Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?

Companies with Highest Market Capitalization: ಮೈಕ್ರೋಸಾಫ್ಟ್ ಸಂಸ್ಥೆಯ ಮಾರ್ಕೆಟ್ ಕ್ಯಾಪಿಟಲೈಸೇಶನ್ ಅಥವಾ ಷೇರುಸಂಪತ್ತು ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಗಡಿ ಮುಟ್ಟಿದೆ. ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಹೊಂದಿದ ಮೊದಲ ಕಂಪನಿ ಮೈಕ್ರೋಸಾಫ್ಟ್ ಆಗಿದೆ. ಅತಿಹೆಚ್ಚು ಮಾರ್ಕೆಟ್ ಕ್ಯಾಪಿಟಲ್ ಹೊಂದಿರುವ ಜಾಗತಿಕ 100 ಕಂಪನಿಗಳಲ್ಲಿ ಮೂರು ಭಾರತೀಯ ಕಂಪನಿಗಳಿವೆ.

Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?
ಮೈಕ್ರೋಸಾಫ್ಟ್
Follow us
|

Updated on: Jan 25, 2024 | 10:58 AM

ನ್ಯೂಯಾರ್ಕ್, ಜನವರಿ 25: ಮೈಕ್ರೋಸಾಫ್ಟ್ ಕಂಪನಿಯ ಷೇರುಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ಅದರ ಷೇರುಮೊತ್ತ ಅಥವಾ ಮಾರ್ಕೆಟ್ ಕ್ಯಾಪಿಟಲ್ (Market capitalization) ಮೊದಲ ಬಾರಿಗೆ ಮೂರು ಟ್ರಿಲಿಯನ್ ಡಾಲರ್ ಮೊತ್ತ ತಲುಪಿದೆ. ಜನವರಿ 24ರಂದು ಮೈಕ್ರೋಸಾಫ್ಟ್ ಷೇರುಬೆಲೆ ಶೇ. 1.31ರಷ್ಟು ಏರಿದ್ದು ಪ್ರತೀ ಷೇರಿಗೆ 404 ಡಾಲರ್ ತಲುಪಿದೆ. ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಗಡಿ ಮುಟ್ಟಿದ ಮೊದಲ ಕಂಪನಿ ಮೈಕ್ರೋಸಾಫ್ಟ್ ಆಗಿದೆ.

ಆ್ಯಪಲ್ ಸಂಸ್ಥೆ 2022ರ ಜನವರಿ ತಿಂಗಳಲ್ಲಿ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೊತ್ತ ತಲುಪಿತ್ತು. ಈಗಲೂ ಅದೇ ನಂಬರ್ ಒನ್ ಎನಿಸಿದೆ. ಆದರೆ, ಮೈಕ್ರೋಸಾಫ್ಟ್ ಎರಡನೇ ಸ್ಥಾನದಲ್ಲಿದ್ದರೂ ಆ್ಯಪಲ್ ಮತ್ತು ಅದರ ನಡುವಿನ ಅಂತರ ಬಹಳ ಕಿರಿದಾಗಿದೆ. ಆ್ಯಪಲ್ ಮಾರ್ಕೆಟ್ ಕ್ಯಾಪಿಟಲ್ 3.02 ಟ್ರಿಲಿಯನ್ ಡಾಲರ್ ಇದ್ದರೆ ಮೈಕ್ರೋಸಾಫ್​ನದ್ದು 3.00 ಟ್ರಿಲಿಯನ್ ಡಾಲರ್ ಇದೆ.

ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಪೋಟಿಯಲ್ಲಿ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಸದಾ ಮುಂಚೂಣಿಯಲ್ಲಿವೆ. ಹೆಚ್ಚಿನ ಬಾರಿ ಆ್ಯಪಲ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಒಮ್ಮೆ ಆ್ಯಪಲ್ ಅನ್ನು ಹಿಂದಿಕ್ಕಿತ್ತು.

ಇದನ್ನೂ ಓದಿ: eBay Layoff: ಇಬೇ ಸಂಸ್ಥೆಯಿಂದ ಶೇ. 9ರಷ್ಟು ಉದ್ಯೋಗಿಗಳ ಲೇ ಆಫ್; ಗುತ್ತಿಗೆ ಆಧಾರಿತ ಉದ್ಯೋಗಿಗಳ ಕೆಲಸಕ್ಕೂ ಕತ್ತರಿ?

ಮೈಕ್ರೋಸಾಫ್ಟ್ ಷೇರು ಬೆಲೆ ಹೆಚ್ಚಲು ಏನು ಕಾರಣ?

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮೈಕ್ರೋಸಾಫ್ಟ್ ಬಹಳ ಹೆಚ್ಚು ಒತ್ತು ಕೊಡುತ್ತಿದೆ. ಓಪನ್​ಎಐ ಸಂಸ್ಥೆ ಜೊತೆಗೆ ಮೈಕ್ರೋಸಾಫ್ಟ್ ಪ್ರಮುಖ ಪಾಲುದಾರಿಕೆ ಹೊಂದಿದೆ. ಚ್ಯಾಟ್​ಜಿಪಿಟಿಗೆ ಮಾತ್ರ ಸೀಮಿತವಾಗದೇ ಹಲವು ಜನರೇಟಿವ್ ಎಐ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಅದರ ಬಿಂಗ್ ಸರ್ಚ್ ಎಂಜಿನ್, ಕೋಪೈಲಟ್ ವರ್ಚುವಲ್ ಅಸಿಸ್ಟೆಂಟ್ ಇತ್ಯಾದಿ ಅಪ್ಲಿಕೇಶನ್​ಗಳಲ್ಲಿ ಜನರೇಟಿವ್ ಎಐ ಅನ್ನೂ ಅಳವಡಿಸಲಾಗಿದೆ. ಮೈಕ್ರೋಸಾಫ್ಟ್ ತನ್ನ ಆ್ಯಪ್​ಗಳಲ್ಲಿ ಎಐ ಅನ್ನು ಅಳವಡಿಸುತ್ತಿರುವುದು ಅದರ ಮೇಲಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿರಬಹುದು.

ಚ್ಯಾಟ್​ಜಿಪಿಟಿ ಶುರುವಾಗಿದ್ದು 2022ರ ನವೆಂಬರ್ ತಿಂಗಳಲ್ಲಿ. ಆಗಿಂದಲೇ ಮೈಕ್ರೋಸಾಫ್ಟ್​ಗೆ ಶುಕ್ರ ದೆಸೆ ಶುರುವಾಗಿದೆ. ಅಲ್ಲಿಂದೀಚೆಗೆ ಅದರ ಷೇರುಬೆಲೆ ಶೇ. 67ರಷ್ಟು ಹೆಚ್ಚಿದೆ. ಅದೇ ವೇಳೆ ಆ್ಯಪಲ್ ಷೇರುಬೆಲೆ ಹೆಚ್ಚಿದ್ದು ಶೇ. 40 ಮಾತ್ರ.

ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಕಂಪನಿಗಳ ಪಟ್ಟಿ

  1. ಆ್ಯಪಲ್: 3.02 ಟ್ರಿಲಿಯನ್ ಡಾಲರ್
  2. ಮೈಕ್ರೋಸಾಫ್ಟ್: 3 ಟ್ರಿಲಿಯನ್ ಡಾಲರ್
  3. ಸೌದಿ ಅರಾಮ್ಕೋ: 2.046 ಟ್ರಿಲಿಯನ್ ಡಾಲರ್
  4. ಆಲ್ಫಬೆಟ್ (ಗೂಗಲ್): 1.870 ಟ್ರಿಲಿಯನ್ ಡಾಲರ್
  5. ಅಮೇಜಾನ್: 1.621 ಟ್ರಿಲಿಯನ್ ಡಾಲರ್
  6. ಎನ್​ವಿಡಿಯಾ: 1.515 ಟ್ರಿಲಿಯನ್ ಡಾಲರ್
  7. ಮೆಟಾ ಪ್ಲಾಟ್​ಫಾರ್ಮ್ಸ್ (ಫೇಸ್​ಬುಕ್: 1.004 ಟ್ರಿಲಿಯನ್ ಡಾಲರ್
  8. ಬರ್ಕ್​ಶೈರ್ ಹಾತವೇ: 819.17 ಬಿಲಿಯನ್ ಡಾಲರ್
  9. ಟೆಸ್ಲಾ: 660.67 ಬಿಲಿಯನ್ ಡಾಲರ್
  10. ಟಿಎಸ್​ಎಂಸಿ: 604.32 ಬಿಲಿಯನ್ ಡಾಲರ್

ಇದನ್ನೂ ಓದಿ: Zee vs Sony: ಕೈಕೊಟ್ಟ ಸೋನಿ; ಕಂಪನಿ ಕಾನೂನು ನ್ಯಾಯಮಂಡಳಿ ಮೊರೆಹೋದ ಝೀ

ಟಾಪ್ 100 ಪಟ್ಟಿಯಲ್ಲಿರುವ ಭಾರತೀಯ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 217.85 ಬಿಲಿಯನ್ ಡಾಲರ್ (49ನೇ ಸ್ಥಾನ)
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್: 165.27 ಬಿಲಿಯನ್ ಡಾಲರ್ (72ನೇ ಸ್ಥಾನ)
  3. ಎಚ್​ಡಿಎಫ್​ಸಿ ಬ್ಯಾಂಕ್: 138.72 ಬಿಲಿಯನ್ ಡಾಲರ್ (92ನೇ ಸ್ಥಾನ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್