Wheat Price: ಗೋಧಿ ದರ ಭಾರೀ ಏರಿಕೆ, ನಿಯಂತ್ರಿಸಲು ಸರ್ಕಾರ ಸಾಹಸ

ಸರ್ಕಾರದ ದತ್ತಾಂಶಗಳ ಪ್ರಕಾರ ಒಂದು ಕೆಜಿ ಗೋಧಿ ಹಿಟ್ಟಿನ ದರ 37.95 ರೂ. ತಲುಪಿದೆ. ಕಳೆದ ವರ್ಷ ಇದು 31.41 ರೂ. ಇತ್ತು. ಗೋಧಿ ಮತ್ತು ಗೋಧಿ ಹಿಟ್ಟಿನ ದರ ದಶಕದ ಗರಿಷ್ಠ ಮಟ್ಟ ತಲುಪಿದೆ.

Wheat Price: ಗೋಧಿ ದರ ಭಾರೀ ಏರಿಕೆ, ನಿಯಂತ್ರಿಸಲು ಸರ್ಕಾರ ಸಾಹಸ
ಗೋಧಿ ದರ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Jan 26, 2023 | 12:28 PM

ನವದೆಹಲಿ: ದೇಶದಾದ್ಯಂತ ಮಾರುಕಟ್ಟೆಗಳಲ್ಲಿ ಗೋಧಿ ದರ (Wheat Price) ಗಗನಕ್ಕೇರಿದ್ದು, ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಸರ್ಕಾರದ ದತ್ತಾಂಶಗಳ ಪ್ರಕಾರ ಒಂದು ಕೆಜಿ ಗೋಧಿ ಹಿಟ್ಟಿನ (wheat flour) ದರ 37.95 ರೂ. ತಲುಪಿದೆ. ಕಳೆದ ವರ್ಷ ಇದು 31.41 ರೂ. ಇತ್ತು. ಗೋಧಿ ಮತ್ತು ಗೋಧಿ ಹಿಟ್ಟಿನ ದರ ದಶಕದ ಗರಿಷ್ಠ ಮಟ್ಟ ತಲುಪಿದೆ. ದರ ನಿಯಂತ್ರಿಸುವುದಕ್ಕಾಗಿ ಮುಂದಿನ ಎರಡು ತಿಂಗಳುಗಳಲ್ಲಿ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಆಹಾರ ನಿಗಮವು (FCI) 30 ಲಕ್ಷ ಮೆಟ್ರಿಕ್ ಟನ್ ಗೋಧಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರಿಂದ ಬೆಲೆ ಏರಿಕೆ ಮೇಲೆ ತಕ್ಷಣದ ಪರಿಣಾಮವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವರ ಸಮಿತಿ ಬುಧವಾರ ಅನುಮೋದನೆ ನೀಡಿತ್ತು.

ಈ ಯೋಜನೆಯ ಪ್ರಕಾರ, ಪ್ರತಿ ಹಿಟ್ಟಿನ ಗಿರಣಿಯವರಿಗೆ ಮತ್ತು ದೊಡ್ಡ ಮಟ್ಟದ ಖರೀದಿದಾರರಿಗೆ ಇ-ಹರಾಜಿನ ಮೂಲಕ ಗರಿಷ್ಠ 3,000 ಮೆಟ್ರಿಕ್ ಟನ್ ಗೋಧಿ ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಜತೆಗೆ ನೇರವಾಗಿ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ ಎಂದು ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?

ಪ್ರತಿ ಕ್ವಿಂಟಲ್​​ಗೆ 2,350 ರೂ.ನಂತೆ ರಿಯಾಯಿತಿ ದರದಲ್ಲಿ ಗೋಧಿ ವಿತರಣೆಗೂ ಮುಂದಾಗಲಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು, ಸಹಕಾರಿ ಸಂಘಟನೆಗಳು, ಒಕ್ಕೂಟಗಳು ಇತ್ಯಾದಿಗಳಿಗೆ ಇ-ಹರಾಜು ಮಾಡದೇ ನೇರವಾಗಿ ಗೋಧಿ ವಿತರಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ಜನವರಿ-ಮಾರ್ಚ್ ಅವಧಿಯಲ್ಲಿ ಇ-ಹರಾಜು ನಡೆಯಲಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ವಿವಿಧ ನಗರಗಳಲ್ಲಿ ಹೀಗಿದೆ ದರ

  • ದೆಹಲಿ – 26 ರೂ/ಕೆಜಿ
  • ಮುಂಬೈ – 38 ರೂ/ಕೆಜಿ
  • ಕೋಲ್ಕತ್ತ – 28-29 ರೂ/ಕೆಜಿ
  • ಚೆನ್ನೈ – 56 ರೂ/ಪ್ಯಾಕೆಟ್
  • ಕಾನ್ಪುರ – 28 ರೂ/ಕೆಜಿ
  • ಹೈದರಾಬಾದ್ – 60 ರೂ/ಕೆಜಿ
  • ಗುರುಗ್ರಾಮ – 32 ರೂ/ಕೆಜಿ
  • ನೋಯ್ಡಾ – 30 ರೂ/ಕೆಜಿ
  • ಗಾಜಿಯಾಬಾದ್ – 30 ರೂ/ಕೆಜಿ

(ಇಂಡಿಯಾ ಮಾರ್ಟ್​ ದರ ಅನ್ವಯ ಈ ಲೆಕ್ಕಾಚಾರ ನೀಡಲಾಗಿದೆ. ವಿವಿಧ ನಗರಗಳ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ದರ ತುಸು ವ್ಯತ್ಯಾಸ ಇರಬಹುದು)

ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ 2022ರ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು. ಆದರೆ, ಬೇರೆ ದೇಶಗಳ ಆಹಾರ ಸುರಕ್ಷತೆಗಾಗಿ ಆಯಾ ದೇಶಗಳ ಮನವಿಯ ಮೇರೆಗೆ ಭಾರತ ಸರ್ಕಾರದ ಅನುಮತಿ ಪಡೆದು ರಫ್ತು ಮಾಡಲು ಅನುಮತಿ ನೀಡಿತ್ತು. ಈ ಎಲ್ಲ ಕ್ರಮಗಳ ಹೊರತಾಗಿಯೂ, ಇದೀಗ ಗೋಧಿ ದರ ಮತ್ತೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್