AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಡ್ರೋಜನ್ ಉತ್ಪಾದನೆಗೆ ಬೇಕಾದ ಎಲೆಕ್ಟ್ರೋಲೈಸರ್ ಘಟಕಕ್ಕೆ 21 ಕಂಪನಿಗಳಿಂದ ಬಿಡ್; ಪೈಪೋಟಿಯಲ್ಲಿ ಅಂಬಾನಿ, ಅದಾನಿ, ಜಿಂದಾಲ್

Electrolyser Manufacturing Facility for SECI: ಸರ್ಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಶನ್ 1.5 ಗಿಗಾವ್ಯಾಟ್ ಸಾಮರ್ಥ್ಯದ ಎಲೆಕ್ಟ್ರೋಲೈಸರ್ ಘಟಕ ಸ್ಥಾಪನೆಗೆ ಕರೆದಿದ್ದ ಬಿಡ್​ಗೆ 21 ಕಂಪನಿಗಳು ಅರ್ಜಿ ಹಾಕಿವೆ. ಪರಿಸರಸ್ನೇಹಿ ಇಂಧನ ಎನಿಸಿದ ಹೈಡ್ರೋಜನ್ ಉತ್ಪಾದನೆಗೆ ಎಲೆಕ್ಟ್ರೋಲೈಸರ್ ಮುಖ್ಯವಾಗಿದೆ. ಇನ್ನು, 5.53 ಲಕ್ಷ ಟನ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಘಟಕಕ್ಕೆ 15 ಕಂಪನಿಗಳು ಬಿಡ್ ಸಲ್ಲಿಸಿವೆ.

ಹೈಡ್ರೋಜನ್ ಉತ್ಪಾದನೆಗೆ ಬೇಕಾದ ಎಲೆಕ್ಟ್ರೋಲೈಸರ್ ಘಟಕಕ್ಕೆ 21 ಕಂಪನಿಗಳಿಂದ ಬಿಡ್; ಪೈಪೋಟಿಯಲ್ಲಿ ಅಂಬಾನಿ, ಅದಾನಿ, ಜಿಂದಾಲ್
ಎಲೆಕ್ಟ್ರೋಲೈಸರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 17, 2023 | 1:09 PM

ನವದೆಹಲಿ, ಡಿಸೆಂಬರ್ 17: ಪರಿಸರಸ್ನೇಹಿ ಇಂಧನ ಎನಿಸಿದ ಹೈಡ್ರೋಜನ್ ಉತ್ಪಾದನೆಗೆ ಅಗತ್ಯವಾಗಿರುವ ಎಲೆಕ್ಟ್ರೋಲೈಸರ್​ನ (electrolyser manufacturing) ತಯಾರಿಕೆಗೆ ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು 21 ಕಂಪನಿಗಳು ಬಿಡ್ ಸಲ್ಲಿಸಿವೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮಾಲಕತ್ವದ ಕಂಪನಿಗಳೂ ಬಿಡ್ ಹಾಕಿವೆ. ವರ್ಷಕ್ಕೆ 3.4 ಗೀಗಾ ವ್ಯಾಟ್ ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯದ ಘಟಕಗಳನ್ನು (3.4 GW production capacity facility) ಸ್ಥಾಪಿಸುವುದಾಗಿ ಈ ಕಂಪನಿಗಳು ಹೇಳಿವೆ. ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್, ಎಲ್ ಅಂಡ್ ಟಿ ಎಲೆಕ್ಟ್ರೋಲೈಸರ್ಸ್, ಬಿಎಚ್​ಇಎಲ್ ಸಂಸ್ಥೆಗಳೂ ಕೂಡ ಪೈಪೋಟಿ ನಡೆಸಿವೆ.

ಸರ್ಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಶನ್ (ಎಸ್​ಇಸಿಐ) ಎಲೆಕ್ಟ್ರೋಲೈಸರ್ ತಯಾರಿಕೆಗೆ 1.5 ಗೀಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಜುಲೈ 7ರಂದು ಬಿಡ್ ಆಹ್ವಾನಿಸಿತ್ತು. ಹಾಗೆಯೇ 4,50,000 ಟನ್ ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕ ಸ್ಥಾಪನೆಗೂ ಬಿಡ್ ಕರೆದಿತ್ತು. ಇದರಲ್ಲಿ 1.5 ಗೀಗಾ ವ್ಯಾಟ್ ಬಿಡ್ಡಿಂಗ್​ಗೆ 21 ಕಂಪನಿಗಳು 3.4 ಗೀಗಾ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ ಬಿಡ್ ಸಲ್ಲಿಸಿವೆ.

ಇನ್ನು, 4.5 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆಗೆ ಕರೆಯಲಾದ ಬಿಡ್​ನಲ್ಲಿ 15 ಕಂಪನಿಗಳು 5.53 ಲಕ್ಷ ಟನ್ ಉತ್ಪಾದನಾ ಘಟಕ ಸ್ಥಾಪಿಸಲು ಬಿಡ್ ಸಲ್ಲಿಸಿವೆ. ರಿಲಾಯನ್ಸ್ ಗ್ರೂಪ್ ಮಾಲಕತ್ವದ ಸಂಸ್ಥೆಗಳು ಈ ಎರಡೂ ಬಿಡ್​ಗಳಲ್ಲಿ ಪಾಲ್ಗೊಂಡಿರುವುದು ವಿಶೇಷ.

ಇದನ್ನೂ ಓದಿ: ಅಂಬಾನಿ ಅಣ್ತಮ್ಮ ಕಥೆ; ತಮ್ಮ ಹೊಂದಿರುವ ಈ ಸಂಪತ್ತಿಗಿಂತ ಎರಡು ಪಟ್ಟು ಹಣ, ಅಣ್ಣನ ಒಂದು ದಿನ ದಾನಕ್ಕೆ ಸಮ

3.4 ಗೀಗಾ ವ್ಯಾಟ್ ಎಲೆಕ್ಟ್ರೋಲೈಸರ್ ಘಟಕ ಸ್ಥಾಪನೆಗೆ ಬಿಡ್​ ಸಲ್ಲಿಸಿರುವ ಕಂಪನಿಗಳು

  1. ಅದಾನಿ ನ್ಯೂ ಇಂಡಸ್ಟ್ರೀಸ್
  2. ರಿಲಾಯನ್ಸ್ ಎಲೆಕ್ಟ್ರೋಲೈಸರ್ ಮ್ಯಾನುಫ್ಯಾಕ್ಚರಿಂಗ್
  3. ಎಲ್ ಅಂಡ್ ಟಿ ಎಲೆಕ್ಟ್ರೋಲೈಸರ್ಸ್
  4. ಬಿಎಚ್​ಇಎಲ್
  5. ಹಿಲ್ಡ್ ಎಲೆಕ್ಟ್ರಿಕ್ ಪ್ರೈವೇಟ್
  6. ಓಹ್ಮಿಯಮ್ ಆಪರೇಷನ್ಸ್
  7. ಜಾನ್ ಕಾಕೆರಿಲ್ ಗ್ರೀನ್​ಕೋ ಹೈಡ್ರೋಜನ್ ಸಲ್ಯೂಶನ್ಸ್
  8. ವಾರೀ ಎನರ್ಜೀಸ್
  9. ಜಿಂದಾಲ್ ಇಂಡಿಯಾ
  10. ಅವಾಡ ಎಲೆಕ್ಟ್ರೋಲೈಸರ್
  11. ಗ್ರೀನ್ ಹೆಚ್2 ನೆಟ್ವರ್ಕ್ ಇಂಡಿಯ
  12. ಅದ್ವೈತ್ ಇನ್​ಫ್ರಾಟೆಕ್
  13. ಎಸಿಎಂಇ ಕ್ಲೀನ್​ಟೆಕ್ ಸಲ್ಯೂಶನ್ಸ್
  14. ಓರಿಯಾನ ಪವರ್
  15. ಮ್ಯಾಟ್ರಿಕ್ಸ್ ಗ್ಯಾಸ್ ಅಂಡ್ ರಿನಿವಬಲ್ಸ್
  16. ಎಚ್​ಎಚ್​ಪಿ ಸೆವೆನ್
  17. ಹೋಮಿ ಹೈಡ್ರೋಜನ್
  18. ನ್ಯೂಟ್ರೇಸ್
  19. ಸಿ ಡಾಕ್ಟರ್ ಅಂಡ್ ಕಂಪನಿ
  20. ಪ್ರತಿಷ್ಣ ಎಂಜಿನಿಯರ್ಸ್
  21. ಲಿವ್​ಹೈ ಎನರ್ಜಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ