DA Hike, Arrears: ಈ ಬಾರಿಯೂ 4 ಪ್ರತಿಶತ ಡಿಎ ಹೆಚ್ಚಳ ಖಾತ್ರಿಯಾ? 18 ತಿಂಗಳ ಡಿಎ ಬಾಕಿ ಹಣ ಬಿಡುಗಡೆಗೆ ಪ್ರಸ್ತಾಪ

7th Pay Commission News: ಜನವರಿಯಿಂದ ಅನ್ವಯ ಆಗಬಹುದಾದ ತುಟ್ಟಿ ಭತ್ಯೆ ಈ ಬಾರಿ ನಾಲ್ಕು ಪ್ರತಿಶತದಷ್ಟು ಆಗುವ ಸಾಧ್ಯತೆ ದಟ್ಟವಾಗಿದೆ. ಗ್ರಾಹಕ ಬೆಲೆ ಅನುಸೂಚಿ ಹಣದುಬ್ಬರದ ಆಧಾರದ ಮೇಲೆ ಡಿಎ ಲೆಕ್ಕ ಹಾಕಲಾಗುತ್ತದೆ. ಇನ್ನು, ಕೋವಿಡ್ ಸಂದರ್ಭದಲ್ಲಿ ಹಿಡಿದಿಡಲಾಗಿದ್ದ ಡಿಎ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾಪ ಹಣಕಾಸು ಸಚಿವಾಲಯದ ಮುಂದಿದೆ.

DA Hike, Arrears: ಈ ಬಾರಿಯೂ 4 ಪ್ರತಿಶತ ಡಿಎ ಹೆಚ್ಚಳ ಖಾತ್ರಿಯಾ? 18 ತಿಂಗಳ ಡಿಎ ಬಾಕಿ ಹಣ ಬಿಡುಗಡೆಗೆ ಪ್ರಸ್ತಾಪ
ಡಿಎ ಹೆಚ್ಚಳ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 29, 2024 | 2:17 PM

ನವದೆಹಲಿ, ಜನವರಿ 29: ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA- Dearness Allowance) ಮತ್ತು ತುಟ್ಟಿ ಪರಿಹಾರವನ್ನು (DR- Dearness Relief) ನಾಲ್ಕು ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಕೆಲ ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಜನವರಿ 31ರಂದು ಡಿಎ ಹೆಚ್ಚಳ (DA hike) ಎಷ್ಟು ಎಂಬುದು ಸ್ಪಷ್ಟವಾಗಲಿದೆ. ಒಂದು ವೇಳೆ ತುಟ್ಟಿಭತ್ಯೆ 4 ಪ್ರತಿಶತದಷ್ಟು ಹೆಚ್ಚಳವಾದರೆ ಶೇ. 50ರ ಗಡಿ ಮುಟ್ಟಲಿದೆ. ಇನ್ನೊಂದು ಸಮಾಧಾನಕರ ಸುದ್ದಿಯಲ್ಲಿ ಕೋವಿಡ್ ಸಂದರ್ಭದ 18 ತಿಂಗಳ ಡಿಎ ಬಾಕಿ ಹಣವನ್ನು ಈಗ ಬಿಡುಗಡೆ ಮಾಡಬೇಕೆನ್ನುವ ಪ್ರಸ್ತಾಪವೊಂದು ಹಣಕಾಸು ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಬಜೆಟ್​ನಲ್ಲಿ ಇದರ ಬಿಡುಗಡೆಯ ವಿಚಾರವನ್ನು ಪ್ರಕಟಿಸುವ ಸಾಧ್ಯತೆ ಇಲ್ಲದಿಲ್ಲ.

ಡಿಎ ಹೆಚ್ಚಳ 4 ಪ್ರತಿಶತವಾ?

ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಬೆಲೆ ಏರಿಕೆ ಅಥವಾ ಹಣದುಬ್ಬರದ ಆಧಾರದ ಮೇಲೆ ಡಿಯರ್ನೆಸ್ ಅಲೋಯನ್ಸ್ ದರವನ್ನು ಗಣಿಸಲಾಗುತ್ತದೆ. ಜುಲೈನಿಂದ ಡಿಸೆಂಬರ್​ವರೆಗಿನ ಗ್ರಾಹಕ ಬೆಲೆ ಅನುಸೂಚಿ ದರ (ಎಐಸಿಪಿಐ) ಆಧಾರದ ಮೇಲೆ ಜನವರಿ 1ರ ಡಿಎ ಮತ್ತು ಡಿಆರ್ ದರ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು

ಈ ಲೆಕ್ಕಾಚಾರದ ಪ್ರಕಾರ ಎಐಸಿಪಿಐ ಇಂಡೆಕ್ಸ್​ನ ನವೆಂಬರ್​ವರೆಗಿನ ಅಂಕಿ ಅಂಶ ಬಂದಿದ್ದು 139.1 ಅಂಕಗಳಾಗಿವೆ. ಡಿಎ ಕ್ಯಾಲ್ಕುಲೇಟರ್ ಪ್ರಕಾರ ಶೇ. 49.68ರಷ್ಟಾಗಿತ್ತದೆ. ಡಿಸೆಂಬರ್ ತಿಂಗಳ ಇಂಡೆಕ್ಸ್ ಸಂಖ್ಯೆ ಬರಬೇಕಿದೆ. ಅಷ್ಟೇನೂ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದ್ದು, ಶೇ. 50ಕ್ಕೆ ಡಿಎ ದರವನ್ನು ನಿಗದಿ ಮಾಡುವ ಸಾಧ್ಯತೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಡಿಎ ಹೆಚ್ಚಳದ ವಿಚಾರವನ್ನು ಪ್ರಕಟಿಸಬಹುದು. ಇಲ್ಲಿ ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ ಎಂಬುದು ಹಾಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೂಲ ವೇತನಕ್ಕೆ ಅನ್ವಯ ಆಗುತ್ತದೆ. ಹಾಗೆಯೇ, ಡಿಆರ್ ಅಥವಾ ಡಿಯರ್ನೆಸ್ ರಿಲೀಫ್ ಎಂಬುದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಅನ್ವಯ ಆಗುತ್ತದೆ.

ಸಂಬಳದಲ್ಲಿ ಎಷ್ಟು ಹೆಚ್ಚಾಗಬಹುದು?

ಇಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳ ವೇತನ 60,000 ರೂ ಇದ್ದು, ಮೂಲ ವೇತನ 30,000 ರೂ ಇದೆ ಎಂದಿಟ್ಟುಕೊಳ್ಳಿ. ಇಲ್ಲಿ ಮೂಲ ವೇತನಕ್ಕೆ ಶೇ. 46ರಷ್ಟು ತುಟ್ಟಿಭತ್ಯೆ ಇದೆ ಎಂದರೆ, 13,800 ರೂನಷ್ಟು ಡಿಎ ಆಗುತ್ತದೆ. ಒಂದು ವೇಳೆ ತುಟ್ಟಿಭತ್ಯೆ 4 ಪ್ರತಿಶತದಷ್ಟು ಹೆಚ್ಚಾದರೆ ತುಟ್ಟಿಭತ್ಯೆ 15,000 ರೂ ಆಗುತ್ತದೆ. ಅಂದರೆ, 30 ಸಾವಿರ ರೂ ಮೂಲವೇತನ ಪಡೆಯುತ್ತಿರುವವರಿಗೆ ಸಂಬಳವು 1,200 ರೂನಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: Savings: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

18 ತಿಂಗಳ ಅರಿಯರ್ಸ್ ಸಿಗುತ್ತಾ?

ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಸಂದರ್ಭದಲ್ಲಿ 18 ತಿಂಗಳ ಕಾಲ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಿಎ ಹಣ ನೀಡದೇ ಹಿಡಿದಿಟ್ಟುಕೊಳ್ಳಲಾಗಿತ್ತು. 2020ರ ಜನವರಿಯಿಂದ 2021ರ ಜೂನ್ ತಿಂಗಳವರೆಗೆ ಡಿಎ ಹಣ ಬಿಡುಗಡೆ ಮಾಡಲಾಗಿಲ್ಲ.

ಇದೀಗ ಈ ಅರಿಯರ್ಸ್ ಅಥವಾ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂಬ ಪ್ರಸ್ತಾಪವು ಹಣಕಾಸು ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ