Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವರೀನ್ ಗೋಲ್ಡ್ ಬಾಂಡ್: ಗ್ರಾಮ್​ಗೆ 6,199 ರೂ; ಆನ್ಲೈನ್​ನಲ್ಲಿ ಖರೀದಿಸಿದರೆ ಡಿಸ್ಕೌಂಟ್; ಈ ಸ್ಕೀಮ್ ಯಾಕೆ ಬೆಸ್ಟ್?

Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಡಿಸೆಂಬರ್ 18ರಿಂದ ಆರಂಭವಾಗಿ 22ರವರೆಗೆ ಓಪನ್ ಆಫರ್ ಇದೆ. ಗ್ರಾಮ್​ಗೆ 6,199 ರೂನಂತೆ ಚಿನ್ನದ ಮೇಲೆ ಹೂಡಿಕೆ ಸಾಧ್ಯ. ಆನ್​ಲೈನ್​ಲ್ಲಿ ಎಸ್​ಜಿಬಿ ಸ್ಕೀಮ್ ಪಡೆದು, ಡಿಜಿಟಲ್ ಪಾವತಿ ಮಾಡಿದರೆ ಗ್ರಾಮ್​ಗೆ 50 ರೂ ಡಿಸ್ಕೌಂಟ್ ಕೂಡ ಸಿಗುತ್ತದೆ. ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಧ್ಯ.

ಸಾವರೀನ್ ಗೋಲ್ಡ್ ಬಾಂಡ್: ಗ್ರಾಮ್​ಗೆ 6,199 ರೂ; ಆನ್ಲೈನ್​ನಲ್ಲಿ ಖರೀದಿಸಿದರೆ ಡಿಸ್ಕೌಂಟ್; ಈ ಸ್ಕೀಮ್ ಯಾಕೆ ಬೆಸ್ಟ್?
ಸಾವರೀನ್ ಗೋಲ್ಡ್ ಬಾಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2023 | 3:16 PM

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ 2023-24 ರ ವರ್ಷದ ಸಾಲಿನ ಮೂರನೇ ಸರಣಿ (Sovereign Gold Bond Scheme 2023-24 Series III) ನಾಳೆ ಶುರುವಾಗುತ್ತದೆ. ಐದು ದಿನಗಳ ಕಾಲ (ಡಿಸೆಂಬರ್ 18ರಿಂದ 22ರವರೆಗೆ) ಇದು ಸಬ್​ಸ್ಕ್ರಿಪ್ಷನ್​ಗೆ ಲಭ್ಯ ಇರುತ್ತದೆ. ಸ್ಕೀಮ್ ಖರೀದಿಸಿದದವರಿಗೆ ಡಿಸೆಂಬರ್ 28ರಂದು ಬಾಂಡ್ ವಿತರಿಸಲಾಗುತ್ತದೆ. ಈ ಸರಣಿಯಲ್ಲಿ ಅರ್​ಬಿಐ ಒಂದು ಗ್ರಾಮ್ ಚಿನ್ನವನ್ನು 6,199 ರೂಗೆ ನಿಗದಿ ಮಾಡಿದೆ. ಅಂದರೆ ಈ ದರದಲ್ಲಿ ಜನರು ಎಸ್​ಜಿಬಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಇವತ್ತು ಅಪರಂಜಿ ಚಿನ್ನದ ಮಾರುಕಟ್ಟೆ ಬೆಲೆ ಗ್ರಾಮ್​ಗೆ 6,250 ರುಪಾಯಿಗೂ ಹೆಚ್ಚಿದೆ. ಎಸ್​ಜಿಬಿ ಸ್ಕೀಮ್​ಗೆ ನಿಗದಿ ಮಾಡಿರುವ ಬೆಲೆ ವಾರದ ಹಿಂದಿನದ್ದು. ಗ್ರಾಮ್​ಗೆ 250 ರುಪಾಯಿಗೂ ಕಡಿಮೆ ಬೆಲೆಗೆ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.

ಆನ್​ಲೈನ್​​ನಲ್ಲಿ ಹಣ ಪಾವತಿ ಮಾಡಿದರೆ 50 ರೂ ರಿಯಾಯಿತಿ….

ಆನ್​ಲೈನ್​ನಲ್ಲಿ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಅರ್ಜಿ ಸಲ್ಲಿಸುವವರಿಗೆ ಮತ್ತು ಆನ್​ಲೈನ್​ನಲ್ಲೇ ಹಣ ಪಾವತಿ ಮಾಡುವವರಿಗೆ ಒಂದು ಗ್ರಾಮ್ ಚಿನ್ನಕ್ಕೆ 50 ರೂ ಡಿಸ್ಕೌಂಟ್ ಕೊಡಲಾಗುತ್ತದೆ. ಅಂದರೆ ಗ್ರಾಮ್​ಗೆ 6,149 ರುಪಾಯಿಯಂತೆ ನೀವು ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಆಲೋಚನೆಯಾ? ಫೈವ್ ಸ್ಟಾರ್ ರೇಟಿಂಗ್ ಇರುವ ಜನಪ್ರಿಯ ಫಂಡ್​ಗಳಿವು…

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ಯಾರು ಹೂಡಿಕೆ ಮಾಡಬಹುದು?

ಯಾವುದೇ ಭಾರತೀಯ ಪ್ರಜೆಗಳು, ಹಿಂದೂ ಅವಿಭಜಿತ ಕುಟುಂಬ, ಟ್ರಸ್ಟ್, ಯೂನಿವರ್ಸಿಟಿ ಮತ್ತು ಚಾರಿಟಿ ಸಂಸ್ಥೆಗಳು ಎಸ್​ಜಿಬಿಯಲ್ಲಿ ಹೂಡಿಕೆ ಮಾಡಬಹುದು. ವ್ಯಕ್ತಿಯಾದರೆ ಒಂದು ಗ್ರಾಮ್ ಚಿನ್ನದಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಸಂಸ್ಥೆಯಾದರೆ 20 ಕಿಲೋವರೆಗೂ ಹೂಡಿಕೆ ಸಾಧ್ಯ.

ಗಮನಿಸಿ, ಈ ಮಿತಿ ಅಥವಾ ಅವಕಾಶವು ಒಂದು ಹಣಕಾಸು ವರ್ಷಕ್ಕೆ ನಿಗದಿಯಾಗಿರುವಂತಹದ್ದು. ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಾಂಡ್​ಗಳನ್ನು ಪಡೆಯಬಹುದು. ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎಷ್ಟು ಬೇಕಾದರೂ ಬಾಂಡ್ ಪಡೆಯಬಹುದಾದರೂ ಹೂಡಿಕೆ ಮಿತಿ ಒಟ್ಟು 4 ಕಿಲೋ ಮಾತ್ರವೇ. ಹಿಂದಿನ ಸರಣಿಯಲ್ಲಿ 3 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಈ ಬಾರಿ ಗರಿಷ್ಠ 1 ಕಿಲೋ ಚಿನ್ನಕ್ಕೆ ಮಾತ್ರ ಹಣ ಹಾಕಬಹುದು.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಎಸ್​ಜಿಬಿ ಎಷ್ಟು ವರ್ಷದ ಹೂಡಿಕೆ?

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ 8 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಮಧ್ಯೆಮಧ್ಯೆ ಹಣ ಕಟ್ಟುವ ಅವಶ್ಯಕತೆ ಇಲ್ಲ. ಆರು ತಿಂಗಳಿಗೊಮ್ಮೆ ನಿಮ್ಮ ಹೂಡಿಕೆಯ ಮೊತ್ತಕ್ಕೆ ಶೇ. 2.50ರಷ್ಟು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ