1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು

India's metro rail network: ದೆಹಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯಲ್ಲಿ ಒಂದೆರಡು ಮಾರ್ಗಗಳ ಉದ್ಘಾಟನೆ ಕಳೆದ ಎರಡು ವಾರದಲ್ಲಿ ಆಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟಾರೆ ಮೆಟ್ರೋ ರೈಲು ನೆಟ್ವರ್ಕ್ 1,000 ಕಿಮೀ ದಾಟಿದೆ. ಈ ಮೈಲಿಗಲ್ಲು ದಾಟಿರುವುದು ಚೀನಾ, ಅಮೆರಿಕ ಬಿಟ್ಟರೆ ಭಾರತವೇ. ಭಾರತದಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ 23 ನಗರಗಳಲ್ಲಿ ಮೆಟ್ರೋ ರೈಲು ನೆಟ್ವರ್ಕ್ ಇದೆ.

1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು
ದೆಹಲಿ ಮೆಟ್ರೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2025 | 3:57 PM

ನವದೆಹಲಿ, ಜನವರಿ 15: ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಮೆಟ್ರೋ ರೈಲು ನೆಟ್ವರ್ಕ್ ವ್ಯವಸ್ಥೆ ಹೊಂದಿದೆ. 1,000 ಕಿಮೀಯಷ್ಟು ಬೃಹತ್ ಮೆಟ್ರೋ ರೈಲು ನೆಟ್ವರ್ಕ್​ನ ಮೈಲಿಗಲ್ಲನ್ನು ಇತ್ತೀಚೆಗೆ ತಲುಪಲಾಗಿದೆ. ಹತ್ತು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡೆಲ್ಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯ ಭಾಗವಾದ 2.8 ಕಿಮೀ ಉದ್ದದ ಜನಕಪುರಿ ಮತ್ತು ಕೃಷ್ಣ ಪಾರ್ಕ್ ಮಾರ್ಗವನ್ನು ಉದ್ಘಾಟನೆ ಮಾಡಿದರು. ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ್ ನಡುವಿನ ದೆಹಲಿ ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್​ನ 13 ಕಿಮೀ ಉದ್ದದ ಮಾರ್ಗವನ್ನೂ ಮೋದಿ ಚಾಲನೆಗೊಳಿಸಿದರು. ಈ ಮೂಲಕ ಭಾರತದಲ್ಲಿ ಮೆಟ್ರೋ ರೈಲು ನೆಟ್ವರ್ಕ್ 1,000 ಕಿಮೀ ಉದ್ದದ ಮೈಲಿಗಲ್ಲು ದಾಟಿದೆ. ಈ ಸಾಧನೆ ಮಾಡಿದ ಮೂರನೇ ದೇಶ ಭಾರತವಾಗಿದೆ. ಚೀನಾ ಮತ್ತು ಅಮೆರಿಕ ದೇಶದಲ್ಲಿ ಭಾರತದಕ್ಕಿಂತ ಹೆಚ್ಚು ಮೆಟ್ರೋ ರೈಲು ನೆಟ್ವರ್ಕ್ ಇದೆ.

ಭಾರತದಲ್ಲಿ ಮೊದಲ ಮೆಟ್ರೋ ರೈಲು ನೆಟ್ವರ್ಕ್ ಸ್ಥಾಪನೆಯಾಗಿದ್ದು 1984ರಲ್ಲಿ ಕೋಲ್ಕತಾದಲ್ಲಿ. ಆದರೆ, ಆಧುನಿಕ ಮೆಟ್ರೋ ಸಿಸ್ಟಂ ಮೊದಲು ಚಾಲನೆಗೊಂಡಿದ್ದು ದೆಹಲಿಯಲ್ಲಿ. ಜಪಾನೀ ತಂತ್ರಜ್ಞಾನ ನೆರವಿನೊಂದಿಗೆ ದೆಹಲಿಯಲ್ಲಿ ಮೆಟ್ರೋ ನೆಟ್ವರ್ಕ್ ಅಭಿವೃದ್ಧಿಪಡಿಸಲಾಯಿತು. ಈಗ ದೆಹಲಿ ಮೆಟ್ರೋ ವಿಶ್ವದ 16ನೇ ಅತಿದೊಡ್ಡ ಮೆಟ್ರೋ ಸಿಸ್ಟಂ ಎನಿಸಿದೆ.

ಇದನ್ನೂ ಓದಿ: ಅತಿಹೆಚ್ಚು ಮಾರುಕಟ್ಟೆ ಬಂಡವಾಳ: ಜಾಗತಿಕ 25 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಮೂರು

ಬೆಂಗಳೂರು ಸೇರಿದಂತೆ ದೇಶದ 23 ನಗರಗಳಲ್ಲಿ ಈಗ ಮೆಟ್ರೋ ರೈಲು ಸಿಸ್ಟಮ್ಸ್ ಶುರುವಾಗಿದೆ. 11 ರಾಜ್ಯಗಳಲ್ಲಿ ಮೆಟ್ರೋ ಸೇವೆ ಇದೆ. 2014ರಲ್ಲಿ ಭಾರತದ ವಿವಿಧ ಮೆಟ್ರೋ ರೈಲುಗಳಲ್ಲಿ ದಿನನಿತ್ಯ 28 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಇವತ್ತು ಒಂದು ಕೋಟಿ ಜನರು ನಿತ್ಯ ಪ್ರಯಾಣಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮೆಟ್ರೋ ರೈಲು ಯೋಜನೆಗಳು ಹಾಗೂ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. 13 ಕಿಮೀ ಉದ್ದದ ದೆಹಲಿ ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು 4,600 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೆಹಲಿ ಮತ್ತು ಮೀರತ್ ನಡುವೆ ಉತ್ತಮ ವೇಗದ ಪ್ರಯಾಣ ಹೊಂದುವ ಅವಕಾಶ ಇದೆ.

ಜನಕಪುರಿ ಮತ್ತು ಕೃಷ್ಣ ಪಾರ್ಕ್ ನಡುವಿನ ಮೆಟ್ರೋ ರೈಲು ಮಾರ್ಗವನ್ನು 1,200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗಕ್ಕೂ ಮೋದಿ ಚಾಲನೆ ನೀಡಿದ್ದಾರೆ. ದೆಹಲಿ ಮೆಟ್ರೋದ ನಾಲ್ಕನೇ ಹಂತದ ಭಾಗವಾಗಿರುವ ರಿತಾಲ ಮತ್ತು ಕುಂಡ್ಲಿ ಸೆಕ್ಷನ್​ನ 26.5 ಕಿಮೀ ಮಾರ್ಗಕ್ಕೆ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ

ಭಾರತದಲ್ಲಿ ದೆಹಲಿ ಮೆಟ್ರೋ ಬಿಟ್ಟರೆ ಅತಿದೊಡ್ಡ ಮೆಟ್ರೋ ರೈಲ ಸಿಸ್ಟಂ ಹೊಂದಿರುವುದು ಬೆಂಗಳೂರು. ಸಿಲಿಕಾನ್ ಸಿಟಿಯಲ್ಲಿ ಇಲ್ಲಿಯವರೆಗೆ ನಿರ್ಮಿಸಲಾಗಿರುವ ಮೆಟ್ರೋ ರೈಲು ಮಾರ್ಗಗಳ ಉದ್ದ 76 ಕಿಮೀಗೂ ಹೆಚ್ಚಿದೆ. ದೆಹಲಿ ಮೆಟ್ರೋ ಸುಮಾರು 350 ಕಿಮೀಯಷ್ಟು ಬೃಹತ್ ಮೆಟ್ರೋ ನೆಟ್ವರ್ಕ್ ಜಾಲ ಹೊಂದಿದೆ. ಅತಿಹೆಚ್ಚು ಮೆಟ್ರೋ ರೈಲು ನೆಟ್ವರ್ಕ್ ಹೊಂದಿರುವ ವಿಚಾರದಲ್ಲಿ ಬೆಂಗಳೂರಿಗೆ ಸಮೀಪವೇ ಹೈದರಾಬಾದ್ ಇದೆ. ಇಲ್ಲಿ 71 ಕಿಮೀಯಷ್ಟು ಉದ್ದದ ಮೆಟ್ರೋ ರೈಲು ಜಾಲ ಇದೆ.

ಕೋಲ್ಕತಾ, ಮುಂಬೈ, ಅಹ್ಮದಾಬಾದ್ ಮತ್ತು ಚೆನ್ನೈ ನಗರಗಳಲ್ಲಿರುವ ಮೆಟ್ರೋ ನೆಟ್ವರ್ಕ್ 50 ಕಿಮೀಗೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು