ಹಿಂಡನ್ಬರ್ಗ್ ರಿಸರ್ಚ್ ಬಂದ್; ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಅಮೆರಿಕದ ಶಾರ್ಟ್​ಸೆಲ್ಲರ್ ಸಂಸ್ಥೆ ಮುಚ್ಚಿದ್ದು ಯಾಕೆ?

Hindenburg Research closed down: ಅದಾನಿ ಗ್ರೂಪ್ ಸೇರಿದಂತೆ ದೊಡ್ಡ ದೊಡ್ಡ ಬಿಸಿನೆಸ್ ಸಾಮ್ರಾಜ್ಯಗಳನ್ನು ಅಲುಗಾಡಿಸಿದ್ದ ಹಿಂಡನ್ಬರ್ಗ್ ರಿಸರ್ಚ್ ಕಂಪನಿ ಬಂದ್ ಆಗಿದೆ. ತಮ್ಮ ಶಾರ್ಟ್ ಸೆಲ್ಲರ್ ಕಂಪನಿಯನ್ನು ಮುಚ್ಚಿರುವುದಾಗಿ ಅದರ ಸಂಸ್ಥಾಪಕ ನೇತನ್ ಆಂಡರ್ಸನ್ ಘೋಷಿಸಿದ್ದಾರೆ. ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡಲು ತಾನು ಈ ನಿರ್ಧಾರ ಮಾಡಿದ್ದಾಗಿ ಆಂಡರ್ಸನ್ ತಿಳಿಸಿದ್ದಾರೆ.

ಹಿಂಡನ್ಬರ್ಗ್ ರಿಸರ್ಚ್ ಬಂದ್; ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಅಮೆರಿಕದ ಶಾರ್ಟ್​ಸೆಲ್ಲರ್ ಸಂಸ್ಥೆ ಮುಚ್ಚಿದ್ದು ಯಾಕೆ?
ಹಿಂಡನ್ಬರ್ಗ್ ರಿಸರ್ಚ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2025 | 11:07 AM

ನವದೆಹಲಿ, ಜನವರಿ 16: ಅಮೆರಿಕದ ಇನ್ವೆಸ್ಟ್​ಮೆಂಟ್ ರಿಸರ್ಚ್ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಅನ್ನು ಬಂದ್ ಮಾಡಲಾಗಿದೆ. ಅದರ ಸಂಸ್ಥಾಪಕ ನೇತನ್ ಆಂಡರ್ಸನ್ ತಮ್ಮ ಸಂಸ್ಥೆ ಮುಚ್ಚಲಾಗಿರುವುದನ್ನು ಘೋಷಿಸಿದ್ದಾರೆ. ಅದಾನಿ ಗ್ರೂಪ್ ಸೇರಿದಂತೆ ವಿಶ್ವದ ಬಲಿಷ್ಠ ಬಿಸಿನೆಸ್ ಸಾಮ್ರಾಜ್ಯದ ತಳಹದಿಯನ್ನು ಗಡಗಡ ನಡುಗಿಸಿದ್ದ ಕಂಪನಿಯೊಂದರು ಇತಿಹಾಸದ ಪುಟ ಸೇರಿದಂತಾಗಿದೆ. ಈವರೆಗೆ ಮಾಡಿರುವ ಕೆಲಸದಿಂದ ವೈಯಕ್ತಿಕವಾಗಿ ತೃಪ್ತಿ ಸಿಕ್ಕಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಮತ್ತು ಮನಸ್ಸಿಗೆ ಖುಷಿ ಕೊಡುವ ಸಂಗತಿಗಳತ್ತ ಗಮನ ಕೊಡಲು ಮುಂದಿನ ಸಮಯ ಮೀಸಲಿಡುವುದಾಗಿ ನೇಟ್ ಆಂಡರ್ಸನ್ ತಮ್ಮ ವಿದಾಯ ಪತ್ರದಲ್ಲಿ ತಿಳಿಸಿದ್ದಾರೆ.

ಹಿಂಡನ್ಬರ್ಗ್ ರಿಸರ್ಚ್ ಶಾರ್ಟ್ ಸೆಲ್ಲರ್ ಸಂಸ್ಥೆ. ಅಂದರೆ, ಇದು ಒಂದು ಕಂಪನಿಯ ಷೇರುಗಳು ಪತನವಾಗುವಂತೆ ಮಾಡಿ, ಆ ಮೂಲಕ ಲಾಭ ಮಾಡುವ ಸಂಸ್ಥೆ. ಈ ರೀತಿಯ ಶಾರ್ಟ್​ಸೆಲ್ಲರ್ ಕಂಪನಿಗಳು ಯಾವುದಾದರೂ ದೊಡ್ಡ ಬಿಸಿನೆಸ್ ಸಂಸ್ಥೆಗಳು ಅಸ್ವಾಭಾವಿಕವಾಗಿ ಬೆಳವಣಿಗೆ ಹೊಂದುತ್ತಿದೆ ಎಂದನಿಸಿದರೆ ಅವನ್ನು ಗುರಿ ಮಾಡಿಸಿ ರಹಸ್ಯವಾಗಿ ಸಂಪೂರ್ಣ ತನಿಖೆ ನಡೆಸುತ್ತವೆ. ಸೂಕ್ತ ಸಮಯದಲ್ಲಿ ಆ ವರದಿಯನ್ನು ಪ್ರಕಟಿಸುತ್ತವೆ. ಈ ಋಣಾತ್ಮಕ ವರದಿಯಿಂದ ಆ ಸಂಸ್ಥೆಯ ಷೇರುಗಳು ಪತನಗೊಳ್ಳುತ್ತವೆ. ಅದರಿಂದ ಶಾರ್ಟ್​ಸೆಲ್ಲರ್​ಗಳು ಲಾಭ ಮಾಡಿಕೊಳ್ಳುತ್ತವೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ 2022ರಲ್ಲಿ ಅದಾನಿ ಗ್ರೂಪ್ ವಿರುದ್ಧ ಸ್ಫೋಟಕ ವರದಿ ಪ್ರಕಟಿಸಿತ್ತು. ಅದಾನಿ ಗ್ರೂಪ್ ಅಕ್ರಮ ರೀತಿಯಲ್ಲಿ ತನ್ನ ಕಂಪನಿಗಳ ಷೇರುಮೌಲ್ಯವನ್ನು ಅಸಹಜವಾಗಿ ಏರಿಕೆ ಆಗುವಂತೆ ಮಾಡಿದೆ ಎಂಬುದು ಸೇರಿದಂತೆ ಹಲವು ಗುರುತರ ಆರೋಪಗಳನ್ನು ತನ್ನ ವರದಿಯಲ್ಲಿ ಮಾಡಿತ್ತು. ಅದಾದ ಬೆನ್ನಲ್ಲೇ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರು ಮೌಲ್ಯ ಶೇ. 70ರಷ್ಟು ಕುಸಿತ ಕಂಡಿತ್ತು. ಎರಡು ವರ್ಷವಾದರೂ ಅದಾನಿ ಕಂಪನಿಗಳ ಷೇರುಮೌಲ್ಯ ತನ್ನ ಗರಿಷ್ಠ ಮಟ್ಟವನ್ನು ಮುಟ್ಟಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: 1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು

2017ರಲ್ಲಿ ಆರಂಭವಾದ ಅದಾನಿ ಗ್ರೂಪ್, ನಿಕೋಕಾ, ಕಾಂಡಿ, ಲಾರ್ಡ್ಸ್​ಟೌನ್ ಮೋಟಾರ್ಸ್, ಕ್ಲೊವರ್ ಹೆಲ್ತ್, ಸೂಪರ್ ಮೈಕ್​ರೋ ಕಂಪ್ಯೂಟರ್ ಮೊದಲಾದ ಹಲವು ಸಂಸ್ಥೆಗಳ ವಿರುದ್ಧ ರಿಸರ್ಚ್ ವರದಿ ಪ್ರಕಟಿಸಿ ಶಾರ್ಟ್ ಸೆಲ್ಲಿಂಗ್ ಮಾಡಿದೆ. ಅಮೆರಿಕದಲ್ಲಿ ಬಿಸಿನೆಸ್ ಮಾಡುವ ಕಂಪನಿಗಳನ್ನು ಇದು ಟಾರ್ಗೆಟ್ ಮಾಡುತ್ತದೆ. ಚೀನೀ ಮೂಲದ ಕಂಪನಿಗಳೂ ಹಿಂಡನ್ಬರ್ಗ್​ಗೆ ಗುರಿಯಾಗಿರುವುದು ಹೌದು. ಕೋರ್ಟ್​ಗಳಲ್ಲಿ ನೂರಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಆರೋಪಗಳು ದಾಖಲಾಗಿವೆ.

ಸರ್ಕಾರಿ ಶಾಲೆಯಲ್ಲಿ ಓದಿದ ನೇಟ್ ಆಂಡರ್ಸನ್

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಸಂಸ್ಥಾಪಕ ನೇಟ್ ಆಂಡರ್ಸನ್ ತಮ್ಮ ವಿದಾಯ ಪತ್ರದಲ್ಲಿ ಕಂಪನಿ ಮುಚ್ಚುತ್ತಿರುವ ಬಗ್ಗೆ ಕಾರಣಗಳನ್ನು ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದ ಇವರಿಗೆ ಫೈನಾನ್ಸ್ ಶಿಕ್ಷಣದ ಹಿನ್ನೆಲೆಯೇ ಇರಲಿಲ್ಲ. ಯಾವುದೋ ಉಮೇದಿನಲ್ಲಿ ಈ ಕ್ಷೇತ್ರಕ್ಕೆ ಬಂದಿದ್ದರು. ತನ್ನನ್ನು ತಾನು ಋಜುವಾತು ಮಾಡಿಕೊಳ್ಳುವ ಸವಾಲು ಅವರ ಮುಂದಿತ್ತು. ಆರಂಭದಲ್ಲಿ ಮೂರು ಕಾನೂನು ಮೊಕದ್ದಮೆಗಳು ಇವರನ್ನು ಸಾಲದ ಕೂಪಕ್ಕೆ ದೂಡಿದ್ದವು. ಅದರೂ ದೃತಿಗೆಡದೆ ಇವರು ಸಾವರಿಸಿಕೊಂಡು ಈ ಮಟ್ಟಕ್ಕೆ ಬಂದಿದ್ದಾರೆ. ಹಾಗೆಂದು ಅವರು ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅತಿಹೆಚ್ಚು ಮಾರುಕಟ್ಟೆ ಬಂಡವಾಳ: ಜಾಗತಿಕ 25 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಮೂರು

ಕಂಪನಿ ಮುಚ್ಚುವ ಪ್ರಮೇಯ ಯಾಕೆ?

ನೇತನ್ ಆಂಡರ್ಸನ್ ಅವರು ಆರು ವರ್ಷ ಪ್ರಾಯದ ತಮ್ಮ ಯಶಸ್ವೀ ಕಂಪನಿಯನ್ನು ಮುಚ್ಚಲು ಪ್ರಬಲ ಕಾರಣಗಳಿಲ್ಲ. ವೈಯಕ್ತಿಕ ಆರೋಗ್ಯ ಚೆನ್ನಾಗಿದೆ. ವೈರಿಗಳಿಂದ ಬೆದರಿಕೆಗಳಿಲ್ಲ. ಕಾನೂನಾತ್ಮಕವಾಗಿ ಸಮಸ್ಯೆಗಳಿಲ್ಲ. ಕೌಟುಂಬಿಕ ಬಿಕ್ಕಟ್ಟೂ ಇಲ್ಲ. ಆದರೂ ಕೂಡ ಹಿಂಡನ್ಬರ್ಗ್ ಅನ್ನು ಇತಿಹಾಸ ಪುಟಕ್ಕೆ ನೂಕಿದ್ದಾರೆ. ಅವರೇ ಹೇಳಿಕೊಂಡಂತೆ ಈ ಕೆಲಸ ವೈಯಕ್ತಿಕವಾಗಿ ತೃಪ್ತಿ ಕೊಟ್ಟಿದೆ. ಸಾಮರ್ಥ್ಯ ಸಾಬೀತುಪಡಿಸಲು ಏನೂ ಉಳಿದಿಲ್ಲ. ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯಬೇಕಿದೆ. ವೈಯಕ್ತಿಕ ಬದುಕಿಗೆ ಬೇಕಾದಷ್ಟು ಹಣ ಸಂಪಾದಿಸಿಯಾಗಿದೆ. ಇನ್ನೇನಿದ್ದರೂ ಪ್ರವಾಸ, ಇತರರಿಗೆ ಮಾರ್ಗದರ್ಶನ ಇತ್ಯಾದಿ ಕೆಲಸಗಳತ್ತ ಗಮನ ಹರಿಸಲು ಅವರು ನಿರ್ಧರಿಸಿದ್ಧಾರೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯಲ್ಲಿ ನೇಟ್ ಆಂಡರ್ಸನ್ ಅವರ ಜೊತೆಗೆ ತಂಡದಲ್ಲಿ 11 ಮಂದಿ ಇದ್ದರು. ಅವರಲ್ಲಿ ಕೆಲವರು ತಮ್ಮದೇ ಸ್ವಂತ ರಿಸರ್ಚ್ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರಂತೆ. ನೇತನ್ ಆಂಡರ್ಸನ್ ಅವರು ಶಾರ್ಟ್​ಸೆಲ್ಲಿಂಗ್ ಕಂಪನಿಗಳು ಹೇಗೆ ರಿಸರ್ಚ್ ಮಾಡುತ್ತವೆ ಎಂಬುದನ್ನು ವಿವರಿಸುವ ವಿಡಿಯೋಗಳನ್ನು ಹೊರಬಿಡಲಿದ್ದಾರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ