Patanjali Model: ಜಾಗತಿಕ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು?

Baba Ramdev's successful Patanjali business model: ಆಯುರ್ವೇದ ಮತ್ತು ಆಧುನಿಕ ಔಷಧ ಸಂಗಮವಾಗಿರುವ ಪತಂಜಲಿಯ ಸ್ಪೆಷಾಲಿಟಿ ಆಸ್ಪತ್ರೆಯನ್ನು ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದಾರೆ. ವಿದೇಶಿ ಬ್ರ್ಯಾಂಡ್‌ಗಳ ಪ್ರಾಬಲ್ಯದ ನಡುವೆಯೂ, ಬಾಬಾ ರಾಮದೇವ್ ಅವರ "ಸ್ವದೇಶಿ ಮಾದರಿ" ವಿಜಯಶಾಲಿಯಾಗಿದೆ. ಸ್ಥಳೀಯ ರೈತರನ್ನು ತೊಡಗಿಸಿಕೊಳ್ಳುವ ಮೂಲಕ ಮತ್ತು ಭಾರತೀಯ ಸಂಪ್ರದಾಯಗಳನ್ನು ಆಧುನೀಕರಿಸುವ ಮೂಲಕ, ಪತಂಜಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಮೀರಿಸಿದೆ ಮಾತ್ರವಲ್ಲದೆ ಸ್ವಾವಲಂಬನೆಯ ಹೊಸ ಉದಾಹರಣೆಯನ್ನು ಸಹ ಸ್ಥಾಪಿಸಿದೆ.

Patanjali Model: ಜಾಗತಿಕ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು?
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ

Updated on: Jan 27, 2026 | 7:21 PM

ಭಾರತದಲ್ಲಿ ಪ್ರಮುಖ ಬ್ರ್ಯಾಂಡ್ ಅಥವಾ ಕಂಪನಿಯ ಬಗ್ಗೆ ಮಾತನಾಡುವಾಗಲೆಲ್ಲಾ ನಮ್ಮ ಗಮನ ಹೆಚ್ಚಾಗಿ ವಿದೇಶಿ ಬಹುರಾಷ್ಟ್ರೀಯ ಕಂಪನಿಗಳತ್ತ ತಿರುಗುತ್ತದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಜಾಗತಿಕ ಬ್ರ್ಯಾಂಡ್‌ಗಳ ಪ್ರಾಬಲ್ಯಕ್ಕೆ ಸವಾಲೊಡ್ಡುವ ರೀತಿಯಲ್ಲಿ ಸ್ಥಳೀಯ ಬ್ರ್ಯಾಂಡ್​ವೊಂದು ಮಿಂಚತೊಡಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಬೆಳೆಯತೊಡಗಿದೆ. ಅದುವೇ ಪತಂಜಲಿ. ಪತಂಜಲಿ ಯೋಗಪೀಠ ನಿರ್ವಹಿಸುವ ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು (Patanjali Speciality Hospital) ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಇದು ಕೇವಲ ಆಸ್ಪತ್ರೆಯಲ್ಲ, ಯೋಗ, ಆಯುರ್ವೇದ ಮತ್ತು ಆಧುನಿಕ ಔಷಧದ ವಿಶಿಷ್ಟ ಸಂಗಮ ಎನಿಸುವ ವಿಶ್ವದ ಮೊದಲ ಕೇಂದ್ರವಾಗಿದೆ. ಇದು ಆರೋಗ್ಯ ಕೇಂದ್ರದ ಉದ್ಘಾಟನೆ ಮಾತ್ರವಲ್ಲ, ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವರ್ಷಗಳ ಹಿಂದಿನ ಕನಸು ಸಾಕಾರಗೊಂಡ ಸಂದರ್ಭ. ಒಂದು ಸಣ್ಣ ಆರಂಭವು ಈಗ ಆರ್ಥಿಕ ಮತ್ತು ಸಾಂಸ್ಕೃತಿಕ ಚಳುವಳಿಯಾಗಿದೆ.

ವಿದೇಶಿ ಹೊಳಪಿನ ನಡುವೆ ಸ್ವದೇಶಿಯ ಪ್ರಾಬಲ್ಯ

ಇವತ್ತಿನ ಕಾಲದಲ್ಲಿ, ಮಾರುಕಟ್ಟೆಯು ಪಾಶ್ಚಿಮಾತ್ಯ ವಿಧಾನಗಳು ಮತ್ತು ಉತ್ಪನ್ನಗಳಿಂದ ತುಂಬಿ ತುಳುಕುತ್ತಿದೆ. ಇಂಥ ಸಂದರ್ಭದಲ್ಲಿ, ಮೂಲ ಬೇರಿನೊಂದಿಗೆ ಸಂಪರ್ಕದಲ್ಲಿರುವುದು ಯಶಸ್ಸಿಗೆ ಖಚಿತ ಮಾರ್ಗ ಎಂಬುದನ್ನು ಪತಂಜಲಿ ಸಾಬೀತುಪಡಿಸಿದೆ. ರಿಸರ್ಚ್‌ಗೇಟ್‌ನಲ್ಲಿ (ResearchGate) ಪ್ರಕಟವಾದ ಅಧ್ಯಯನವು ಪತಂಜಲಿಯ ಯಶಸ್ಸಿನ ರಹಸ್ಯವು ಅದರ ವಿಶಿಷ್ಟ ತಂತ್ರದಲ್ಲಿದೆ ಎಂದು ಬಹಿರಂಗಪಡಿಸುತ್ತದೆ. ದೊಡ್ಡ ವಿದೇಶಿ ಕಂಪನಿಗಳು ಲಾಭ ಮತ್ತು ಮಾರುಕಟ್ಟೆ ಪ್ರವೃತ್ತಿಗಳ ಮೇಲೆ ಮಾತ್ರ ಗಮನಹರಿಸಿದರೆ, ಪತಂಜಲಿಯು ಭಾರತೀಯ ಗ್ರಾಹಕರ ನಾಡಿಮಿಡಿತವನ್ನು ಸೆರೆಹಿಡಿದಿದೆ.

ಭಾರತೀಯ ಮನಸ್ಸು ಇನ್ನೂ ತನ್ನ ಸಂಪ್ರದಾಯಗಳ ಮೇಲೆ ವಿಶ್ವಾಸ ಹೊಂದಿದೆ ಎಂಬುದನ್ನು ಪತಂಜಲಿ ಸಂಸಂಸ್ಥಾಪಕರು ಅರಿತಿದ್ದಾರೆ. ಪತಂಜಲಿಯು ಹರ್ಬಲ್ ಟೂತ್‌ಪೇಸ್ಟ್, ತುಪ್ಪ ಮತ್ತು ಸ್ಕಿನ್ ಕೇರ್ ಉತ್ಪನ್ನಗಳ ಮೂಲಕ ಆಧುನಿಕ ಪ್ಯಾಕೇಜಿಂಗ್‌ನಲ್ಲಿ ಪ್ರಾಚೀನ ಜ್ಞಾನವನ್ನು ಅನಾವರಣಗೊಳಿಸಿದೆ. ಇದು ಹಳೆಯ ಪೀಳಿಗೆಗೆ ಮಾತ್ರವಲ್ಲದೆ ಯುವ ಪೀಳಿಗೆಗೂ ಇಷ್ಟವಾಗಿದೆ. ಆಧುನಿಕ ಮತ್ತು ಸಂಪ್ರದಾಯ ಎರಡೂ ಕೂಡ ವಿರೋಧಾಭಾಸ ಎನಿಸಿದೆ ಪರಸ್ಪರ ಪೂರಕವಾಗಿರಬಹುದು ಎಂಬುದನ್ನು ಪತಂಜಲಿಯಿಂದ ಕಾಣಬಹುದು.

ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ

ಸ್ವಾವಲಂಬನೆ ಕೇವಲ ಘೋಷಣೆಯಲ್ಲ

“ಸ್ವಾವಲಂಬಿ ಭಾರತ”ದ ಬಗ್ಗೆ ನಾವು ಆಗಾಗ್ಗೆ ಮಾತನಾಡುವುದನ್ನು ಕೇಳುತ್ತೇವೆ. ಆದರೆ ಪತಂಜಲಿ ಅದನ್ನು ತನ್ನ ಬ್ಯುಸಿನೆಸ್ ಮಾಡಲ್​ನ ಅಡಿಪಾಯವನ್ನಾಗಿ ಮಾಡಿಕೊಂಡಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಲ್ಟಿಡಿಸಿಪ್ಲಿನರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್‌ನಲ್ಲಿನ ಕೇಸ್ ಸ್ಟಡಿಯೊಂದರ ಪ್ರಕಾರ, ಪತಂಜಲಿಯ ಸಂಪೂರ್ಣ ರಚನೆಯು ಸ್ವದೇಶಿ ತತ್ವವನ್ನು ಆಧರಿಸಿದೆ. ಕಂಪನಿಯು ತನ್ನ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದಿಲ್ಲ, ಬದಲಿಗೆ ಸ್ಥಳೀಯ ರೈತರಿಂದ ನೇರವಾಗಿ ಖರೀದಿಸುತ್ತದೆ.

ಇದು ನಿಮ್ಮ ಮತ್ತು ನಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಧ್ಯವರ್ತಿಗಳನ್ನು ತೊಡೆದುಹಾಕಿ ಸರಕುಗಳನ್ನು ಖರೀದಿಸಿ ಸ್ಥಳೀಯವಾಗಿಯೇ ಸಂಸ್ಕರಿಸಿದಾಗ, ವೆಚ್ಚಗಳು ಕಡಿಮೆಯಾಗುತ್ತವೆ. ಈ ಮಾದರಿಯನ್ನು ಅನುಸರಿಸುವುದರಿಂದ ಪತಂಜಲಿ ಉತ್ಪನ್ನಗಳು ಇತರ ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳಿಗಿಂತ ಅಗ್ಗದ ಬೆಲೆಗೆ ಸಿಗುತ್ತವೆ. ವಿದೇಶೀ ಆಮದು ಮೇಲೆ ಅವಲಂಬನೆ ಕಡಿಮೆ ಮಾಡುವುದಲ್ಲದೆ, ಗ್ರಾಮೀಣ ಆರ್ಥಿಕತೆಗೆ ಹೊಸ ಜೀವ ಕೊಡುತ್ತದೆ. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಗಳನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಟೈಪ್-1 ಡಯಾಬಿಟಿಸ್ ಏನು? ಇದನ್ನು ನಿಯಂತ್ರಿಸುವ ಆಹಾರಕ್ರಮ ಮತ್ತು ಯೋಗಕ್ರಮಗಳೇನು? ಇಲ್ಲಿದೆ ಬಾಬಾ ರಾಮದೇವ್ ಸಲಹೆ

ರಾಷ್ಟ್ರ ನಿರ್ಮಾಣದ ಉದ್ದೇಶ

ಪತಂಜಲಿ ತನ್ನ ಪೂರೈಕೆ ಸರಪಳಿಯಿಂದ ಹಿಡಿದು ಮಾರ್ಕೆಟಿಂಗ್‌ವರೆಗೆ ಎಲ್ಲೆಡೆ ನಾವೀನ್ಯತೆಯನ್ನು ಅನ್ವಯಿಸಿದೆ. ಅದು ಆಹಾರ ಸಂಸ್ಕರಣೆಯಾಗಿರಲಿ, ಶಿಕ್ಷಣವಾಗಲಿ ಅಥವಾ ಈಗ ಈ ಹೊಸ ವಿಶ್ವ ದರ್ಜೆಯ ಆಸ್ಪತ್ರೆಯಾಗಿರಲಿ, ಸಮಗ್ರ ವಿಧಾನವು ಎಲ್ಲೆಡೆ ಸ್ಪಷ್ಟವಾಗಿದೆ.

ರಿಸರ್ಚ್ ಕಾಮನ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯು, ಒಂದು ವ್ಯವಹಾರವು ಅದರ ಸಾಂಸ್ಕೃತಿಕ ಗುರುತು ಮತ್ತು ರಾಷ್ಟ್ರೀಯ ಮನೋಭಾವದೊಂದಿಗೆ ಸಂಪರ್ಕಗೊಂಡಾಗ, ಅದು ಹೆಚ್ಚು ಸುಸ್ಥಿರವಾಗುತ್ತದೆ ಎಂದು ದೃಢಪಡಿಸುತ್ತದೆ. ಪತಂಜಲಿ ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆಯ ಉದ್ಘಾಟನೆಯು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ