ನವದೆಹಲಿ, ಸೆಪ್ಟೆಂಬರ್ 19: ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಿಸುವ ಅನಲಾಗ್ ಡಿವೈಸಸ್ (ಎಡಿಐ) ಜೊತೆ ಟಾಟಾ ಗ್ರೂಪ್ ಒಪ್ಪಂದಕ್ಕೆ ಸಹಿ ಹಾಕಿದೆ. ಇವೆರಡೂ ಸಂಸ್ಥೆಗಳು ಭಾರತದಲ್ಲಿ ಜಂಟಿಯಾಗಿ ಚಿಪ್ಗಳನ್ನು ತಯಾರಿಸಲಿವೆ. ಟಾಟಾ ಎಲೆಕ್ಟ್ರಾನಿಕ್ಸ್ನ ಫ್ಯಾಬ್ ಘಟಕಗಳಲ್ಲಿ ಎಡಿಐನ ವಿವಿಧ ಉತ್ಪನ್ನಗಳನ್ನು ತಯಾರಿಸುವ ನಿರೀಕ್ಷೆ ಇದೆ. ‘ಗುಜರಾತ್ನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ನ ಫ್ಯಾಬ್ ಘಟಕದಲ್ಲಿ ಮತ್ತು ಅಸ್ಸಾಮ್ನಲ್ಲಿರುವ ಅಸೆಂಬ್ಲಿಂಗ್ ಘಟಕದಲ್ಲಿ ಎಡಿನ ಉತ್ಪನ್ನಗಳನ್ನು ತಯಾರಿಸುವ ಅವಕಾಶವನ್ನು ಅವಲೋಕಿಸಲಾಗುತ್ತಿದೆ,’ ಎಂದು ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಕ ಕಂಪನಿ ಹೇಳಿಕೆ ನೀಡಿದೆ.
ಟಾಟಾ ಗ್ರೂಪ್ಗೆ ಸೇರಿದ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಗುಜರಾತ್ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಯೂನಿಟ್ ಅನ್ನು ಸ್ಥಾಪಿಸುತ್ತಿದೆ. 14 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಇದು ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಆಗುತ್ತದೆ. ಅಸ್ಸಾಮ್ನಲ್ಲಿ ಚಿಪ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಘಟಕ ನಿರ್ಮಿಸುತ್ತಿದೆ.
ಇದನ್ನೂ ಓದಿ: ಎಂಎಸ್ಸಿಐ ಐಎಂಐ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; ವಿಶ್ವದ ಆರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ
ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ 60 ವರ್ಷದ ಹಿಂದೆ ಸ್ಥಾಪನೆಯಾಗಿದೆ. ಅನಲಾಗ್, ಮಿಕ್ಸೆಡ್ ಸಿಗ್ನಲ್, ಡಿಜಿಟಲ್ ಸಿಗ್ನಲ್ ಪ್ರೋಸಸಿಂಗ್ನ ಐಸಿಗಳನ್ನು (ಇಂಟಿಗ್ರೇಟೆಡ್ ಸರ್ಕ್ಯುಟ್) ತಯಾರಿಸುತ್ತದೆ. ಇವು ಎಲೆಕ್ಟ್ರಾನಿ ಉಪಕರಣಗಳಲ್ಲಿ ಬಳಕೆ ಆಗುತ್ತದೆ. ಕಂಪ್ಯೂಟರ್, ಮಿಲಿಟರಿ ಉಪಕರಣ, ವಾಹನ, ಗೃಹ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಇದರ ಉತ್ಪನ್ನಗಳನ್ನು ಬಳಸಲಾಗುತ್ತದೆ. ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಎಡಿಐ ಉತ್ಪನ್ನಗಳ ಅವಶ್ಯಕತೆ ಬರಬಹುದು. ಭಾರತದ ಉದ್ದಿಮೆಗಳಿಗೂ ಇದು ಉಪಯೋಗಕ್ಕೆ ಬರುತ್ತದೆ.
ಭಾರತದಲ್ಲಿ ಎಡಿಐ ಮಾತ್ರವಲ್ಲಿ ಇನ್ನೂ ಹಲವು ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳು ಘಟಕಗಳನ್ನು ಸ್ಥಾಪಿಸಲಿವೆ. ಇಸ್ರೇಲ್ನ ಟವರ್ ಸೆಮಿಕಂಡಕ್ಟರ್, ಎಲ್ ಅಂಡ್ ಟಿ, ಎನ್ಎಕ್ಸ್ಪಿ ಸೆಮಿಕಂಡಕ್ಟರ್ಸ್, ಮೈಕ್ರಾನ್ ಮೊದಲಾದ ಕಂಪನಿಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಸ್ಥಾಪಿಸಲು ಹೊರಟಿವೆ.
ಇದನ್ನೂ ಓದಿ: ಅಮೆರಿಕದಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ; ಬಾಕಿ ಇದೆ ಇನ್ನಷ್ಟು ಕಡಿತ; ಮಿಂಚುತ್ತಿರುವ ಭಾರತೀಯ ಮಾರುಕಟ್ಟೆ
ಅದಾನಿ ಗ್ರೂಪ್ನ ಕಂಪನಿಯೊಂದು ಇಸ್ರೇಲ್ನ ಟವರ್ ಸೆಮಿಕಂಡಕ್ಟರ್ ಜೊತೆಗೆ ಕೈಜೋಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ