iPhone 15: ಐಫೋನ್ 15 ನಲ್ಲಿ ಯುಎಸ್​ಬಿ ಟೈಪ್-ಸಿಯ ಅತ್ಯಂತ ವೇಗದ ಚಾರ್ಜರ್

ಐಫೋನ್ 15 ಸರಣಿ ಅಡಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನ್​ಗಳು ಬರಲಿದೆ. ಈ ಎಲ್ಲ ಮಾಡೆಲ್​ಗಳು ಯುಎಸ್​ಬಿ ಟೈಪ್-ಸಿಯ ಫಾಸ್ಟ್ ಚಾರ್ಜರ್​ನೊಂದಿಗೆ ಬರಲಿದೆ. ಮುಖ್ಯವಾಗಿ ಜೂಮ್ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದ್ದು ಉತ್ತಮ ಕ್ವಾಲಿಟಿ ಪಡೆದುಕೊಂಡರಲಿದೆ ಎಂದು ಹೇಳಲಾಗಿದೆ.

iPhone 15: ಐಫೋನ್ 15 ನಲ್ಲಿ ಯುಎಸ್​ಬಿ ಟೈಪ್-ಸಿಯ ಅತ್ಯಂತ ವೇಗದ ಚಾರ್ಜರ್
iPhone 15 Series USB Type C
Edited By:

Updated on: Oct 09, 2026 | 2:46 PM

ಮುಖ್ಯಾಂಶಗಳು

  • ಈ ವರ್ಷ ರಿಲೀಸ್ ಆಗಲಿದೆ ಐಫೋನ್ 15 ಸರಣಿ
  • ಐಫೋನ್ 15 ಸರಣಿ ಯುಎಸ್​ಬಿ ಟೈಪ್-ಸಿ ಚಾರ್ಜರ್ ಹೊಂದಿದೆ
  • ಪ್ರೊ ಮಾಡೆಲ್​ಗಳಲ್ಲಿ ವಿಶೇಷ ಚಾರ್ಜರ್​ನೊಂದಿಗೆ ಬರಲಿದೆ

ಪ್ರಸಿದ್ಧ ಆ್ಯಪಲ್ (Apple) ಕಂಪನಿ ಪ್ರತಿವರ್ಷ ತನ್ನ ಐಫೋನ್​ನ ಹೊಸ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಐಫೊನ್ 14 ಸರಣಿಯನ್ನು (iPhone 14 Series) ಬಿಡುಗಡೆ ಮಾಡಿದ್ದ ಕಂಪನಿ ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. 2021 ರಲ್ಲಿ ರಿಲೀಸ್ ಮಾಡಿದ್ದ ಐಫೋನ್ 13 ಸರಣಿಗೆ ಈಗಲೂ ಭರ್ಜರಿ ಬೇಡಿಕೆ ಇದೆ. ಇದೀಗ ಈ ವರ್ಷ 2023 ರಲ್ಲಿ ಐಫೋನ್ 15 ಸರಣಿ ಕಾರ್ಯದಲ್ಲಿ ಕಂಪನಿ ಬ್ಯುಸಿ ಆಗಿದೆ. ಈ ವರ್ಷಾಂತ್ಯದ ವೇಳೆ ಐಫೋನ್ 15 (iPhone 15) ಸರಣಿ ಬಿಡುಗಡೆ ಆಗಲಿದೆ. ಆದರೆ, ಇದಕ್ಕೂ ಮುನ್ನ ಈ ಫೋನಿನ ಬಗ್ಗೆ ಕೆಲವೊಂದು ಅಚ್ಚರಿಯ ಮಾಹಿತಿ ಹೊರಬೀಳುತ್ತಿದೆ. ಇದೀಗ ಈ ವರ್ಷ ರಿಲೀಸ್ ಆಗಲಿರುವ ಐಫೋನ್ 15 ಸರಣಿಯಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಐಫೋನ್ 15 ಸರಣಿ ಅಡಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನ್​ಗಳು ಬರಲಿದೆ. ಈ ಎಲ್ಲ ಮಾಡೆಲ್​ಗಳು ಯುಎಸ್​ಬಿ ಟೈಪ್-ಸಿಯ ಫಾಸ್ಟ್ ಚಾರ್ಜರ್​ನೊಂದಿಗೆ ಬರಲಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಇದ್ದು ಈ ಚಾರ್ಜರ್​ಗಳು ಆ್ಯಪಲ್ ಕಂಪನಿಯದ್ದೇ ಆಗಿರಬೇಕು ಎಂದು ಹೇಳಲಾಗಿದೆ. ಇದರಲ್ಲಿ ಪ್ರೊ ಮಾಡೆಲ್​ಗಳಲ್ಲಿ ವಿಶೇಷ ಚಾರ್ಜರ್​ನೊಂದಿಗೆ ಬರಲಿದ್ದು, ವೇಗವಾಗಿ ಡಾಟಾ ಟ್ರಾನ್ಫರ್ ಆಗುತ್ತಂತೆ.

ಆ್ಯಪಲ್ ಪ್ರಮಾಣೀಕೃತ ನೀಡಿದ ಟೈಪ್-ಸಿ ಚಾರ್ಜರ್ ಮಾತ್ರ ಐಫೋನ್ 15 ಸರಣಿಯಲ್ಲಿ ಫಾಸ್ಟ್ ಚಾರ್ಜರ್ ಆಗಿ ಕೆಲಸ ಮಾಡುತ್ತಂತೆ. ಆಂಡ್ರಾಯ್ಡ್ ಅಥವಾ ಇತರೆ ಟೈಪ್-ಸಿ ಚಾರ್ಜರ್ ಮೂಲಕ ಐಫೋನ್ ಚಾರ್ಜ್ ಮಾಡಿದರೆ ನಿಧಾನವಾಗಿ ಬ್ಯಾಟರಿ ಫುಲ್ ಆಗುತ್ತದೆ. ಸದ್ಯ ಐಫೋನ್ ನೀಡಿರುವ ಚಾರ್ಜರ್​ಗಳು ಮಾಡೆಲ್​ಗಳಿಗೆ ಅನುಗಣವಾಗಿ 20W ಅಥವಾ 27 ವೋಲ್ಟ್​ನದ್ದಾಗಿದೆ. ಯುಎಸ್​ಬಿ ಟೈಪ್-ಸಿ ಚಾರ್ಜರ್ 20W ಸ್ಪೀಡ್​ನಿಂದ ಕೂಡಿರಲಿದೆ ಎನ್ನಲಾಗಿದೆ.

 

ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಅಸ್ತಿತ್ವದಲ್ಲಿರುವ ಚಾರ್ಜರ್‌ಗಳನ್ನು ಮರುಬಳಕೆ ಮಾಡುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಗ್ಯಾಜೆಟ್ ಉತ್ಪನ್ನಗಳು USB-C (Type-C) ಚಾರ್ಜರ್‌ಗಳನ್ನು ಹೊಂದಿರಬೇಕು ಎಂಬ ನಿಯಮವನ್ನು ಈ ಹಿಂದೆ ಜಾರಿಗೊಳಿಸಲಾಗಿತ್ತು. ಆದರೆ, ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆ್ಯಪಲ್ ಕಂಪನಿ ಇದೀಗ ಯುರೋಪಿಯನ್ ಯೂನಿಯನ್ ಕಾನೂನನ್ನು ಅನುಸರಿಸಲು ಮುಂದಾಗಿದೆ.

ಯುರೋಪಿಯನ್ ಕಮಿಷನ್ ಪ್ರಸ್ತಾಪಿಸಿದ್ದ ಹೊಸ ನಿಯಮದ ಅಡಿಯಲ್ಲಿ, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಪೋನ್‌ಗಳು 2024 ರ ವೇಳೆಗೆ USB-C ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಅದರಂತೆ ಇದೀಗ ಆ್ಯಪಲ್ ಕಂಪನಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಐಫೋನ್ 15ನಲ್ಲಿ USB-C ಚಾರ್ಜರ್‌ ಇರಲಿದೆ.

ಪ್ರತಿ ವರ್ಷ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುವ ಐಫೋನ್ ಅದಕ್ಕೆ ವಿಶೇಷ ಫೀಚರ್​ಗಳನ್ನು ಕೂಡ ಸೇರಿಸುತ್ತಾ ಬರುತ್ತಿದೆ. ಕಳೆದ ವರ್ಷದ ಐಫೋನ್ 14 ಸರಣಿಯಲ್ಲಿ ಆಕರ್ಷಕವಾದ 48 ಮೆಗಾಫಿಕ್ಸೆಲ್ ಕ್ಯಾಮೆರಾ, ಸ್ಯಾಟಲೈಟ್ ಕನೆಕ್ಟಿವಿಟಿ, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಒಂದಿಷ್ಟು ನೂತನ ಆಯ್ಕೆ ಸೇರ್ಪಡೆ ಮಾಡಿತ್ತು. ಇನ್ನು ಆ್ಯಪಲ್ ಐಫೋನ್ 15 ಜೊತೆ ಬಿಡುಗಡೆ ಆಗಲಿರುವ 15 ಪ್ರೊ ಮ್ಯಾಕ್ಸ್​ನಲ್ಲಿ A17 ಬಯೋನಿಕ್ ಚಿಪ್ ಇರಲಿದೆಯಂತೆ. ಇದು ಅತ್ಯಂತ ಬಲಿಷ್ಠವಾಗಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 8GB RAM ಆಯ್ಕೆಯಿಂದ ಕೂಡಿರಲಿದೆ ಎಂಬ ಮಾತುಕೂಡ ಹರಿದಾಡುತ್ತಿದೆ. ಐಫೋನ್ 15 ಕ್ಯಾಮೆರಾ 14ಗೆ ಹೋಲಿಸಿದರೆ ಹೆಚ್ಚಿನ ಗುಣಮಟ್ಟದಿಂದ ಕೂಡಿರಲಿದೆ. ಮುಖ್ಯವಾಗಿ ಜೂಮ್ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದ್ದು ಉತ್ತಮ ಕ್ವಾಲಿಟಿ ಪಡೆದುಕೊಂಡರಲಿದೆ ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Sun, 21 May 23

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us