Economy: ಮುಂದಿನ ಏಳು ವರ್ಷ ಆರ್ಥಿಕತೆಯ ಹಂತ ಹಂತದ ಬೆಳವಣಿಗೆ ಸಾಧ್ಯತೆ ಬಿಚ್ಚಿಟ್ಟ ಹಣಕಾಸು ಸಚಿವಾಲಯ

Finance Ministry Report: ಈ ಬಾರಿಯ ಮಧ್ಯಂತರ ಬಜೆಟ್​ಗೆ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆ ಬದಲು ಹಣಕಾಸು ಪರಿಸ್ಥಿತಿ ಪರಾಮರ್ಶೆಯ ವರದಿ ಬಿಡುಗಡೆ ಆಗಿದೆ. ವರದಿ ಪ್ರಕಾರ 2024-25ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರ ಶೇ. 7ರ ಸಮೀಪ ಇರಲಿದೆ. ಮುಂದಿನ 3 ವರ್ಷದಲ್ಲಿ 5 ಟ್ರಿಲಿಯನ್ ಡಾಲರ್, ಆರೇಳು ವರ್ಷದಲ್ಲಿ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು ಎನ್ನಲಾಗಿದೆ.

Economy: ಮುಂದಿನ ಏಳು ವರ್ಷ ಆರ್ಥಿಕತೆಯ ಹಂತ ಹಂತದ ಬೆಳವಣಿಗೆ ಸಾಧ್ಯತೆ ಬಿಚ್ಚಿಟ್ಟ ಹಣಕಾಸು ಸಚಿವಾಲಯ
ಭಾರತದ ಆರ್ಥಿಕತೆ
Follow us
|

Updated on: Jan 29, 2024 | 4:03 PM

ನವದೆಹಲಿ, ಜನವರಿ 29: ಮುಂದಿನ ಆರೇಳು ವರ್ಷದಲ್ಲಿ ಭಾರತದ್ದು ಏಳು ಟ್ರಿಲಿಯನ್ ಡಾಲರ್ ಆಗುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ (Finance Ministry) ವರದಿಯಲ್ಲಿ ಅಂದಾಜು ಮಾಡಲಾಗಿದೆ. ಈ ವರದಿ ಪ್ರಕಾರ ಮುಂದಿನ ಮೂರು ವರ್ಷದಲ್ಲಿ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗಾತ್ರ ಹೊಂದಬಹುದು. ಅದರೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಕುತೂಹಲವೆಂದರೆ ಪ್ರತೀ ಬಜೆಟ್ ವೇಳೆ ಆರ್ಥಿಕ ಸಮೀಕ್ಷಾ (economy survey report) ವರದಿ ಪ್ರಕಟವಾಗುತ್ತಿತ್ತು. ಈ ಬಾರಿ ಹಣಕಾಸು ಸ್ಥಿತಿ ಪರಾಮರ್ಶೆ ವರದಿ ಮಾತ್ರವೇ ಪ್ರಕಟವಾಗಿದೆ.

ಹಣಕಾಸು ಸಚಿವಾಲಯ ಪ್ರಕಟಿಸಿದ 2024ರ ಜನವರಿ ತಿಂಗಳ ಈ ವರದಿಯಲ್ಲಿ (The Indian Economy: A Review January 2024) ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 7ರ ಆಸುಪಾಸಿನಷ್ಟು ಇರಬಹುದು. ಬೇರೆಲ್ಲಾ ಏಜೆನ್ಸಿಗಳು ನಡೆಸಿದ ಸಮೀಕ್ಷೆ ಪ್ರಕಾರ ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6ರಿಂದ ಶೇ. 6.5ರಷ್ಟು ಎಂಬ ಅಂದಾಜು ಇದೆ. ಹಣಕಾಸು ಸಚಿವಾಲಯದ ಅಂದಾಜು ಶೇ. 7ಕ್ಕೆ ಸಮೀಪ ಹೋಗಿದೆ.

ಇದನ್ನೂ ಓದಿ: Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು

ಸತತ ನಾಲ್ಕು ವರ್ಷ ಶೇ. 7ರಷ್ಟು ವೃದ್ಧಿ

ಇದು ನಿಜವೇ ಆದಲ್ಲಿ ಭಾರತದ ಆರ್ಥಿಕತೆ ಸತತ ನಾಲ್ಕು ವರ್ಷ ಕಾಲ ಶೇ. 7ರ ದರದ ಆಸುಪಾಸಿನಲ್ಲಿ ಇದ್ದಂತಾಗುತ್ತದೆ. 2021-22ರಿಂದ ಹಿಡಿದು 2023-24ರವರೆಗೆ ಮೂರು ವರ್ಷ ಭಾರತದ ಜಿಡಿಪಿ ಶೇ. 7ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳವಣಿಗೆ ಹೊಂದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳು ಈ ವೇಳೆ ಮಂದಗತಿಯಲ್ಲಿ ಬೆಳೆದಿರುವುದನ್ನು ಗಮನಿಸಿದರೆ ಭಾರತದ ಆರ್ಥಿಕತೆಯ ಓಟ ಎಷ್ಟು ಮಹತ್ವದ್ದು ಎಂಬುದನ್ನು ಅರಿಯಬಹುದು.

ಭಾರತದ ಆರ್ಥಿಕತೆಯೊಳಗಿನ ಆಂತರಿಕ ಶಕ್ತಿಯು ಬಹಳ ಗಮನಾರ್ಹವಾಗಿರುವುದು, ಜಾಗತಿಕ ಆರ್ಥಿಕ ಅನನುಕೂಲತೆಗಳ ಮಧ್ಯೆಯೂ ಉತ್ತಮವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಿಸಿದೆ. ಈ ವೇಳೆ ಇತ್ತೀಚೆಗೆ ಕೈಗೊಳ್ಳಲಾದ ರಚನಾತ್ಮಕ ಸುಧಾರಣೆಗಳು ಹಾಗೂ ಭವಿಷ್ಯದಲ್ಲಿ ಕೈಗೊಳ್ಳಲಾಗುವ ಸುಧಾರಣೆಗಳ ಫಲವಾಗಿ ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕತೆ ಶೇ. 7ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳೆಯಬಲ್ಲುದು ಎಂದು ಹಣಕಾಸು ಸಚಿವಾಲಯದ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ರಾಜಕೀಯ ವಿಚಲಿತ ಘಟನೆಗಳು ಸಂಭವಿಸದೇ ಹೋದಲ್ಲಿ ಭಾರತದ ಓಟ ನಿರೀಕ್ಷಿತ ರೀತಿಯಲ್ಲಿ ಇರುತ್ತದೆ. ಮುಂದಿನ ಮೂರು ವರ್ಷದಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಾತ್ರದ್ದಾಗುತ್ತದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಮುಂದಿನ ಏಳು ವರ್ಷದಲ್ಲಿ ಏಳು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಬಹುದು ಎಂದು ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: Budget 2024: ಬಜೆಟ್ ಸೆಷನ್ ಆರಂಭಕ್ಕೆ ಮುನ್ನ ಜ. 30ರಂದು ಸರ್ವಪಕ್ಷ ಸಭೆ ಕರೆದ ಸರ್ಕಾರ

ಜರ್ಮನಿ, ಜಪಾನ್ ಹಿಂದಿಕ್ಕಲಿದೆ ಭಾರತ

ಸದ್ಯ ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್ ಬಳಿಕ ಭಾರತವೇ ಅತಿದೊಡ್ಡ ಆರ್ಥಿಕತೆ ಹೊಂದಿರುವುದು. ಭಾರತದ ಜಿಡಿಪಿ ಸದ್ಯ 3.7 ಟ್ರಿಲಿಯನ್ ಡಾಲರ್ ಇದೆ. ಜರ್ಮನಿ ಮತ್ತು ಜಪಾನ್ ಆರ್ಥಿಕತೆ ಕ್ರಮವಾಗಿ 4.4 ಮತ್ತು 4.2 ಟ್ರಿಲಿಯನ್ ಡಾಲರ್ ಇದೆ. ಆ ಎರಡು ದೇಶಗಳ ಜಿಡಿಪಿ ಬೆಳವಣಿಗೆಯ ವೇಗ ಬಹಳ ಕಡಿಮೆ ಇದೆ. ಭಾರತದ ಬೆಳವಣಿಗೆಯ ವೇಗ ಹೆಚ್ಚಿದೆ. ಇವೇ ವೇಗ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ಜರ್ಮನಿ ಮತ್ತು ಜಪಾನ್ ಅನ್ನು ಭಾರತ ಹಿಂದಿಕ್ಕುವ ಎಲ್ಲಾ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ