ನವದೆಹಲಿ, ಡಿಸೆಂಬರ್ 17: ಪರಿಸರಸ್ನೇಹಿ ಇಂಧನ ಎನಿಸಿದ ಹೈಡ್ರೋಜನ್ ಉತ್ಪಾದನೆಗೆ ಅಗತ್ಯವಾಗಿರುವ ಎಲೆಕ್ಟ್ರೋಲೈಸರ್ನ (electrolyser manufacturing) ತಯಾರಿಕೆಗೆ ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು 21 ಕಂಪನಿಗಳು ಬಿಡ್ ಸಲ್ಲಿಸಿವೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮಾಲಕತ್ವದ ಕಂಪನಿಗಳೂ ಬಿಡ್ ಹಾಕಿವೆ. ವರ್ಷಕ್ಕೆ 3.4 ಗೀಗಾ ವ್ಯಾಟ್ ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯದ ಘಟಕಗಳನ್ನು (3.4 GW production capacity facility) ಸ್ಥಾಪಿಸುವುದಾಗಿ ಈ ಕಂಪನಿಗಳು ಹೇಳಿವೆ. ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್, ಎಲ್ ಅಂಡ್ ಟಿ ಎಲೆಕ್ಟ್ರೋಲೈಸರ್ಸ್, ಬಿಎಚ್ಇಎಲ್ ಸಂಸ್ಥೆಗಳೂ ಕೂಡ ಪೈಪೋಟಿ ನಡೆಸಿವೆ.
ಸರ್ಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಶನ್ (ಎಸ್ಇಸಿಐ) ಎಲೆಕ್ಟ್ರೋಲೈಸರ್ ತಯಾರಿಕೆಗೆ 1.5 ಗೀಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಜುಲೈ 7ರಂದು ಬಿಡ್ ಆಹ್ವಾನಿಸಿತ್ತು. ಹಾಗೆಯೇ 4,50,000 ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕ ಸ್ಥಾಪನೆಗೂ ಬಿಡ್ ಕರೆದಿತ್ತು. ಇದರಲ್ಲಿ 1.5 ಗೀಗಾ ವ್ಯಾಟ್ ಬಿಡ್ಡಿಂಗ್ಗೆ 21 ಕಂಪನಿಗಳು 3.4 ಗೀಗಾ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ ಬಿಡ್ ಸಲ್ಲಿಸಿವೆ.
ಇನ್ನು, 4.5 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆಗೆ ಕರೆಯಲಾದ ಬಿಡ್ನಲ್ಲಿ 15 ಕಂಪನಿಗಳು 5.53 ಲಕ್ಷ ಟನ್ ಉತ್ಪಾದನಾ ಘಟಕ ಸ್ಥಾಪಿಸಲು ಬಿಡ್ ಸಲ್ಲಿಸಿವೆ. ರಿಲಾಯನ್ಸ್ ಗ್ರೂಪ್ ಮಾಲಕತ್ವದ ಸಂಸ್ಥೆಗಳು ಈ ಎರಡೂ ಬಿಡ್ಗಳಲ್ಲಿ ಪಾಲ್ಗೊಂಡಿರುವುದು ವಿಶೇಷ.
ಇದನ್ನೂ ಓದಿ: ಅಂಬಾನಿ ಅಣ್ತಮ್ಮ ಕಥೆ; ತಮ್ಮ ಹೊಂದಿರುವ ಈ ಸಂಪತ್ತಿಗಿಂತ ಎರಡು ಪಟ್ಟು ಹಣ, ಅಣ್ಣನ ಒಂದು ದಿನ ದಾನಕ್ಕೆ ಸಮ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ