AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್​ಡಿಸಿಸಿಐ ನಿರೀಕ್ಷೆ

Indian economy, income tax, repo rates projections by PHDCCI: ಭಾರತದ ಜಿಡಿಪಿ 2026ರೊಳಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಪಿಎಚ್​ಡಿಸಿಸಿಐ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಪ್ರಸಕ್ತ ಆದಾಯ ತೆರಿಗೆ ಹೊರೆ ಅತಿಯಾಗಿದ್ದು, ಮಧ್ಯಮವರ್ಗದವರಿಗೆ ಅದನ್ನು ಇಳಿಸಬೇಕು ಎಂದು ಅದು ವಾದಿಸಿದೆ. ಮುಂಬರುವ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಬಹುದು ಎಂದೂ ಪಿಎಚ್​ಡಿಸಿಸಿಐ ನಿರೀಕ್ಷಿಸಿದೆ.

ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್​ಡಿಸಿಸಿಐ ನಿರೀಕ್ಷೆ
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2025 | 12:49 PM

Share

ನವದೆಹಲಿ, ಜನವರಿ 16: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಭಾರತ ಮುಂದಿನ ವರ್ಷ ಇನ್ನೊಂದು ಹಂತ ಮೇಲೇರಬಹುದು. ಉದ್ಯಮ ಸಂಘಟನೆಯಾದ ಪಿಎಚ್​ಡಿಸಿಸಿಐ ಪ್ರಕಾರ 2026ರಲ್ಲಿ ಭಾರತದ ಆರ್ಥಿಕತೆಯು ಜಪಾನ್ ಅನ್ನು ಮೀರಿಸಿ ನಾಲ್ಕನೇ ಸ್ಥಾನಕ್ಕೆ ಏರರಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.8ರಷ್ಟು ಹೆಚ್ಚಬಹುದು. ಮುಂಬರುವ ಹಣಕಾಸು ವರ್ಷದಲ್ಲಿ (2025-26) ಜಿಡಪಿ ಶೇ. 7.7ರಷ್ಟು ಹೆಚ್ಚಬಹುದು. ಇದರಿಂದ ಜಪಾನ್ ಜಿಡಿಪಿಗಿಂತ ಭಾರತದ ಜಿಡಿಪಿ ಹೆಚ್ಚಬಹುದು ಎಂದು ಪಿಎಚ್​​ಡಿಸಿಸಿಐ ನಿರೀಕ್ಷಿಸಿದೆ.

ಕಳೆದ ಮೂರು ವರ್ಷಗಳಿಂದ ಭಾರತದ ಆರ್ಥಿಕತೆಯು ಹಲವು ಸವಾಲುಗಳ ನಡುವೆಯೂ ಬೆಳವಣಿಗೆ ಹೊಂದುತ್ತಿದೆ. 2026ರೊಳಗೆ ಜಪಾನ್ ಅನ್ನು ಹಿಂದಿಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂದು ಪಿಎಚ್​ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ ಅಧ್ಯಕ್ಷ ಹೇಮಂತ್ ಜೈನ್ ಅವರು ಹೇಳಿದರೆಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: Income tax cut: ಕೇಂದ್ರ ಬಜೆಟ್ 2025: ಆದಾಯ ತೆರಿಗೆ ಪ್ರಮಾಣ ಇಳಿಕೆ ಸಾಧ್ಯತೆ

ಆರ್​ಬಿಐನಿಂದ ರೆಪೋ ದರ ಕಡಿತ ಸಾಧ್ಯತೆ

ಹಣದುಬ್ಬರ ಸಾಕಷ್ಟು ಇಳಿಕೆ ಆಗುವ ನಿರೀಕ್ಷೆ ಇರುವುದರಿಂದ ಆರ್​ಬಿಐ ತನ್ನ ರಿಪೋ ದರವನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ ಎಂದು ಪಿಎಚ್​ಡಿಸಿಸಿಐ ಅಭಿಪ್ರಾಯಪಟ್ಟಿದೆ. ಫೆಬ್ರವರಿಯಲ್ಲಿ ಆರ್​ಬಿಐನ ಎಂಪಿಸಿ ಸಭೆ ನಡೆಯಲಿದ್ದು ಆ ವೇಳೆ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿಮೆ ಮಾಡಬಹುದು ಎಂಬುದು ಅದರ ಅನಿಸಿಕೆ. ಸದ್ಯ ರಿಪೋ ದರ ಶೇ. 6.5ರಷ್ಟಿದೆ.

ಹಣದುಬ್ಬರ ದರ ಶೇ. 4ರಿಂದ ಶೇ. 2.5ರ ಶ್ರೇಣಿಗೆ ತಲುಪುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಆರ್​ಬಿಐಗೆ ಬಡ್ಡಿದರ ಇಳಿಸಲು ಹೆಚ್ಚು ಅವಕಾಶ ಇರಲಿದೆ.

ಆದಾಯ ತೆರಿಗೆ ಹೊರೆ ಅತಿಯಾಯಿತು….

ಮಧ್ಯಮವರ್ಗದವರ ಮೇಲೆ ಆದಾಯ ತೆರಿಗೆ ಅತಿಯಾಯಿತು ಎಂಬುದು ಪಿಎಚ್​ಡಿಸಿಸಿಐನ ಅನಿಸಿಕೆ. ಗರಿಷ್ಠ ಆದಾಯ ತೆರಿಗೆ ದರದ ಬಗ್ಗೆಯೂ ಅದು ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಹಿಂಡನ್ಬರ್ಗ್ ರಿಸರ್ಚ್ ಬಂದ್; ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಅಮೆರಿಕದ ಶಾರ್ಟ್​ಸೆಲ್ಲರ್ ಸಂಸ್ಥೆ ಮುಚ್ಚಿದ್ದು ಯಾಕೆ?

ಭಾರತದಲ್ಲಿ 15 ಲಕ್ಷ ರೂ ಮೇಲ್ಪಟ್ಟ ಆದಾಯಗಳಿಗೆ ಗರಿಷ್ಠ ಶೇ. 30ರಷ್ಟು ತೆರಿಗೆ ಹಾಕಲಾಗುತ್ತಿದೆ. 15 ಲಕ್ಷ ರೂ ಆದಾಯ ಗಳಿಸುತ್ತಿರುವವರು ಅಪ್ಪಟ ಮಧ್ಯಮ ವರ್ಗದವರು. ಇವರಿಗೆ ಗರಿಷ್ಠ ಟ್ಯಾಕ್ಸ್ ವಿಧಿಸುವುದು ಸರಿಯಲ್ಲ. ಇದು 40 ಲಕ್ಷ ರೂಗಿಂತ ಹೆಚ್ಚಿನ ಆದಾಯಕ್ಕೆ ಗರಿಷ್ಠ ಟ್ಯಾಕ್ಸ್ ವಿಧಿಸಲಿ. ಹಾಗೆಯೇ, ಗರಿಷ್ಠ ಟ್ಯಾಕ್ಸ್ ಶೇ. 30ರಷ್ಟಿದೆ. ಇದೂ ಕೂಡ ಅತಿಯಾಯಿತು. ಇದನ್ನು ಶೇ. 25ಕ್ಕಾದರೂ ಇಳಿಸಲಿ ಎಂಬುದು ಪಿಎಚ್​​ಡಿಸಿಸಿಐನ ಶಿಫಾರಸು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ