Foxconn CEO: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯುಗೆ ಪದ್ಮಭೂಷಣ ಪ್ರಶಸ್ತಿ ಗೌರವ

Padma Bhushan Award for Young Liu: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯು ಅವರಿಗೆ ಭಾರತದ ನಾಗರಿಕ ಗೌರವವಾದ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ತೈವಾನ್ ದೇಶದ ಯಂಗ್ ಲಿಯು 1988ರಲ್ಲಿ ಸ್ಥಾಪಿಸಿದ ಯಂಗ್ ಮೈಕ್ರೋ ಸಿಸ್ಟಮ್ಸ್ 1994ರಲ್ಲಿ ಫಾಕ್ಸ್​ಕಾನ್ ಜೊತೆ ವಿಲೀನಗೊಂಡಿತು. ಫಾಕ್ಸ್​ಕಾನ್ ಭಾರತದಲ್ಲಿ ಹಲವು ಘಟಕಗಳನ್ನು ಸ್ಥಾಪಿಸಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಬದ್ಧವಾಗಿದೆ.

Foxconn CEO: ಫಾಕ್ಸ್​ಕಾನ್ ಸಿಇಒ ಯಂಗ್ ಲಿಯುಗೆ ಪದ್ಮಭೂಷಣ ಪ್ರಶಸ್ತಿ ಗೌರವ
ಯಂಗ್ ಲಿಯು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 26, 2024 | 10:45 AM

ನವದೆಹಲಿ, ಜನವರಿ 26: ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ದೈತ್ಯ ಫಾಕ್ಸ್​ಕಾನ್ ಸಂಸ್ಥೆಯ ಸಿಇಒ ಯೂಂಗ್ ಲಿಯು (Foxconn CEO Young Liu) ಅವರಿಗೆ ಭಾರತದ ಸರ್ಕಾರದಿಂದ ಪದ್ಮಪ್ರಶಸ್ತಿ (Padma Award) ಗೌರವ ಸಿಕ್ಕಿದೆ. ಗಣರಾಜ್ಯೋತ್ಸವ ಅಂಗವಾಗಿ ಒಟ್ಟು 132 ಮಂದಿಗೆ ಪದ್ಮಪ್ರಶಸ್ತಿಗಳು ಸಂದಿದ್ದು, ಅದರಲ್ಲಿ ಫಾಕ್ಸ್​ಕಾನ್ ಸಿಇಒ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಲಾಗಿದೆ.

ಭಾರತ ರತ್ನ ಬಳಿಕ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುಚ್ಚ ನಾಗರಿಕ ಪ್ರಶಸ್ತಿಗಳಾಗಿವೆ. ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಹೀಗೆ ಮೂರು ರೀತಿಯ ಪದ್ಮ ಪ್ರಶಸ್ತಿಗಳಿವೆ. ಪದ್ಮ ವಿಭೂಷಣ ಎಂಬುದು ಪದ್ಮ ಪ್ರಶಸ್ತಿಗಳ ಪೈಕಿ ಗರಿಷ್ಠ ಗೌರವವಾಗಿದೆ. ಸಮಾಜ ಸೇವೆ, ಸಾರ್ವಜನಿಕ ಸೇವೆ, ವಿಜ್ಞಾನ ತಂತ್ರಜ್ಞಾನ, ವ್ಯಾಪಾರ ಉದ್ದಿಮೆ, ವೈದ್ಯಕೀಯ, ಸಾಹಿತ್ಯ ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಗೌರವಾನ್ವಿತರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Padma Awards 2024 Winners List: ಕರ್ನಾಟಕದ ಇಬ್ಬರು ಸೇರಿದಂತೆ 34 ಸಾಧಕರಿಗೆ ಪದ್ಮಶ್ರೀ, ಇಲ್ಲಿದೆ ಪುರಸ್ಕೃತರ ಪಟ್ಟಿ

ಈ ಬಾರಿ ಪದ್ಮ ಪ್ರಶಸ್ತಿಗಳನ್ನು ಪಡೆದಿರುವ 132 ಮಂದಿ ಪೈಕಿ ಐವರಿಗೆ ಪದ್ಮ ವಿಭೂಷಣ ಸಿಕ್ಕಿದೆ. 17 ಜನರಿಗೆ ಪದ್ಮ ಭೂಷಣ ಹಾಗೂ 110 ಮಂದಿಗೆ ಪದ್ಮ ಶ್ರೀ ಸಿಕ್ಕಿದೆ. ಪದ್ಮ ಪುರಸ್ಕೃತರಲ್ಲಿ 8 ಮಂದಿ ವಿದೇಶಿಗರು, ಅನಿವಾಸಿ ಭಾರತೀಯರಿದ್ದಾರೆ. 9 ಮಂದಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.

ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ನಟಿ ವೈಜಯಂತಿ ಮಾಲಾ, ಟಾಲಿವುಡ್ ಸೂಪರ್​ಸ್ಟಾರ್ ಚಿರಂಜೀವಿ, ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ್ ಪಾಠಕ್, ನರ್ತಕಿ ಪದ್ಮ ಸುಬ್ರಹ್ಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸಿಕ್ಕಿದೆ.

ಫಾಕ್ಸ್​ಕಾನ್ ಸಿಇಒ ಯೂಂಗ್ ಲಿಯು ಬಗ್ಗೆ…

ತೈವಾನ್ ದೇಶದ ಯಂಗ್ ಲಿಯು ನಾಲ್ಕು ದಶಕಗಳ ಅನುಭವಸ್ಥ ಉದ್ಯಮಿಯಾಗಿದ್ದಾರೆ. ತೈವಾನ್​ನಲ್ಲಿ ಪದವಿ ಮಟ್ಟದವರೆಗೂ ಓದಿ, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್​ನಲ್ಲಿ ಎಂಎಸ್ ಮಾಡಿದ್ದಾರೆ.

ಇದನ್ನೂ ಓದಿ: Swiggy Layoffs: ಒಂದು ವರ್ಷದ ಅಂತರದಲ್ಲಿ ಸ್ವಿಗ್ಗಿಯಲ್ಲಿ ಎರಡನೇ ಬಾರಿ ಲೇ ಆಫ್; ಈ ಬಾರಿ 400 ಮಂದಿ ಔಟ್

1988ರಲ್ಲಿ ಯಂಗ್ ಮೈಕ್ರೋ ಸಿಸ್ಟಮ್ಸ್, 1995ರಲ್ಲಿ ಐಸಿ ಡಿಸೈನ್ ಕಂಪನಿ ಮತ್ತು 1997ರಲ್ಲಿಐಟಿಎಕ್ಸ್ (ITeX) ಸಂಸ್ಥೆಗಳನ್ನು ಸಂಸ್ಥಾಪಿಸಿದ್ದಾರೆ. ಅವರ ಮೊದಲ ಕಂಪನಿಯಾದ ಯಂಗ್ ಮೈಕ್ರೋ ಸಿಸ್ಟಮ್ಸ್ 1994ರಲ್ಲಿ ಫಾಕ್ಸ್​ಕಾನ್ ಜೊತೆ ವಿಲೀನಗೊಂಡಿತು. ಫಾಕ್ಸ್​ಕಾನ್ ಸಂಸ್ಥೆ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆ್ಯಪಲ್ ಸಂಸ್ಥೆಯ ಉತ್ಪನ್ನಗಳನ್ನು ಫಾಕ್ಸ್​ಕಾನ್ ತಯಾರಿಸುತ್ತದೆ. ಭಾರತದಲ್ಲಿ ಹಲವು ಘಟಕಗಳನ್ನು ಆರಂಭಿಸಿದೆ. ಈಗ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೂ ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ