ಅತಿಹೆಚ್ಚು ಮಾರುಕಟ್ಟೆ ಬಂಡವಾಳ: ಜಾಗತಿಕ 25 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಮೂರು

Banks with largest market cap globally: ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಜಗತ್ತಿನ 25 ಬ್ಯಾಂಕುಗಳ ಪಟ್ಟಿಯನ್ನು ಗ್ಲೋಬಲ್ ಡಾಟಾ ಸಂಸ್ಥೆ ಬಿಡುಗಡೆ ಮಾಡಿದೆ. ಎಚ್​ಡಿಎಫ್​ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕು ಮತ್ತು ಎಸ್​ಬಿಐ ಬ್ಯಾಂಕುಗಳು ಈ ಪಟ್ಟಿಯಲ್ಲಿವೆ. ಜೆಪಿ ಮಾರ್ಗನ್ ಚೇಸ್ ಬ್ಯಾಂಕು ಜಗತ್ತಿನಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಬ್ಯಾಂಕ್ ಎನಿಸಿದೆ.

ಅತಿಹೆಚ್ಚು ಮಾರುಕಟ್ಟೆ ಬಂಡವಾಳ: ಜಾಗತಿಕ 25 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಮೂರು
ಎಚ್​ಡಿಎಫ್​ಸಿ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2025 | 2:24 PM

ನವದೆಹಲಿ, ಜನವರಿ 15: ಹಣಕಾಸು ವ್ಯವಸ್ಥೆ ಸುರಕ್ಷಿತವಾಗಿರಬೇಕಾದರೆ ಬ್ಯಾಂಕುಗಳು ಸುಭದ್ರವಾಗಿರಬೇಕು. ಬ್ಯಾಂಕುಗಳ ಬಗ್ಗೆ ಜನರಿಗೆ ವಿಶ್ವಾಸ ಹೆಚ್ಚಿರಬೇಕು. ಈ ವಿಶ್ವಾಸಕ್ಕೆ ದ್ಯೋತಕವಾಗಿ ಬ್ಯಾಂಕುಗಳಲ್ಲಿ ಠೇವಣಿಗಳಿವೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಬ್ಯಾಂಕುಗಳ ಷೇರು ಮೌಲ್ಯವೂ ವಿಶ್ವಾಸಾರ್ಹತೆಗೆ ದ್ಯೋತಕ ವೆಂಬಂತಿರಬಹುದು. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ವಿಶ್ವದ 25 ಬ್ಯಾಂಕುಗಳಲ್ಲಿ ಭಾರತದ ಮೂರು ಬ್ಯಾಂಕುಗಳಿವೆ. ಎಚ್​ಡಿಎಫ್​ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಮೂರು ಭಾರತೀಯ ಬ್ಯಾಂಕುಗಳಾಗಿವೆ. ಗ್ಲೋಬಲ್ ​ಡಾಟಾ ಎನ್ನುವ ಡಾಟಾ ಅನಾಲಿಟಿಕ್ಸ್ ಕಂಪನಿ ಬಿಡುಗಡೆ ಮಾಡಿದ ವರದಿಯಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ (market capitalization) ಹೊಂದಿರುವ ಜಾಗತಿಕ ಕಂಪನಿಗಳ ಪಟ್ಟಿ ನೀಡಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕು ಭಾರತದ ನಂಬರ್ ಒನ್ ಬ್ಯಾಂಕ್ ಎನಿಸಿದೆ. ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಎರಡೂ ವಿಲೀನಗೊಂಡ ಪರಿಣಾಮ ಬೃಹತ್ ಎಚ್​ಡಿಎಫ್​ಸಿ ಬ್ಯಾಂಕ್ ಸೃಷ್ಟಿಯಾಗಿದೆ. ಇದರ ಮಾರುಕಟ್ಟೆ ಬಂಡವಾಳ 158.5 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂಗೂ ಅಧಿಕ) ಇದೆ. ಜಾಗತಿಕ ಬ್ಯಾಂಕುಗಳ ಪಟ್ಟಿಯಲ್ಲಿ ಇದು 13ನೇ ಸ್ಥಾನ ಹೊಂದಿದೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ

ಐಸಿಐಸಿಐ ಬ್ಯಾಂಕ್ 105.7 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದ್ದು ಟಾಪ್ 25 ಬ್ಯಾಂಕುಗಳಲ್ಲಿ 19ನೇ ಸ್ಥಾನ ಪಡೆದಿದೆ. ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್​ಬಿಐ 82.9 ಬಿಲಿಯನ್ ಡಾಲರ್​ನೊಂದಿಗೆ 24ನೇ ಸ್ಥಾನ ಪಡೆದಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳದಲ್ಲಿ ಜಾಗತಿಕವಾಗಿ ಟಾಪ್-100 ಸಂಸ್ಥೆಗಳ ಪಟ್ಟಿಯಲ್ಲಿ ಇದೆ. ಟಿಸಿಎಸ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಾಲಿಗೆ ಅದೂ ಸೇರಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್​ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ

ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಇರುವ 25 ಬ್ಯಾಂಕುಗಳ ಪಟ್ಟಿ

  1. ಜೆಪಿ ಮಾರ್ಗನ್ ಚೇಸ್
  2. ಬ್ಯಾಂಕ್ ಆಫ್ ಅಮೆರಿಕಾ
  3. ಐಸಿಬಿಸಿ
  4. ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ
  5. ವೆಲ್ಸ್ ಫಾರ್ಗೋ
  6. ಬ್ಯಾಂಕ್ ಆಫ್ ಚೀನಾ
  7. ಚೀನಾ ಕನ್ಸ್​ಟ್ರಕ್ಷನ್ ಬ್ಯಾಂಕ್
  8. ಮಾರ್ಗನ್ ಸ್ಟಾನ್ಲೀ
  9. ಗೋಲ್ಡ್​ಮ್ಯಾನ್ ಸ್ಯಾಕ್ಸ್
  10. ಎಚ್​ಎಸ್​ಬಿಸಿ ಹೋಲ್ಡಿಂಗ್ಸ್
  11. ರಾಯಲ್ ಬ್ಯಾಂಕ್ ಆಫ್ ಕೆನಡಾ
  12. ಕಾಮನ್​ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ
  13. ಎಚ್​ಡಿಎಫ್​ಸಿ ಬ್ಯಾಂಕ್
  14. ಮಿತ್ಸುಬಿಶಿ ಯುಎಫ್​ಜಿ
  15. ಚಾರ್ಲ್ಸ್ ಶ್ವಾಬ್
  16. ಚೀನಾ ಮರ್ಕೆಂಟ್ಸ್ ಬ್ಯಾಂಕ್
  17. ಸಿಟಿಗ್ರೂಪ್
  18. ಯುಬಿಎಸ್ ಗ್ರೂಪ್
  19. ಐಸಿಐಸಿಐ ಬ್ಯಾಂಕ್
  20. ಅಲ್ ರಜ್ಹಿ ಬ್ಯಾಂಕಿಂಗ್ ಅಂಡ್ ಇನ್ವೆಸ್ಟ್​ಮೆಂಟ್ಸ್
  21. ಸುಮಿಟೋಮೋ ಮಿತ್ಸುಯ್ ಫೈನಾನ್ಷಿಯಲ್ ಗ್ರೂಪ್
  22. ಟಿಡಿ ಬ್ಯಾಂಕ್
  23. ಡಿಬಿಎಸ್ ಗ್ರೂಪ್
  24. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  25. ಪಿಎನ್​ಸಿ ಫೈನಾನ್ಷಿಯಲ್ ಸರ್ವಿಸಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!