Union Budget 2024: ಬಜೆಟ್ ಪದ ಬಳಕೆ ಆರಂಭವಾಗಿದ್ದು ಹೇಗೆ? ಆಯವ್ಯಯದ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಸದ್ಯ ಎಲ್ಲೆಡೆ ಬಜೆಟ್‌ ಬಗ್ಗೆ ಚರ್ಚೆಯಾಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ, ಪ್ರತಿಯೊಂದು ವರ್ಗವೂ ಹಲವು ನಿರೀಕ್ಷೆಗಳನ್ನು ಹೊಂದಿವೆ. ಈ ಬಜೆಟ್ ಎಂಬ ಪದ ಎಲ್ಲಿಂದ ಹುಟ್ಟುಕೊಂಡಿತು? ಬಜೆಟ್ ಪದದ ಉಗಮದ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

Union Budget 2024: ಬಜೆಟ್ ಪದ ಬಳಕೆ ಆರಂಭವಾಗಿದ್ದು ಹೇಗೆ? ಆಯವ್ಯಯದ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ganapathi Sharma
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 26, 2024 | 3:00 PM

ನವದೆಹಲಿ, ಜನವರಿ 26: ಫೆಬ್ರವರಿ 1 ಹತ್ತಿರವಾಗುತ್ತಿದ್ದಂತೆ, ಬಜೆಟ್‌ಗೆ (Union Budget 2024) ಸಂಬಂಧಿಸಿದ ಚರ್ಚೆಗಳು ಹೆಚ್ಚಾಗಿವೆ. ಮಧ್ಯಂತರ ಬಜೆಟ್​ನಲ್ಲಿ ಮೋದಿ ಸರ್ಕಾರ ಜನಸಾಮಾನ್ಯರಿಗೆ ಏನೆಲ್ಲ ಘೋಷಣೆಗಳನ್ನು ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ದೇಶದ ಬಜೆಟ್ ಮಂಡನೆ ಫೆಬ್ರವರಿ 1ರಂದು ಮಾಡಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಜನಸಾಮಾನ್ಯರು ಸೇರಿದಂತೆ ಪ್ರತಿಯೊಂದು ವರ್ಗವೂ ಈ ಬಜೆಟ್‌ನ ಬಗ್ಗೆ ಹೆಚ್ಚಿನ ನಿರೀಕ್ಷೆಯಲ್ಲಿದೆ. ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಆದರೆ ಬಜೆಟ್ ಎಂಬ ಪದ ಎಲ್ಲಿಂದ ಬಂತು, ಅದಕ್ಕೆ ಆ ಹೆಸರು ಹೇಗೆ ಬಂತು ಗೊತ್ತಾ?

ಬಜೆಟ್ ಎಂಬ ಹೆಸರು ಹೇಗೆ ಬಂತು?

ಬಜೆಟ್ ಎಂಬ ಪದವು ಫ್ರೆಂಚ್ ಪದ ‘ಬೌಜ್​’ನಿಂದ ಬಂದಿದೆ. ಬೌಜ್ ಎಂದರೆ ಚಿಕ್ಕ ಚೀಲ. ಇದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. 1733 ರಲ್ಲಿ, ಆಗ ಇಂಗ್ಲೆಂಡಿನ ಹಣಕಾಸು ಮಂತ್ರಿಯಾಗಿದ್ದ ಸರ್ ರಾಬರ್ಟ್ ವಾಲ್ಪೋಲ್ ಅವರು ಸಣ್ಣ ಚೀಲದಲ್ಲಿ ಬಜೆಟ್ ದಾಖಲೆಗಳೊಂದಿಗೆ ಸಂಸತ್ತಿಗೆ ಬಂದರು. ಈ ಬ್ಯಾಗ್ ಮತ್ತು ಅದರಲ್ಲಿ ಏನಿದೆ ಎಂದು ಕೆಲವರು ಅವರನ್ನು ಕೇಳಿದಾಗ, ಎಲ್ಲರಿಗೂ ಬಜೆಟ್ ಇದೆ ಎಂದು ಹೇಳಿದರು. ಅಂದಿನಿಂದ, ಬಜೆಟ್ ಎಂಬ ಪದವು ಜನಪ್ರಿಯವಾಗಿದೆ.

ಸಂವಿಧಾನದಲ್ಲಿ ಬಜೆಟ್ ಎಂಬ ಪದವೇ ಇಲ್ಲ!

ನಿಮಗೆ ಆಶ್ಚರ್ಯವಾಗಬಹುದು, ಆದರೆ ಭಾರತದ ಸಂವಿಧಾನದಲ್ಲಿ ಬಜೆಟ್ ಎಂಬ ಪದವನ್ನು ಬಳಸಲಾಗಿಲ್ಲ. ಸಂವಿಧಾನದ 112 ನೇ ವಿಧಿಯಲ್ಲಿ ‘ವಾರ್ಷಿಕ ಹಣಕಾಸು ಹೇಳಿಕೆ’ ಎಂಬ ಪದವನ್ನು ಬಳಸಲಾಗಿದೆ. ಈ ಹೇಳಿಕೆಯಲ್ಲಿ, ಕೇಂದ್ರ ಸರ್ಕಾರವು ಇಡೀ ವರ್ಷದ ಸರ್ಕಾರದ ಅಂದಾಜು ವೆಚ್ಚ ಮತ್ತು ಆದಾಯದ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ.

ಯೋಜನೆಗಳ ಲೆಕ್ಕಪತ್ರ ನಿರ್ವಹಣೆ

ಸಾಮಾನ್ಯ ಬಜೆಟ್ ಸರ್ಕಾರದ ಖರ್ಚು ಮತ್ತು ಆದಾಯವನ್ನು ಲೆಕ್ಕಹಾಕುತ್ತದೆ. ಪ್ರತಿ ತಿಂಗಳ ಲೆಕ್ಕಾಚಾರದಿಂದ ಅದರ ಸಗಟು ಅಂದಾಜು ಬರುತ್ತದೆ. ಇಷ್ಟು ವರ್ಷಗಳ ಅನುಭವದಿಂದ ಸರ್ಕಾರ ಈ ಲೆಕ್ಕಾಚಾರಗಳನ್ನು ಜನರ ಮುಂದಿಡುತ್ತದೆ. ಮುಂಬರುವ ಆರ್ಥಿಕ ವರ್ಷಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಬಜೆಟ್​ನಲ್ಲಿ ಹಣದ ಒಳಹರಿವು ಮತ್ತು ಹೊರಹರಿವು ಸಮನ್ವಯಗೊಳಿಸಲು ಪ್ರಯತ್ನಿಸಲಾಗುತ್ತದೆ.

ಚುನಾವಣಾ ವರ್ಷಗಳಲ್ಲಿ ಎರಡು ಬಾರಿ ಬಜೆಟ್

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎರಡು ಬಾರಿ ಬಜೆಟ್ ಮಂಡಿಸಲಾಗುತ್ತದೆ. ಆಡಳಿತಾತ್ಮಕ ವೆಚ್ಚಗಳನ್ನು ಒದಗಿಸಲು ಆಡಳಿತ ಪಕ್ಷವು ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತದೆ. ಹೊಸ ಸರ್ಕಾರ ಬಂದರೆ ಯೋಜನೆಗಳು, ಗುರಿಗಳು ಮತ್ತು ನೀತಿಗಳನ್ನು ಬದಲಾಯಿಸುತ್ತದೆ. ಹೀಗಾಗಿ ಚುನಾವಣಾ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ನಂತರ ಬಂದ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ.

ಇದನ್ನೂ ಓದಿ: ಬಜೆಟ್ ಮಂಡನೆಗೆ ಮುನ್ನ ಹಲ್ವಾ ತಿನಿಸುವ ಕಾರ್ಯಕ್ರಮ ಯಾಕೆ ನಡೆಯುತ್ತದೆ? ಏನಿದರ ವಿಶೇಷತೆ?

ಮಧ್ಯಂತರ ಬಜೆಟ್​ನಲ್ಲಿ ಏನೇನಿರುತ್ತವೆ?

ಮಧ್ಯಂತರ ಬಜೆಟ್‌ನಲ್ಲಿ ಹೊಸ ಸರ್ಕಾರ ರಚನೆಯಾಗುವವರೆಗಿನ ಆಯ ವ್ಯಯವನ್ನು ಒದಗಿಸಲಾಗುತ್ತದೆ. ಇದರಲ್ಲಿ ಹಣ ಎಲ್ಲಿ ಮತ್ತು ಹೇಗೆ ಬರುತ್ತದೆ ಮತ್ತು ಎಲ್ಲಿ ಮತ್ತು ಹೇಗೆ ಹಣವನ್ನು ಖರ್ಚು ಮಾಡಲಾಗುವುದು ಎಂಬ ಬ್ಯಾಲೆನ್ಸ್ ಶೀಟ್ ಅನ್ನು ಪ್ರಸ್ತುತಪಡಿಸಲಾಗುತ್ತದೆ. ಏಪ್ರಿಲ್‌ನಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗುತ್ತಿದ್ದಂತೆಯೇ ಮಧ್ಯಂತರ ಬಜೆಟ್‌ನಲ್ಲಿ ಮಂಡಿಸಿದ ಅಂಶಗಳು ಜಾರಿಗೆ ಬರುತ್ತವೆ. ಈ ಬಜೆಟ್​​ ಹೊಸ ಸರ್ಕಾರ ರಚನೆಯಾಗುವವರೆಗೆ ಹಾಲಿ ಸರ್ಕಾರಕ್ಕೆ ಖರ್ಚು ಮಾಡಲು ಅವಕಾಶ ಕಲ್ಪಿಸುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Fri, 26 January 24

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ