US GDP: ಅಚ್ಚರಿಯ ಬೆಳವಣಿಗೆಯಲ್ಲಿ ಚೀನಾವನ್ನು ಆರ್ಥಿಕ ವೃದ್ಧಿಯಲ್ಲಿ ಹಿಂದಿಕ್ಕಿದ ಅಮೆರಿಕ; ಭಾರತಕ್ಕೂ ಇದೆ ಖುಷಿ ಸುದ್ದಿ

ಅಮೆರಿಕದ ಜಿಡಿಪಿ 2023ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ. 3.3ರಷ್ಟು ಬೆಳೆದಿದೆ. 2022ರಲ್ಲಿ ಶೇ. 1.9ರಷ್ಟು ಇದ್ದ ಜಿಡಿಪಿ ದರ 2023ರಲ್ಲಿ ಶೇ. 2.5ಕ್ಕೆ ಏರಿದೆ. ನಾಮಿನಲ್ ಜಿಡಿಪಿಯಲ್ಲಿ ಅಮೆರಿಕ ಶೇ. 6.3ರಷ್ಟು ಬೆಳೆದಿದೆ. ಅದೇ ವೇಳೆ ಚೀನಾದ ದರ ಶೇ. 4.6ರಷ್ಟು ಇದೆ.

US GDP: ಅಚ್ಚರಿಯ ಬೆಳವಣಿಗೆಯಲ್ಲಿ ಚೀನಾವನ್ನು ಆರ್ಥಿಕ ವೃದ್ಧಿಯಲ್ಲಿ ಹಿಂದಿಕ್ಕಿದ ಅಮೆರಿಕ; ಭಾರತಕ್ಕೂ ಇದೆ ಖುಷಿ ಸುದ್ದಿ
ಅಮೆರಿಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 12:43 PM

ವಾಷಿಂಗ್ಟನ್, ಜನವರಿ 26: ಅಮೆರಿಕದ ಆರ್ಥಿಕತೆ ನಿರೀಕ್ಷೆಮೀರಿ ಬೆಳವಣಿಗೆ ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದೆ. 2023ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್) ಅಮೆರಿಕದ ಜಿಡಿಪಿ (US GDP) ಶೇ. 3.3ರಷ್ಟು ವೃದ್ಧಿಯಾಗಿದೆ. ಇದರೊಂದಿಗೆ 2023ರ ವರ್ಷ ಅಮೆರಿಕಕ್ಕೆ ಸಂತಸದ ವರ್ಷವೆನಿಸಿದೆ. 2022ರಲ್ಲಿ ಕೇವಲ 1.9 ಪ್ರತಿಶತದಷ್ಟು ಮಾತ್ರ ಇದ್ದ ಜಿಡಿಪಿ ವೃದ್ಧಿ 2023ರಲ್ಲಿ ಶೇ. 2.5ಕ್ಕೆ ಏರಿದೆ. 2023ರ ಮೂರನೇ ತ್ರೈಮಾಸಿಕ ಅವಧಿಯಾದ ಜುಲೈನಿಂದ ಸೆಪ್ಟೆಂಬರ್​ನವರೆಗಿನ ಅವಧಿಯಲ್ಲಿ 4.9 ಪ್ರತಿಶತದಷ್ಟು ಬೆಳೆದಿತ್ತು.

ಚೀನಾದ ಜಿಡಿಪಿ 2023ರಲ್ಲಿ ಶೇ. 5ರ ಆಸುಪಾಸಿನ ದರದಲ್ಲಿ ಬೆಳೆಯುವ ನಿರೀಕ್ಷೆ ಇದೆಯಾದರೂ ನಾಮಿನಲ್ ಜಿಡಿಪಿಯಲ್ಲಿ ಅಮೆರಿಕ ಉತ್ತಮ ಬೆಳವಣಿಗೆ ಕಂಡಿದೆ. 2023ರಲ್ಲಿ ಚೀನಾದ ನಾಮಿನಲ್ ಜಿಡಿಪಿ ಶೇ. 4.6ರಷ್ಟು ಹೆಚ್ಚಾಗಿದ್ದರೆ, ಅಮೆರಿಕದ್ದು ಶೇ. 6.3ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಚೀನಾ ವಿಶ್ವದ ಅಗ್ರ ಆರ್ಥಿಕತೆಯ ದೇಶವಾಗುವ ಪ್ರಯತ್ನಕ್ಕೆ ಸದ್ಯ ತುಸು ತೊಡರುಗಾಲು ಬಿದ್ದಂತಾಗಿದೆ. ನಾಮಿನಲ್ ಜಿಡಿಪಿ ಎಂದರೆ ಹಣದುಬ್ಬರ, ಬೆಲೆ ಏರಿಕೆಯ ಪರಿಣಾಮ ಇಲ್ಲದ ಒಟ್ಟಾರೆ ಉತ್ಪನ್ನ ಮೊತ್ತವಾಗಿದೆ.

ಇದನ್ನೂ ಓದಿ: Calligo: ಬೆಂಗಳೂರಿನ ಕ್ಯಾಲಿಗೋ ಸಾಧನೆ; ಪೊಸಿಟ್ ಎನೇಬಲ್ಡ್ ಸಿಲಿಕಾನ್ ರಚಿಸಿದ ವಿಶ್ವದ ಮೊದಲ ಕಂಪನಿ

ಕೋವಿಡ್ ಘಟನಾವಳಿಗಳ ಗಾಯದಿಂದ ಚೇತರಿಸಿಕೊಳ್ಳಲು ಚೀನಾ ಪರದಾಟ

2020ರಲ್ಲಿ ಕೋವಿಡ್ ಉದ್ಭವವಾದಾಗಿನಿಂದಲೂ ಚೀನಾ ಸಂಕಷ್ಟಕ್ಕೆ ಸಿಲುಕಿದೆ. ಅನೇಕ ದೇಶಗಳಿಗಿಂತ ಹೆಚ್ಚು ಬಾರಿ ಚೀನಾದಲ್ಲಿ ಲಾಕ್​ಡೌನ್​ಗಳಾಗಿವೆ. ಇದರಿಂದಾಗಿ ಚೀನಾದ ಆರ್ಥಿಕತೆ ಬಹಳಷ್ಟು ಮಂದಗೊಂಡಿದೆ. ವಿಶ್ವಕ್ಕೆ ಫ್ಯಾಕ್ಟರಿ ಎನಿಸಿದ್ದ ಚೀನಾದ ಈ ಸ್ಥಿತಿಯಿಂದಾಗಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಧಕ್ಕೆಯಾಗಿತ್ತು. ಬಹಳಷ್ಟು ಕಂಪನಿಗಳು ಚೀನಾದಿಂದ ಹೊರಗೆ ಕಾಲಿಡಲು ಪ್ರಯತ್ನಿಸುತ್ತಿವೆ. ಭಾರತ, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ ಮೊದಲಾದ ದೇಶಗಳತ್ತ ಕಂಪನಿಗಳು ಮತ್ತೊಂದು ಕಾಲು ಇರಿಸುತ್ತಿವೆ.

ಚೀನಾ ಇತ್ತೀಚೆಗಷ್ಟೇ ತನ್ನ ಆರ್ಥಿಕತೆಯನ್ನು ಪೂರ್ಣವಾಗಿ ತೆರೆದಿದೆ. ಆದರೆ, ಅದು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಆರ್ಥಿಕತೆ ಗರಿಗೆದರಿಲ್ಲ ಎಂಬುದು ಸತ್ಯ.

ಅಮೆರಿಕದ ಆರ್ಥಿಕತೆಗೆ ಪುಷ್ಟಿ ಕೊಟ್ಟಿದ್ದು ಅಲ್ಲಿನ ಜನರ ಅನುಭೋಗ

ಅಮೆರಿಕ ಮೊದಲೇ ಅನುಭೋಗ ದೇಶ. ಅಂದರೆ ಸಾರ್ವಜನಿಕ ಖರ್ಚುಗಳೇ ಅದರ ಆರ್ಥಿಕತೆಗೆ ಜೀವಾಳ. ಹಣದುಬ್ಬರ ಮೊದಲಾದ ಸಮಸ್ಯೆಗಳಿದ್ದರೂ ಅಲ್ಲಿನ ಜನರು ಖರ್ಚು ಮಾಡುವುದನ್ನು ಕಡಿಮೆ ಮಾಡಿಲ್ಲ. ಇದರಿಂದಾಗಿ ಆರ್ಥಿಕ ಹಿಂಜರಿತದ ಅಪಾಯದಿಂದ ಅಮೆರಿಕ ಪಾರಾಗಲು ಸಾಧ್ಯವಾಗಿದೆ.

ಇದನ್ನೂ ಓದಿ: Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?

ಬಹಳಷ್ಟು ಆರ್ಥಿಕ ತಜ್ಞರು ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಬಹುದು ಎಂದು ಅಂದಾಜು ಮಾಡಿದ್ದರು. ನಾಲ್ಕು ದಶಕದಲ್ಲೇ ಅತಿಹೆಚ್ಚು ಇದ್ದ ಹಣದುಬ್ಬರ ಈಗ ಸಾಕಷ್ಟು ಕಡಿಮೆ ಆಗಿದೆ. ಜಿಡಿಪಿ ಕೂಡ ನಿರೀಕ್ಷೆಮೀರಿ ಬೆಳೆಯುತ್ತಿದೆ.

ಅಮೆರಿಕದ ಆರ್ಥಿಕತೆ ಬೆಳೆದಷ್ಟೂ ಭಾರತಕ್ಕೂ ಸಕಾರಾತ್ಮಕ ಪರಿಣಾಮ ಇರುತ್ತದೆ. ಭಾರತದ ಹೆಚ್ಚಿನ ಸಾಫ್ಟ್​ವೇರ್ ರಫ್ತು ಅಮೆರಿಕಕ್ಕೆ ಹೋಗುತ್ತದೆ. ಭಾರತದಲ್ಲಿ ಅಮೆರಿಕ ಕಂಪನಿಗಳ ಹೂಡಿಕೆ ಹೆಚ್ಚಬಹುದು. ಇದರಿಂದ ಭಾರತದ ಆರ್ಥಿಕತೆಯೂ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್