Amazon Prime Shopping: ಅಮೇಜಾನ್ ಶಾಪಿಂಗ್ ಹಬ್ಬ; ವರ್ಷಕ್ಕೆ ಕೇವಲ 399 ರೂ; ಏನಿದರ ಪ್ರಯೋಜನಗಳು?

|

Updated on: Oct 06, 2023 | 7:15 PM

Great Indian Festival sale: ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಹಬ್ಬಕ್ಕೆ ಮುಂಚೆ ಪ್ರೈಮ್ ಶಾಪಿಂಗ್ ಎಡಿಶನ್ ಸ್ಕೀಮ್ ಅನ್ನು ಅಮೇಜಾನ್ ಬಿಡುಗಡೆ ಮಾಡಿದೆ. ಶಾಪಿಂಗ್ ವಿಚಾರದಲ್ಲಿ ಸದಸ್ಯರಿಗೆ ಹೆಚ್ಚು ಆದ್ಯತೆ ಮತ್ತು ತ್ವರಿತ ಹಾಗು ಉಚಿತ ಡೆಲಿವರಿ ಹೀಗೆ ಹಲವು ಪ್ರಯೋಜನಗಳನ್ನು ಈ ಸ್ಕೀಮ್ ಒದಗಿಸುತ್ತದೆ.

Amazon Prime Shopping: ಅಮೇಜಾನ್ ಶಾಪಿಂಗ್ ಹಬ್ಬ; ವರ್ಷಕ್ಕೆ ಕೇವಲ 399 ರೂ; ಏನಿದರ ಪ್ರಯೋಜನಗಳು?
ಅಮೇಜಾನ್
Follow us on

ನವದೆಹಲಿ, ಅಕ್ಟೋಬರ್ 6: ಇಕಾಮರ್ಸ್ ದೈತ್ಯ ಕಂಪನಿ ಅಮೇಜಾನ್ ಇದೀಗ ಪ್ರೈಮ್ ಶಾಪಿಂಗ್ ಎಡಿಶನ್ (Amazon Prime Shopping Edition) ಅನ್ನು ಬಿಡುಗಡೆ ಮಾಡಿದೆ. ಇದೇ ಭಾನುವಾರದಿಂದ (ಅಕ್ಟೋಬರ್ 8) ಅಮೇಜಾನ್​ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Great Indian Festival sale) ನಡೆಯುತ್ತಿದ್ದು, ಅದಕ್ಕೆ ಮುಂಚಿತವಾಗಿ ಪ್ರೈಮ್ ಮೆಂಬರ್​ಶಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಸದ್ಯ ಈ ಮೆಂಬರ್​ಶಿಪ್ ಲಭ್ಯವಿದ್ದು, ನಾಳೆಯಿಂದಲೇ (ಅಕ್ಟೋಬರ್ 7) ಇದರ ಸದಸ್ಯರಿಗೆ ಶಾಪಿಂಗ್ ಉತ್ಸವ ಆರಂಭವಾಗುತ್ತದೆ. ಇದರ ಸಬ್​ಸ್ಕ್ರಿಪ್ಷನ್ ಬೆಲೆ ವರ್ಷಕ್ಕೆ ಕೇವಲ 399 ರೂ ಇದ್ದು, ತ್ವರಿತ ಡೆಲಿವರಿ ಸೇರಿದಂತೆ ಹಲವಾರು ರೀತಿಯ ಪ್ರಯೋಜನಗಳನ್ನು ಸದಸ್ಯರಿಗೆ ಒದಗಿಸುತ್ತದೆ.

ಅಮೇಜಾನ್ ಪ್ರೈಮ್ ಶಾಪಿಂಗ್ ಆವೃತ್ತಿಯ ಕೆಲ ಹೈಲೈಟ್ಸ್

  • ಆಂಡ್ರಾಯ್ಡ್ ಫೋನ್ ಹೊಂದಿರುವವರಿಗೆ ಅಮೇಜಾನ್ ಪ್ರೈಮ್ ಶಾಪಿಂಗ್ ಎಡಿಶನ್ ಲಭ್ಯ ಇರುತ್ತದೆ. ಇದರ ಸಬ್​ಸ್ಕ್ರಿಪ್ಷನ್ ವರ್ಷಕ್ಕೆ 399 ರೂ ಇದೆ.
  • ಒಂದೇ ದಿನದಲ್ಲಿ ಡೆಲಿವರಿ, ಉಚಿತ ಶಿಪ್ಪಿಂಗ್ ಮತ್ತಿತರ ಹಲವು ಪ್ರಯೋಜನಗಳು ಸದಸ್ಯರಿಗೆ ಸಿಗುತ್ತದೆ.

ಇದನ್ನೂ ಓದಿ: Indigo Fuel Charge: ಅಗ್ಗದ ವಿಮಾನ ಪ್ರಯಾಣ ಸೇವೆ ನೀಡುವ ಇಂಡಿಗೋದಲ್ಲಿ ಟಿಕೆಟ್ ಬೆಲೆ ಇನ್ನು ದುಬಾರಿ; ಇಲ್ಲಿದೆ ನೂತನ ದರಗಳು

ಫ್ಲಿಪ್​ಕಾರ್ಟ್​ಗೆ ಸೆಡ್ಡು?

ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಅಮೇಜಾನ್​ಗೆ ಪ್ರಮುಖ ಪ್ರತಿಸ್ಪರ್ಧಿ ಇರುವುದು ಫ್ಲಿಪ್​ಕಾರ್ಟ್. ವಾಲ್ಮಾರ್ಟ್ ಬೆಂಬಲಿತ ಫ್ಲಿಪ್​ಕಾರ್ಟ್ ಇತ್ತೀಚೆಗಷ್ಟೇ ವಿಐಪಿ ಎಂಬ ಸಬ್​ಸ್ಕ್ರಿಪ್ಷನ್ ಸ್ಕೀಮ್ ಬಿಡುಗಡೆ ಮಾಡಿತ್ತು. ವರ್ಷಕ್ಕೆ 499 ರೂ ಬೆಲೆಯ ಈ ಮಾಡಲ್​ನಲ್ಲಿ ಹಲವು ಶಾಪಿಂಗ್ ಅನುಕೂಲತೆಗಳು ಮತ್ತು ಆದ್ಯತೆಗಳು ಸದಸ್ಯರಿಗೆ ಸಿಗುತ್ತವೆ. ಇದಕ್ಕೆ ಪ್ರತಿಯಾಗಿ ಅಮೇಜಾನ್ ತನ್ನ ಪ್ರೈಮ್ ಶಾಪಿಂಗ್ ಎಡಿಶನ್ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್​ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ

ಆದರೆ, ಅಮೇಜಾನ್​ನ ಈ ಸಬ್​ಸ್ಕ್ರಿಪ್ಷನ್ ಪಡೆದರೆ ಅದರ ಪ್ರೈಮ್ ವಿಡಿಯೋ, ಮ್ಯೂಸಿಕ್, ಗೇಮಿಂಗ್ ಮತ್ತಿತರ ಸರ್ವಿಸ್​ಗಳಿಗೆ ಅಕ್ಸೆಸ್ ಸಿಕ್ಕುವುದಿಲ್ಲ. ಇದು ಕೇವಲ ಶಾಪಿಂಗ್​ಗೆ ಮಾತ್ರವೇ ಸೀಮಿತವಾಗಿರುವ ಸಬ್​ಸ್ಕ್ರಿಪ್ಷನ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ