ಅಂಬಾನಿ ಅಣ್ತಮ್ಮ ಕಥೆ; ತಮ್ಮ ಹೊಂದಿರುವ ಈ ಸಂಪತ್ತಿಗಿಂತ ಎರಡು ಪಟ್ಟು ಹಣ, ಅಣ್ಣನ ಒಂದು ದಿನ ದಾನಕ್ಕೆ ಸಮ

Anil Ambani's Shareholding In Reliance communications: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಷೇರುಬೆಲೆ ಸದ್ಯ 2.30 ರೂ ಇದೆ. ಇದರಲ್ಲಿ ಅವರು 18 ಲಕ್ಷ ಷೇರು ಹೊಂದಿದ್ದಾರೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್​ನಲ್ಲಿ ಅನಿಲ್ ಅಂಬಾನಿ ಹೊಂದಿರುವ ಒಟ್ಟೂ ಷೇರುಗಳ ಒಟ್ಟು ಮೌಲ್ಯ 50 ಲಕ್ಷ ರೂಗಿಂತ ಕಡಿಮೆ. ಅವರ ಅಣ್ಣ ಮುಕೇಶ್ ಅಂಬಾನಿ ಒಂದು ದಿನದಲ್ಲಿ ಮಾಡುವ ದಾನ 1 ಕೋಟಿ ರೂಗಿಂತಲೂ ಹೆಚ್ಚು.

ಅಂಬಾನಿ ಅಣ್ತಮ್ಮ ಕಥೆ; ತಮ್ಮ ಹೊಂದಿರುವ ಈ ಸಂಪತ್ತಿಗಿಂತ ಎರಡು ಪಟ್ಟು ಹಣ, ಅಣ್ಣನ ಒಂದು ದಿನ ದಾನಕ್ಕೆ ಸಮ
ಅಂಬಾನಿ ಸಹೋದರರು
Follow us
|

Updated on: Dec 17, 2023 | 11:28 AM

ಮುಂಬೈ, ಡಿಸೆಂಬರ್ 17: ಒಂದು ಕಾಲದಲ್ಲಿ ಧೀರೂಭಾಯ್ ಅಂಬಾನಿ ಅವರ ಉದ್ಯಮ ಸಾಮ್ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ನಿರೀಕ್ಷೆ ಮೂಡಿಸಿದ್ದ, ಹಾಗೂ ವಿಶ್ವ ಶ್ರೀಮಂತರ ಪೈಕಿ ಸ್ಥಾನ ಕೂಡ ಪಡೆದಿದ್ದ ಕಿರಿಯ ಮಗ ಅನಿಲ್ ಅಂಬಾನಿ ಇವತ್ತು ಯಾವ ಸ್ಥಿತಿಗೆ ಜಾರಿದ್ದಾರೆ ಎಂಬುದು ಬಹಳ ಮಂದಿಗೆ ಸೋಜಿಗ ತಂದಿರುವ ಸಂಗತಿ. ಸಾಲದ ಮೇಲೆ ಸಾಲಗಳು ಬೆಳೆದು ಅನಿಲ್ ಅಂಬಾನಿ (anil ambani) ಬಿಕ್ಕಟ್ಟುಗಳ ಪಟ್ಟಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಇನ್ನೊಂದೆಡೆ, ಅವರ ಅಣ್ಣ ಮುಕೇಶ್ ಅಂಬಾನಿ ಅವರ ಉದ್ಯಮ ಸಾಮ್ರಾಜ್ಯ ಬೆಳೆಯುತ್ತಲೇ ಹೋಗುತ್ತಿದೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯಲ್ಲಿ ಅನಿಲ್ ಅಂಬಾನಿ ಹೊಂದಿರುವ ಷೇರುಸಂಪತ್ತಿನ (Anil Ambani’s holdings in Reliance Communications) ಮೌಲ್ಯದಷ್ಟು ಹಣವು ಮುಕೇಶ್ ಅಂಬಾನಿ ಅವರ ಒಂದು ದಿನ ದಾನದ ಮೊತ್ತಕ್ಕೆ ಸಮ ಎನಿಸಿದೆ.

ರಿಲಾಯನ್ಸ್ ಕಮ್ಯೂನಿಕೇಶನ್ಸ್ ಅನಿಲ್ ಅಂಬಾನಿ ಮಾಲಿಕತ್ವದ ಕಂಪನಿ. ಒಂದು ಕಾಲದಲ್ಲಿ ಓಡುವ ಕುದುರೆಯಾಗಿದ್ದಂಥ ಸಂಸ್ಥೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಷೇರು 821 ರೂವರೆಗೆ ಬೆಲೆ ಹೊಂದಿತ್ತು. ಈಗ ಅದರ ಷೇರುಬೆಲೆ ಕೇವಲ 2.30 ರೂಗೆ ಕುಸಿದುಹೋಗಿದೆ. ಒಂದು ಹಂತದಲ್ಲಿ ಕೇವಲ 1 ರುಪಾಯಿಗೆ ಇಳಿದಿತ್ತು. ಅದರ ಮೇಲೆ ಹಣ ಹಾಕಿದ್ದವರ ಕಥೆ ದೇವರಿಗೇ ಪ್ರೀತಿ.

ಇದನ್ನೂ ಓದಿ: Success: ಕುಗ್ರಾಮದಿಂದ ಬೆಳೆದು ಬೆಂಗಳೂರಿನಲ್ಲಿ 3,000 ಕೋಟಿ ರೂ ಉದ್ಯಮ ಸಾಮ್ರಾಜ್ಯ ಕಟ್ಟಿದ ಐಡಿ ಫ್ರೆಷ್ ಫುಡ್ ಸಿಇಒ

ಅನಿಲ್ ಅಂಬಾನಿ ಅವರು ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯಲ್ಲಿ 18 ಲಕ್ಷದಷ್ಟು ಷೇರುಗಳನ್ನು ಹೊಂದಿದ್ದಾರೆ. ಷೇರುಬೆಲೆ ಗರಿಷ್ಠ ಮಟ್ಟದಲ್ಲಿ ಇದ್ದಿದ್ದರೆ ರಿಲಾಯನ್ಸ್​ನಲ್ಲಿ ಅವರ ಆಸ್ತಿಪಾಲು ಸುಮಾರು 150 ಕೋಟಿ ರೂ ಆಗಿರುತ್ತಿತ್ತು. ಈಗ ಅವರ ಒಟ್ಟೂ ಷೇರುಸಂಪತ್ತು 50 ಲಕ್ಷ ರೂ ಕೂಡ ಆಗುವುದಿಲ್ಲ.

ಇನ್ನೊಂದೆಡೆ, ಮುಕೇಶ್ ಅಂಬಾನಿ ತಮ್ಮ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ದಾನವಾಗಿ ನೀಡುತ್ತಾರೆ. ಅವರ ದಾನದ ಪ್ರಮಾಣ ಒಂದು ದಿನಕ್ಕೆ 1 ಕೋಟಿ ರೂಗಿಂತ ಹೆಚ್ಚೇ ಆಗುತ್ತದೆ. ಅಂದರೆ, ರಿಲಾಯನ್ಸ್ ಕಮ್ಯೂನಿಕೇಶನ್ಸ್​ನಲ್ಲಿ ಕಿರಿಯ ಸಹೋದರ ಹೊಂದಿರುವ ಷೇರುಸಂಪತ್ತಿನ ಹಣದ ಎರಡು ಪಟ್ಟು ಹೆಚ್ಚು ಹಣವನ್ನು ಅಣ್ಣ ದಾನ ಮಾಡುತ್ತಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 20.58 ಬಿಲಿಯನ್ ಡಾಲರ್; ರಫ್ತು ಮತ್ತು ಆಮದು ಅಂತರದಲ್ಲಿ ಗಣನೀಯ ಇಳಿಕೆ

ರಿಲಾಯನ್ಸ್ ಕಮ್ಯೂನಿಕೇಶನ್ಸ್​ನ ಈಗಿರುವ ಒಟ್ಟು ಷೇರುಸಂಪತ್ತು ಸುಮಾರು 650 ಕೋಟಿ ರೂನಷ್ಟು ಇದೆ. ಹಿಂದಿನ ಬೆಲೆ ಉಳಿಸಿಕೊಂಡಿದ್ದರೆ ಇದು ಇವತ್ತು ಕೆಲವಾರು ಲಕ್ಷ ಕೋಟಿ ರೂಗಳ ಮಾರ್ಕೆಟ್ ಕ್ಯಾಪ್ ಹೊಂದಿರುತ್ತಿತ್ತು. ಅನಿಲ್ ಅಂಬಾನಿ ತಮ್ಮ ಈ ಕಂಪನಿಯಲ್ಲಿ ಹಿಂದೆ ಇನ್ನೂ ಹೆಚ್ಚಿನ ಷೇರುಪಾಲು ಹೊಂದಿದ್ದರು. ಆದರೆ, ಸಾಕಷ್ಟು ಷೇರುಗಳನ್ನು ಬಿಕರಿ ಮಾಡಿದ್ದಾರೆ. ಇವತ್ತು 18 ಲಕ್ಷ ಷೇರು ಮಾತ್ರ ಅವರ ಪಾಲಿಗೆ ಉಳಿದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?