Samsung: ಮೊಬೈಲ್ ಆಯ್ತು, ಸ್ಯಾಮ್ಸಂಗ್ ಲ್ಯಾಪ್ಟಾಪ್ ಕೂಡ ಭಾರತದಲ್ಲಿ ತಯಾರಿಕೆ; ಮೇಡ್ ಇನ್ ಇಂಡಿಯಾಗೆ ಬದ್ಧವಾದ ಕೊರಿಯನ್ ದೈತ್ಯ
Manufacturing in India: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ತನ್ನ ಲ್ಯಾಪ್ಟಾಪ್ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿದೆ. ನೋಯ್ಡಾದಲ್ಲಿರುವ ತನ್ನ ಬೃಹತ್ ಘಟಕದಲ್ಲಿ ಲ್ಯಾಪ್ಟಾಪ್ ಮ್ಯಾನುಫ್ಯಾಕ್ಚರಿಂಗ್ ಕಾರ್ಯವನ್ನು ಆರಂಭಿಸಲಿದೆ. ನೋಯ್ಡಾ ಮತ್ತು ಶ್ರೀಪೆರಂಬುದೂರಿನಲ್ಲಿರುವ ತನ್ನ ಘಟಕಗಳಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಾ ಬಂದಿದೆ.
ನವದೆಹಲಿ, ಜನವರಿ 29: ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆ (Samsung Electronics) ತನ್ನ ಲ್ಯಾಪ್ಟಾಪ್ಗಳನ್ನು ಭಾರತದಲ್ಲಿ ತಯಾರಿಸಲು ಯೋಜಿಸಿದೆ. ನೋಯ್ಡಾದಲ್ಲಿರುವ ತನ್ನ ಘಟಕದಲ್ಲಿ ಲ್ಯಾಪ್ಟಾಪ್ ತಯಾರಿಕೆಯನ್ನು ಆರಂಭಿಸಲು ಉದ್ದೇಶಿಸಿದ್ದೇವೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಯಾಮ್ಸುಂಗ್ ನೋಯ್ಡಾದ ಘಟಕದಲ್ಲಿ ತನ್ನ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಾ ಬಂದಿದೆ. ಇದೀಗ ಮೊದಲ ಬಾರಿಗೆ ಲ್ಯಾಪ್ಟಾಪ್ ಉತ್ಪಾದನೆ (Laptop manufacturing) ಆಗಲಿದೆ.
ಭಾರತದ ಬಹಳ ಮುಖ್ಯವಾದ ಉತ್ಪಾದನಾ ನೆಲೆಯಾಗಿದೆ. ನೋಯ್ಡಾ ಫ್ಯಾಕ್ಟರಿಯಲ್ಲಿ ಈ ವರ್ಷ ಲ್ಯಾಪ್ಟಾಪ್ ತಯಾರಿಕೆಯನ್ನು ಆರಂಭಿಸುತ್ತೇವೆ. ಸಿದ್ಧತೆ ಈಗಾಗಲೇ ನಡೆದಿದೆ,’ ಎಂದು ಸ್ಯಾಮ್ಸುಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಟಿಎಂ ರೋಹ್ ಹೇಳಿದ್ದಾರೆ.
ಇದನ್ನೂ ಓದಿ: Economy: ಮುಂದಿನ ಏಳು ವರ್ಷ ಆರ್ಥಿಕತೆಯ ಹಂತ ಹಂತದ ಬೆಳವಣಿಗೆ ಸಾಧ್ಯತೆ ಬಿಚ್ಚಿಟ್ಟ ಹಣಕಾಸು ಸಚಿವಾಲಯ
ನೋಯ್ಡಾದಲ್ಲಿರುವುದು ಸ್ಯಾಮ್ಸಂಗ್ನ ಎರಡನೇ ಅತಿದೊಡ್ಡ ಘಟಕವಾಗಿದೆ. ಸ್ಯಾಮ್ಸಂಗ್ 2007ರಿಂದಲೇ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಾರ್ಯದಲ್ಲಿ ತೊಡಗಿದೆ. ಅದರ ಫೀಚರ್ ಫೋನ್ಗಳೂ ಇಲ್ಲಿಂದಲೇ ತಯಾರಾಗಿವೆ. ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ಸ್ಯಾಮ್ಸಂಗ್ ಗೆಲಾಕ್ಸಿ ಎಸ್24 ಸೀರೀಸ್ನ ಸ್ಮಾರ್ಟ್ಫೋನ್ಗಳನ್ನೂ ಇಲ್ಲಿಂದಲೇ ತಯಾರಿಸಲಾಗುತ್ತದೆ.
ಸ್ಯಾಮ್ಸಂಗ್ ಭಾರತದಲ್ಲಿ ಎರಡು ಫ್ಯಾಕ್ಟರಿಗಳನ್ನು ಹೊಂದಿದೆ. ದೆಹಲಿ ಬಳಿಯ ನೋಯ್ಡಾ ಮತ್ತು ಚೆನ್ನೈ ಬಳಿಯ ಶ್ರೀಪೆರಂಬುದೂರಿನಲ್ಲಿ ಈ ಘಟಕಗಳಿವೆ. ಅಷ್ಟೇ ಅಲ್ಲ, ಐದು ಆರ್ ಅಂಡ್ ಸೆಂಟರ್ ಮತ್ತು ಒಂದು ಡಿಸೈನ್ ಸೆಂಟರ್ ಅನ್ನೂ ಸ್ಯಾಮ್ಸಂಗ್ ಭಾರತದಲ್ಲಿ ಹೊಂದಿದೆ. ಇದರ ಜೊತೆಗೆ ಸ್ಮಾರ್ಟ್ಫೋನ್ಗೆ ಬೇಕಾದ ಪೂರಕ ಪರಿಕರಗಳನ್ನು ಸರಬರಾಜು ಮಾಡುವ ಕಂಪನಿಗಳೂ ಭಾರತದಲ್ಲೇ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: DA Hike, Arrears: ಈ ಬಾರಿಯೂ 4 ಪ್ರತಿಶತ ಡಿಎ ಹೆಚ್ಚಳ ಖಾತ್ರಿಯಾ? 18 ತಿಂಗಳ ಡಿಎ ಬಾಕಿ ಹಣ ಬಿಡುಗಡೆಗೆ ಪ್ರಸ್ತಾಪ
ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಸಂಸ್ಥೆಯಾದ ಸ್ಯಾಮ್ಸಂಗ್ ಭಾರತದ ಮೂಲೆ ಮೂಲೆಯಲ್ಲೂ ಕಸ್ಟಮರ್ ಸರ್ವಿಸ್ ಕೇಂದ್ರಗಳನ್ನು ಹೊಂದಿದೆ. 3,000 ಕಸ್ಟಮರ್ ಸರ್ವಿಸ್ ಪಾಯಿಂಟ್ ಹಾಗೂ ಒಂದೂವರೆ ಲಕ್ಷ ರೀಟೇಲ್ ಔಟ್ಲೆಟ್ಗಳು ಭಾರತದಲ್ಲಿ ಇವೆ. ಇದೀಗ ಸ್ಯಾಮ್ಸಂಗ್ ಕಂಪನಿ ಲ್ಯಾಪ್ಟಾಪ್ ಉತ್ಪಾದನೆಯನ್ನೂ ಭಾರತದಲ್ಲಿ ಆರಂಭಿಸಲಿರುವ ಸ್ಯಾಮ್ಸುಂಗ್ ಮೇಡ್ ಇನ್ ಇಂಡಿಯಾ ಯೋಜನೆಗೆ ಅಕ್ಷರಶಃ ಕೈಜೋಡಿಸಿದಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Mon, 29 January 24