ಭಾರತದಲ್ಲಿ ಸ್ವಚ್ಛ ಇಂಧನ ಘಟಕಗಳಿಗೆ ಅಮೇಜಾನ್ ಹೆಚ್ಚುವರಿ 7 ಬಿಲಿಯನ್ ಡಾಲರ್ ಹೂಡಿಕೆ; ಕರ್ನಾಟಕದಲ್ಲಿ 2 ಯೋಜನೆಗಳು
ಭಾರತದಲ್ಲಿ ನವೀಕರಿಸಬಹುದಾದ ಇಂಧನ (Renewable Energy) ವಲಯದಲ್ಲಿ 2030ರೊಳಗೆ 7 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಅಮೆಜಾನ್ ಘೋಷಿಸಿದೆ. ಕರ್ನಾಟಕದಲ್ಲಿ ಎರಡು ಸೇರಿದಂತೆ ದೇಶದ ವಿವಿಧೆಡೆ ನಾಲ್ಕು ವಾಯುಶಕ್ತಿ, ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಮೇಜಾನ್ ಸ್ಥಾಪಿಸಲಿದೆ. ಇವುಗಳಿಂದ ಒಟ್ಟು 934 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಪಡೆಯಲು ಸಾಧ್ಯ. ಈಗಾಗಲೇ ಇರುವ ಘಟಕಗಳದ್ದೂ ಸೇರಿಸಿದರೆ ಅಮೇಜಾನ್ ವರ್ಷದಲ್ಲಿ 2 ಗಿಗಾವ್ಯಾಟ್ ಸ್ವಚ್ಛ ವಿದ್ಯುತ್ ಉತ್ಪಾದಿಸಬಲ್ಲುದು.

ನವದೆಹಲಿ, ನವೆಂಬರ್ 18: ವಿಶ್ವದ ಇ-ಕಾಮರ್ಸ್ ದೈತ್ಯನಾದ ಅಮೆಜಾನ್ ಸಂಸ್ಥೆಯು ಭಾರತದಲ್ಲಿ ನವೀಕರಣ ಇಂಧನ ಯೋಜನೆಗಳಿಗೆ ಭಾರೀ ಹೂಡಿಕೆ ಮಾಡಲಿದೆ. 7 ಬಿಲಿಯನ್ ಡಾಲರ್ ಅಥವಾ 65,000 ಕೋಟಿ ರೂ ವೆಚ್ಚದಲ್ಲಿ ನಾಲ್ಕು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಎರಡು ಯೋಜನೆಗಳು ಕರ್ನಾಟಕದಲ್ಲಿ ಇವೆ. 2030ರ ವೇಳೆಗೆ ಅಮೇಜಾನ್ ಈ ಹೂಡಿಕೆ ಮಾಡಲಿದೆ.
ಅಮೇಜಾನ್ ಈಗಾಗಲೇ ಕೈಗೊಂಡಿರುವ ಯೋಜನೆಗಳಿಗೆ 4 ಬಿಲಿಯನ್ ಡಾಲರ್ ವೆಚ್ಚಕ್ಕೆ ಬದ್ಧವಾಗಿದೆ. ಇದಲ್ಲದೆ 7 ಬಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಎನ್ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು
934 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಹೊಸ ಯೋಜನೆಗಳು
ಒಟ್ಟು 934 ಮೆಗಾವ್ಯಾಟ್ (MW) ಸಾಮರ್ಥ್ಯದ ನಾಲ್ಕು ಹೊಸ ಪವನ (Wind) ಮತ್ತು ಸೌರಶಕ್ತಿ (Solar) ಯೋಜನೆಗಳನ್ನು ಕಂಪನಿಯು ಕೈಗೊಳ್ಳುತ್ತಿದೆ.
ಇದರಲ್ಲಿ ಕರ್ನಾಟಕದಲ್ಲಿ 234 ಮೆಗಾವ್ಯಾಟ್ ಸಾಮರ್ಥ್ಯದ ವಾಯುಶಕ್ತಿ ವಿದ್ಯುತ್ ಸ್ಥಾವರ ಹಾಗೂ 200 ಮೆಗಾವ್ಯಾಟ್ ಸೌರ-ವಾಯುಶಕ್ತಿ ಹೈಬ್ರಿಡ್ ಫಾರ್ಮ್ ಸೇರಿವೆ. ಅಮೇಜಾನ್ ಕರ್ನಾಟಕದಲ್ಲಿ ಸ್ಥಾಪಿಸಲಿರುವ 234 ಮೆ.ವ್ಯಾ. ಸಾಮರ್ಥ್ಯದ ವಾಯುಶಕ್ತಿ ಘಟಕವು ಏಷ್ಯಾದಲ್ಲೇ ಅದರ ಅತಿ ದೊಡ್ಡ ಪವನ ಯೋಜನೆ ಎನಿಸಲಿದೆ. ಉಳಿದಂತೆ ಮಧ್ಯಪ್ರದೇಶದಲ್ಲಿ 300 ಮೆಗಾವ್ಯಾಟ್ ಮತ್ತು ರಾಜಸ್ಥಾನದಲ್ಲಿ 200 ಮೆಗಾವ್ಯಾಟ್ ಸೌರಶಕ್ತಿ ಯೋಜನೆಗಳು ಸೇರಿವೆ.
ಸ್ವಚ್ಛ ಇಂಧನ ಪೋರ್ಟ್‌ಫೋಲಿಯೋ ವೃದ್ಧಿ
ಈ ಹೊಸ ಯೋಜನೆಗಳೊಂದಿಗೆ ಭಾರತದಲ್ಲಿ ಅಮೆಜಾನ್‌ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 2 ಗಿಗಾವ್ಯಾಟ್ (GW) ದಾಟಲಿದೆ. ಇದು ದೇಶದ ಸುಮಾರು 3.5 ದಶಲಕ್ಷಕ್ಕೂ ಹೆಚ್ಚು ಮನೆಗಳ ವಾರ್ಷಿಕ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ.
ಇದನ್ನೂ ಓದಿ: ಹಿಂಬಾಗಿಲ ಮೂಲಕ ಟಾಟಾ ಸನ್ಸ್ ಲಪಟಾಯಿಸುವ ಯತ್ನ: ನೋಯೆಲ್ ಟಾಟಾ ವಿರುದ್ಧ ರತನ್ ಟಾಟಾ ಸೋದರ ಆರೋಪ
2040ರ ವೇಳೆಗೆ ಸಂಪೂರ್ಣವಾಗಿ ‘ನೆಟ್-ಜೀರೋ’ (Net-zero carbon emissions) ಗುರಿಯನ್ನು ತಲುಪುವ ತನ್ನ ಬದ್ಧತೆಯ ಭಾಗವಾಗಿ ಅಮೆಜಾನ್ ಈ ಹೂಡಿಕೆಗಳನ್ನು ಮಾಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




