Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು

Women Employees and Entrepreneurs Expectations: ಉದ್ಯೋಗಸ್ಥ ಮಹಿಳೆಯರಿಗೆ ರಜಾ ದಿನಗಳ ಸಂಖ್ಯೆ ಹೆಚ್ಚಳ, ಕಡ್ಡಾಯ ಹೆರಿಗೆ ರಜೆ ಇತ್ಯಾದಿ ಸೌಲಭ್ಯಗಳನ್ನು ಬಜೆಟ್​ನಲ್ಲಿ ನೀಡಲಿ. ಹಾಗೆಯೇ, ಯುವ ಮಹಿಳೆಯರ ಕೌಶಲ್ಯ ಅಭಿವೃದ್ಧಿಗೆ ತರಬೇತಿ, ಉದ್ದಿಮೆದಾರರಿಗೆ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳು ಸಿಗಲಿ ಎಂಬ ಕೂಗು ಕೇಳಿಬರುತ್ತಿದೆ.

Budget 2024: ಹೆರಿಗೆ ರಜೆ, ಕೌಶಲ್ಯ ತರಬೇತಿ ಇತ್ಯಾದಿ; ಮಹಿಳಾ ಉದ್ಯೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಗಳು
ಮಹಿಳೆಯರು
Follow us
|

Updated on: Jan 29, 2024 | 12:56 PM

ಇವತ್ತು ವೃತ್ತಿಪರ ಮಹಿಳೆಯರಷ್ಟೇ ಅಲ್ಲ ಕೆಲಸಕ್ಕೆ ಹೋಗುವ ಎಲ್ಲಾ ವರ್ಗದ ಮಹಿಳೆಯರೂ ಬಹಳ ಕೌಟುಂಬಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮನೆ ಹಾಗು ಕೆಲಸ ಎರಡನ್ನೂ ಸಂಭಾಳಿಸುವ ಭಾರತ ಮಹಿಳೆಯ ಹೆಗಲಿಗೇ ಹೆಚ್ಚು ಬಿದ್ದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಲಸದಲ್ಲಿರುವ ಮಹಿಳೆಯರು ಸರ್ಕಾರದಿಂದಲಾದರೂ ನೆರವು ಸಿಗಬಹುದು ಎಂಬ ಸಹಜ ನಿರೀಕ್ಷೆಯಲ್ಲಿದ್ದಾರೆ. ಸ್ವತಃ ಮಹಿಳೆಯೇ ಆಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ (Union Budget 2024) ಮಹಿಳೆಯರಿಗೆ ನೆರವಿನ ಹಸ್ತ ಚಾಚುತ್ತಾರಾ?

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ರಜಾ ದಿನಗಳ ಸಂಖ್ಯೆ ಹೆಚ್ಚಳ, ಕಡ್ಡಾಯ ಹೆರಿಗೆ ರಜೆ ಇತ್ಯಾದಿ ಸೌಲಭ್ಯಗಳನ್ನು ಬಜೆಟ್​ನಲ್ಲಿ ನೀಡಲಿ. ಹಾಗೆಯೇ, ಯುವ ಮಹಿಳೆಯರ ಕೌಶಲ್ಯ ಅಭಿವೃದ್ಧಿಗೆ ತರಬೇತಿ, ಉದ್ದಿಮೆದಾರರಿಗೆ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳು ಸಿಗಲಿ ಎಂಬ ಕೂಗು ಕೇಳಿಬರುತ್ತಿದೆ. ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

ಇದನ್ನೂ ಓದಿ: Union Budget 2024: ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಪಾಲಾಗಲಿವೆ ಹಲವು ದಾಖಲೆಗಳು, ಇಲ್ಲಿದೆ ವಿವರ

ಹೆರಿಗೆ ರಜೆ…

ಐವತ್ತಕ್ಕೂ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳು ಪೇಯ್ಡ್ ಮ್ಯಾಟರ್ನಿಟಿ ಲೀವ್ ಅಥವಾ ಹೆರಿಗೆ ರಜೆ ಕೊಡುವುದನ್ನು ಕಡ್ಡಾಯಗೊಳಿಸಬೇಕು. ಹಾಗೆಯೇ, ಈ ರಜೆ ವಿಚಾರದಲ್ಲಿ ಸಣ್ಣ ಕಂಪನಿಗಳಿಗೆ ಸರ್ಕಾರವೇ ಧನಸಹಾಯ ನೀಡಲು ಆಲೋಚಿಸಬಹುದು ಎಂದು ಸನ್​ಶೈನ್ ಕಾರ್ಪೊರೇಟ್ ಕ್ರೆಷಸ್ ಸಂಸ್ಥೆಯ ಮುಖ್ಯಸ್ಥೆ ಸಲೋನಿ ವರ್ಮಾ ಹೇಳಿದ್ದಾರೆ.

ಬಹಳಷ್ಟು ಕಂಪನಿಗಳು ಮ್ಯಾಟರ್ನಿಟಿ ಲೀವ್ ನೀಡಬೇಕಾದೀತು ಎಂದು ಯುವ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಧನಸಹಾಯ ಮಾಡಲಿ ಎನ್ನುವ ಅನಿಸಿಕೆ ಇದೆ. ಹಾಗೆಯೇ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಪೇಡ್ ಲೀವ್ ಸಂಖ್ಯೆ ಹೆಚ್ಚಿಸಬೇಕು ಎಂಬ ಕೂಗೂ ಇದೆ.

ಇದನ್ನೂ ಓದಿ: Union Budget 2024: ಬಜೆಟ್ ಪದ ಬಳಕೆ ಆರಂಭವಾಗಿದ್ದು ಹೇಗೆ? ಆಯವ್ಯಯದ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಉದ್ಯೋಗಸ್ಥೆಯರು ಮತ್ತು ಮಹಿಳಾ ಉದ್ದಿಮೆದಾರರಿಗೆ ಬಜೆಟ್ ನಿರೀಕ್ಷೆಗಳು

  • ಹನ್ನೆರಡನೇ ತರಗತಿ ಬಳಿಕ ಯುವ ಮಹಿಳೆಯರಿಗೆ ಕೌಶಲ್ಯ ತರಬೇತಿ ಒದಗಿಸುವ ಕಾರ್ಯಕ್ಕೆ ಒತ್ತು ಕೊಡಬೇಕು.
  • ಮಹಿಳಾ ಸ್ವಸಹಾಯ ಸಂಘಗಳು ಹೆಚ್ಚು ಬಲಯುತವಾಗಿ ಬೆಳೆಯಲು ಇನ್ನಷ್ಟು ಶಕ್ತಿ ತುಂಬಬೇಕು.
  • 50ಕ್ಕೂ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳು ಹೆರಿಗೆ ರಜೆ ನೀಡಬೇಕು.
  • ಮಹಿಳಾ ಉದ್ಯೋಗಿಗಳಿಗೆ ಪಾವತಿ ರಜೆಯ ಸಂಖ್ಯೆ ಹೆಚ್ಚಿಸಬೇಕು
  • ಸಣ್ಣ ಕಂಪನಿಗಳಿಗೆ ಹೆರಿಗೆ ರಜೆ ವಿಚಾರವಾಗಿ ಸರ್ಕಾರ ನೆರವು ಒದಗಿಸಬೇಕು.
  • ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಭತ್ಯೆಯನ್ನು ಹೆಚ್ಚಿಸಬೇಕು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ