ನವದೆಹಲಿ, ಜನವರಿ 30: ಕಳೆದ ನಾಲ್ಕೈದು ತಿಂಗಳಿಂದ ದೇಶದ ವಿವಿಧೆಡೆ ರಜಾದಿನಗಳ ಸುಗ್ಗಿಯೇ ಇತ್ತು. ಈಗ ಫೆಬ್ರುವರಿ ತಿಂಗಳು ಬರುತ್ತಿದ್ದು ಹೆಚ್ಚಿನ ರಜೆಗಳಿಲ್ಲ. ವಿವಿಧ ಪ್ರಾದೇಶಿಕ ರಜೆಗಳೂ ಸೇರಿದಂತೆ ಒಟ್ಟಾರೆ 11 ರಜೆಗಳಿವೆ. ಇದರಲ್ಲಿ 6 ಭಾನುವಾರ ಮತ್ತು ಶನಿವಾರದ ರಜೆಗಳೇ ಸೇರಿವೆ. ಹೆಚ್ಚಿನ ಪ್ರಾದೇಶಿಕ ರಜೆಗಳು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವೆ. ಕರ್ನಾಟಕ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಭಾನುವಾರ ಮತ್ತು ಶನಿವಾರ ರಜೆಗಳನ್ನು ಮಾತ್ರವೇ ಬ್ಯಾಂಕುಗಳು (Bank holidays) ಹೊಂದಿವೆ.
ಇದನ್ನೂ ಓದಿ: Samsung: ಮೊಬೈಲ್ ಆಯ್ತು, ಸ್ಯಾಮ್ಸಂಗ್ ಲ್ಯಾಪ್ಟಾಪ್ ಕೂಡ ಭಾರತದಲ್ಲಿ ತಯಾರಿಕೆ; ಮೇಡ್ ಇನ್ ಇಂಡಿಯಾಗೆ ಬದ್ಧವಾದ ಕೊರಿಯನ್ ದೈತ್ಯ
ಆರ್ಬಿಐ ಕ್ಯಾಲಂಡರ್ನ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಫೆಬ್ರುವರಿಯಲ್ಲಿ ಯಾವ ವಿಶೇಷ ರಜೆಯೂ ಇಲ್ಲ. ಫೆಬ್ರುವರಿಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಶಿವರಾತ್ರಿ ಹಬ್ಬ ಈಗ ಮಾರ್ಚ್ ತಿಂಗಳಲ್ಲಿ ಬಿದ್ದಿದೆ. ಕಳೆದ ನಾಲ್ಕೈ ದಿನಗಳಿಂದ ರಜಾ ದಿನಗಳ ಸುಗ್ಗಿ ಅನುಭವಿಸಿದ್ದ ಬ್ಯಾಂಕುಗಳು ಫೆಬ್ರುವರಿಯಲ್ಲಿ ಹೆಚ್ಚು ಬಾಗಿಲು ತೆರೆಯುತ್ತವೆ. ರಾಜ್ಯದ ಬ್ಯಾಂಕುಗಳು ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳನ್ನು ಮಾತ್ರ ಹೊಂದಿವೆ.
ಬ್ಯಾಂಕುಗಳು ಬಾಗಿಲು ಬಂದ್ ಮಾಡಿದರೂ ಎಟಿಎಂ, ನೆಟ್ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ವಹಿವಾಟು ನಡೆಸಲು ಯಾವ ಅಡ್ಡಿ ಇರುವುದಿಲ್ಲ. ದಿನದ 24 ಗಂಟೆಯೂ ಡಿಜಿಟಲ್ ವಹಿವಾಟು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ