Mutual Funds: ಭಾರತದ ಮ್ಯೂಚುವಲ್ ಫಂಡ್​ಗಳಲ್ಲಿದೆ ಪಾಕ್ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಹಣ

AUM of India's Mutual Fund Industry crosses Rs 80 lakh crore: ಭಾರತದ ಎಲ್ಲಾ ಮ್ಯೂಚುವಲ್ ಫಂಡ್​ಗಳಿಂದ ನಿರ್ವಹಿತವಾಗುತ್ತಿರುವ ಆಸ್ತಿಯ ಗಾತ್ರ 80.80 ಲಕ್ಷ ಕೋಟಿ ರೂ ಆಗಿದೆ. ಇದು ನವೆಂಬರ್​ನ ಡತ್ತಾಂಶ. ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆ ಈ ಮಾಹಿತಿ ಬಿಡುಗಡೆ ಮಾಡಿದೆ. ಅಕ್ಟೋಬರ್​ನಲ್ಲಿ ಇಳಿಮುಖವಾಗಿದ್ದ ಒಳಹರಿವು, ನವೆಂಬರ್​ನಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

Mutual Funds: ಭಾರತದ ಮ್ಯೂಚುವಲ್ ಫಂಡ್​ಗಳಲ್ಲಿದೆ ಪಾಕ್ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಹಣ
ಮ್ಯೂಚುವಲ್ ಫಂಡ್

Updated on: Dec 12, 2025 | 12:39 PM

ನವದೆಹಲಿ, ಡಿಸೆಂಬರ್ 12: ಭಾರತದ ಮ್ಯುಚುವಲ್ ಫಂಡ್ (Mutual Fund) ಉದ್ಯಮದ ಗಾತ್ರ ನವೆಂಬರ್ ತಿಂಗಳಲ್ಲಿ 80 ಲಕ್ಷ ಕೋಟಿ ರೂ ಗಡಿ ದಾಟಿದೆ. ಕೆಲ ತಿಂಗಳಿಂದ ಇಳಿಮುಖಗೊಳ್ಳುತ್ತಿದ್ದ ಈಕ್ವಿಟಿ ಫಂಡ್​ಗಳು ನವೆಂಬರ್​ನಲ್ಲಿ ಬಹಳ ಹೆಚ್ಚು ಒಳಹರಿವು ಕಂಡಿವೆ. ಮ್ಯೂಚುವಲ್ ಫಂಡ್ ಸಂಘಟನೆಯಾದ ಎಎಂಎಫ್​ಐ (AMFI- Association of Mutual Funds in India) ಬಿಡುಗಡೆ ಮಾಡಿದ ದತ್ತಂಶದ ಪ್ರಕಾರ ಭಾರತೀಯ ಮ್ಯೂಚುವಲ್ ಫಂಡ್​ಗಳು ನಿರ್ವಹಿಸುತ್ತಿರುವ ಆಸ್ತಿಯ ಮೌಲ್ಯ (AUM- Asssets Under Management) 80.80 ಲಕ್ಷ ಕೋಟಿ ರೂನಷ್ಟಿದೆ.

ನವೆಂಬರ್ ತಿಂಗಳಲ್ಲಿ ಡೆಟ್ ಫಂಡ್​ಗಳಿಂದ (Debt funds) ಹೊರಹೋದ ನಿವ್ವಳ ಹಣ 25,692.63 ಕೋಟಿ ರೂ. ಆದರೆ, ಈಕ್ವಿಟಿ ಫಂಡ್​ಗಳಿಗೆ ಶೇ. 21ರಷ್ಟು ಹೆಚ್ಚು ಒಳಹರಿವು ಬಂದಿದೆ. ಒಟ್ಟು 29,911 ಕೋಟಿ ರೂ ಬಂಡವಾಳವನ್ನು ಈಕ್ವಿಟಿ ಫಂಡ್​ಗಳು ಪಡೆದಿವೆ. ಒಟ್ಟಾರೆ ಮ್ಯೂಚುವಲ್ ಫಂಡ್​ಗಳಲ್ಲಿ ನವೆಂಬರ್​ನಲ್ಲಿ ಬಂದ ನಿವ್ವಳ ಒಳಹರಿವು 32,755.36 ಕೋಟಿ ರೂ. ಇದು ಒಟ್ಟು ನಿರ್ವಹಿತ ಆಸ್ತಿಯನ್ನು 80.80 ಲಕ್ಷ ಕೋಟಿ ರೂಗೆ ಏರಿಸಿದೆ.

ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್

ಪಾಕಿಸ್ತಾನದ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಗಾತ್ರ

80.84 ಲಕ್ಷ ಕೋಟಿ ರೂ ಎಂದರೆ ಸುಮಾರು 890 ಬಿಲಿಯನ್ ಡಾಲರ್ ಆಗುತ್ತದೆ. 2025ರಲ್ಲಿ ಪಾಕಿಸ್ತಾನದ ಜಿಡಿಪಿ 410 ಬಿಲಿಯನ್ ಡಾಲರ್ ಇರುವ ಅಂದಾಜಿದೆ. ಭಾರತದ ಮ್ಯೂಚುವಲ್ ಫಂಡ್​ಗಳಲ್ಲಿ ಇರುವ ಹಣವು ಪಾಕಿಸ್ತಾನದ ಜಿಡಿಪಿಯ ಎರಡು ಪಟ್ಟು ಹೆಚ್ಚು ಮೊತ್ತಕ್ಕಿಂತ ಅಧಿಕ ಆಗುತ್ತದೆ.

ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಬಂಡವಾಳ ಕೊಡುತ್ತಿದೆ ಎಸ್​ಐಪಿ

ಮ್ಯೂಚುವಲ್ ಫಂಡ್​ಗಳಿಗೆ ಹಣದ ಹರಿವು ಹೆಚ್ಚಾಗಿ ಬರುತ್ತಿರುವುದು ಎಸ್​ಐಪಿ ಮೂಲಕ ಎಂಬುದು ದತ್ತಾಂಶದಿಂದ ತಿಳಿದುಬರುತ್ತದೆ. ನವೆಂಬರ್​ನಲ್ಲಿ 29,445 ಕೋಟಿ ರೂ ಹಣವು ಎಸ್​ಐಪಿ ಮೂಲಕ ಫಂಡ್​ಗಳಿಗೆ ಸಂದಾಯವಾಗಿವೆ. ಅಕ್ಟೋಬರ್​ನಲ್ಲಿ ಒಟ್ಟಾರೆ ಮ್ಯೂಚುವಲ್ ಫಂಡ್​ಗಳಿಗೆ ಹರಿದುಬಂದ ಬಂಡವಾಳ ಕಡಿಮೆ ಆಗಿತ್ತಾದರೂ ಎಸ್​ಐಪಿ 29,529 ಕೋಟಿ ರೂ ಹಣ ಕೊಟ್ಟಿತ್ತು. ನವೆಂಬರ್​ನಲ್ಲಿ ತುಸು ಕಡಿಮೆ ಎಸ್​ಐಪಿಯಾದರೂ, ಗಮನಾರ್ಹ ಮೊತ್ತವೆನಿಸಿದೆ.

ಇದನ್ನೂ ಓದಿ: ಅಮೆರಿಕದ ಪಕ್ಕದ ದೇಶದಿಂದಲೂ ಭಾರತದ ಮೇಲೆ ಶೇ. 50 ಟ್ಯಾರಿಫ್; ಏನಿದರ ಪರಿಣಾಮ?

ನವೆಂಬರ್​ನಲ್ಲಿ ಈಕ್ವಿಟಿ ಫಂಡ್​ಗಳ ಪೈಕಿ ಫ್ಲೆಕ್ಸಿಕ್ಯಾಪ್ ಫಂಡ್​ಗಳಿಗೆ ಅತಿಹೆಚ್ಚು ಹಣದ ಹರಿವು ಸಿಕ್ಕಿದೆ. 8,000 ಕೋಟಿ ರೂ ಹಣವು ಫ್ಲೆಕ್ಸಿಕ್ಯಾಪ್ ಫಂಡ್​ಗಳಿಗೆ ನವೆಂಬರ್​ನಲ್ಲಿ ಸಿಕ್ಕಿದೆ. ಮಿಡ್​ಕ್ಯಾಪ್, ಸ್ಮಾಲ್​ಕ್ಯಾಪ್, ಹಾಗು ಲಾರ್ಜ್ ಮಿಡ್​ಕ್ಯಾಪ್ ಈ ಮೂರು ರೀತಿಯ ಫಂಡ್​ಗಳಿಗೂ ತಲಾ 4,400-4,500 ಕೋಟಿ ರೂ ಒಳಹರಿವು ಸಿಕ್ಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ