ ಖರೀದಿಸಿತು. ಇದು ನಾಲ್ಕು ಏರ್‌ಲೈನ್ ಬ್ರಾಂಡ್‌ಗಳನ್ನು ಒಳಗೊಂಡಂತೆ ತನ್ನ ವಾಯುಯಾನ ವ್ಯವಹಾರಗಳನ್ನು ಏಕೀಕರಿಸುವ ನಿರೀಕ್ಷೆಯಿದೆ. ವಿಶೇಷವಾಗಿ ದೀರ್ಘಾವಧಿಯ ನಿರ್ವಹಣೆಗೆ ಅನುಕೂಲಕರವಾದ ನಿಯಮಗಳೊಂದಿಗೆ ಹೊಸ ವಿಮಾನಗಳ ಆರ್ಡರ್ ವೆಚ್ಚವನ್ನು ಕಡಿತಗೊಳಿಸಲು ಮತ್ತು ಅತ್ಯಂತ ಅಗ್ಗದ ದರಗಳನ್ನು ನೀಡುವ ಪ್ರತಿಸ್ಪರ್ಧಿಗಳೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಸಹಾಯ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Air India: ಏರ್ ಇಂಡಿಯಾ ಎಂಡಿ, ಸಿಇಒ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ಘೋಷಿಸಿದ ಟಾಟಾ ಸನ್ಸ್