ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್​ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ

PIDF scheme period extended: ಪಾವತಿ ಸ್ವೀಕೃತಿ ಸಾಧನಗಳ ಅಳವಡಿಕೆಗೆ ಉತ್ತೇಜನ ನೀಡಲು ಆರಂಭಿಸಲಾದ ಪಿಎಐಡಿಎಫ್ ಸ್ಕೀಮ್ ಅನ್ನು ಎರಡು ವರ್ಷ ವಿಸ್ತರಿಸಲಾಗಿದೆ. 2025ರ ಡಿಸೆಂಬರ್ 31ರವರೆಗೂ ಇದು ಇರಲಿದೆ. ಪಿಎಂ ವಿಶ್ವಕರ್ಮ ಯೋಜನೆಯನ್ನು ಪಿಐಡಿಎಫ್ ವ್ಯಾಪ್ತಿಗೆ ತರಲಾಗಿದೆ. ಪಿಐಡಿಎಫ್ ಸ್ಕೀಮ್​ಗೆ ಆರ್​ಬಿಐ ಫಂಡಿಂಗ್ ಮಾಡುತ್ತದೆ. ಪಿಐಡಿಎಫ್ ಮತ್ತು ಪಿಎಂ ವಿಶ್ವಕರ್ಮ ಯೋಜನೆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್​ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ
ಪಿಒಎಸ್ ಸಾಧನ
Follow us
|

Updated on: Oct 06, 2023 | 2:23 PM

ನವದೆಹಲಿ, ಅಕ್ಟೋಬರ್ 6: ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಾರಿ ಮಾಡಲಾಗಿರುವ ಪೇಮೆಂಟ್ಸ್ ಇನ್​ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ ಸ್ಕೀಮ್​ನ (PIDF) ಅವಧಿಯನ್ನು ಎರಡು ವರ್ಷ ವಿಸ್ತರಿಸಲು ಆರ್​ಬಿಐ ನಿರ್ಧರಿಸಿದೆ. 2023ರಕ್ಕೆ ಅಂತ್ಯಗೊಳ್ಳಬೇಕಿದ್ದ ಈ ಸ್ಕೀಮ್ 2025 ಡಿಸೆಂಬರ್ 31ರವರೆಗೂ ಇರಲಿದೆ. ಅಲ್ಲದೇ, ಕೇಂದ್ರ ಸರ್ಕಾರ ಹೊಸದಾಗಿ ಪ್ರಟಿಸಿರುವ ಪಿಎಂ ವಿಶ್ವಕರ್ಮ ಯೋಜನೆಯನ್ನು ಪಿಐಡಿಎಫ್ ಸ್ಕೀಮ್ ವ್ಯಾಪ್ತಿಗೆ ತರಲಾಗಿದೆ. ಇಂದು ಮಾನಿಟರಿ ಪಾಲಿಸಿ ಕಮಿಟಿ ಸಭೆ ಬಳಿಕ ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ಏನಿದು ಪಿಐಡಿಎಫ್ ಸ್ಕೀಮ್?

ಈಶಾನ್ಯ ಭಾಗದ ರಾಜ್ಯಗಳು, ಜಮ್ಮು ಕಾಶ್ಮೀರ, ಲಡಾಖ್ ಮೊದಲಾದ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಕೆಳ ಸ್ತರದ ಪ್ರದೇಶಗಳಲ್ಲಿ (ಟಯರ್ 3 ಹಾಗು ಕೆಳಗಿನ ಕೇಂದ್ರಗಳು) ಪಾವತಿ ಸ್ವೀಕಾರ ಸಾಧನಗಳ ವ್ಯವಸ್ಥೆಯನ್ನು ಬೆಳೆಸುವುದು ಪಿಐಡಿಎಫ್ ಸ್ಕೀಮ್​ನ ಉದ್ದೇಶ. ಪಿಒಎಸ್, ಎಂಪಿಒಎಸ್ (ಮೊಬೈಲ್ ಪಾಯಿಂಟ್ ಆಫ್ ಸೇಲ್), ಕ್ಯೂಆರ್ ಕೋಡ್ ಆಧಾರಿತ ಪೇಮೆಂಟ್, ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್, ಪಿಎಸ್​ಟಿಎನ್ ಇತ್ಯಾದಿ ಕಾರ್ಡ್ ಪೇಮೆಂಟ್ ಡಿವೈಸ್​ಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಸಬ್ಸಿಡಿಗಳ ಮೂಲಕ ಉತ್ತೇಜನ ನೀಡಲಾಗುತ್ತದೆ.

ಇದನ್ನೂ ಓದಿ: ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿ 4 ಲಕ್ಷಕ್ಕೆ ಹೆಚ್ಚಳ; ಆರ್​ಬಿಐ ಮಹತ್ವದ ನಿರ್ಧಾರ

ಭೌತಿಕ ಪಿಒಎಸ್ ಸಾಧನಗಳಿಗೆ ಸಬ್ಸಿಡಿ ಶೇ. 30ರಿಂದ 50ರವರೆಗೂ ಇದೆ. ಡಿಜಿಟಲ್ ಪಿಒಎಸ್ ಸಾಧನಗಳಾದರೆ ಶೇ. 75ರವರೆಗೂ ಸಬ್ಸಿಡಿಗಳಿರುತ್ತವೆ. ಈ ಸ್ಕೀಮ್​ನಲ್ಲಿ ಆರ್​ಬಿಐನಿಂದಲೇ ಫಂಡಿಂಗ್ ನಡೆಯುತ್ತದೆ.

2023ರ ಆಗಸ್ಟ್ ತಿಂಗಳ ವೇಳೆಗೆ ಪಿಐಡಿಎಫ್ ಸ್ಕೀಮ್​ನಲ್ಲಿ 2.66 ಕೋಟಿ ಸಾಧನಗಳನ್ನು ಅಳವಡಿಸಲಾಗಿತ್ತು. 2023ರ ಡಿಸೆಂಬರ್ 31ರವರೆಗೂ ಇದ್ದ ಈ ಸ್ಕೀಮ್ ಅನ್ನು 2025ರ ಡಿಸೆಂಬರ್ 31ರವರೆಗೂ ವಿಸ್ತರಿಸಲಾಗಿದೆ.

2021ರ ಆಗಸ್ಟ್ ತಿಂಗಳಲ್ಲಿ ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳನ್ನು ಪಿಐಡಿಎಫ್ ಸ್ಕೀಮ್ ವ್ಯಾಪ್ತಿಗೆ ತರಲಾಗಿತ್ತು. ಇದೀಗ ಪಿಎಂ ವಿಶ್ವಕರ್ಮ ಯೋಜನೆಯನ್ನೂ ಒಳಗೊಳ್ಳಲಾಗಿದೆ.

ಇದನ್ನೂ ಓದಿ: ಆರ್​ಬಿಐ ಎಂಪಿಸಿ ಸಭೆ ಹೈಲೈಟ್ಸ್; ರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ; ಜಿಡಿಪಿ, ಹಣದುಬ್ಬರ ಅಂದಾಜು ವಿವರ ಇಲ್ಲಿದೆ

ಸೆಪ್ಟೆಂಬರ್ ತಿಂಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಬಡಗಿ, ಚಮ್ಮಾರ, ಕಮ್ಮಾರ, ಕುಂಬಾರ, ಶಿಲ್ಪಿ, ಕ್ಷೌರಿಕ ಇತ್ಯಾದಿ 18 ವಿವಿಧ ಕುಶಲಕರ್ಮಿಗಳಿಗೆ ತಂದಿರುವ ಯೋಜನೆಯಾಗಿದೆ. ವರ್ಷಕ್ಕೆ ಶೇ. 5ರ ಬಡ್ಡಿದರದಲ್ಲಿ 3 ಲಕ್ಷ ರೂವರೆಗೂ ಅಡಮಾನರಹಿತ ಸಾಲ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ