ಸೋತ ಹತಾಶೆಯಲ್ಲಿ ಮಾಡಬಾರದನ್ನು ಮಾಡಿದ ಮೆಡ್ವೆಡೆವ್​ಗೆ 66 ಲಕ್ಷ ರೂ. ದಂಡ..!

Daniil Medvedev: ಆಸ್ಟ್ರೇಲಿಯನ್ ಓಪನ್‌ನಲ್ಲಿ ಡೇನಿಯಲ್ ಮೆಡ್ವೆಡೆವ್​ಗೆ ಎರಡನೇ ಸುತ್ತಿನಲ್ಲೇ ಸೋಲಿನ ಶಾಕ್ ಎದುರಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಮೆಡ್ವೆಡೆವ್ ಕ್ಯಾಮೆರಾ ಮತ್ತು ತನ್ನ ರಾಕೆಟ್ ಮೇಲೆ ಕೋಪ ಹೊರಹಾಕಿದ್ದಾರೆ. ಇದರ ಜೊತೆಗೆ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಗೂ ಗೈರಾಗಿದ್ದಾರೆ. ಹೀಗಾಗಿ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಕ್ರಮಕೊಂಡಿರುವ ಆಯೋಜಕರು ಅವರಿಗೆ 76,000 ಡಾಲರ್ ದಂಡ ವಿಧಿಸಿದ್ದಾರೆ.

ಸೋತ ಹತಾಶೆಯಲ್ಲಿ ಮಾಡಬಾರದನ್ನು ಮಾಡಿದ ಮೆಡ್ವೆಡೆವ್​ಗೆ 66 ಲಕ್ಷ ರೂ. ದಂಡ..!
ಡೇನಿಯಲ್ ಮೆಡ್ವೆಡೆವ್
Follow us
ಪೃಥ್ವಿಶಂಕರ
|

Updated on:Jan 19, 2025 | 10:04 PM

ಯಾವುದೇ ಕ್ರೀಡೆಯಾಗಿರಲಿ, ಅದರಲ್ಲಿ ಸೋಲು ಗೆಲುವು ಸಹಜ. ಗೆದ್ದ ಆಟಗಾರರು ಗೆಲುವನ್ನು ಸಂಭ್ರಮದಿಂದ ಆಚರಿಸಿದರೆ, ಇತ್ತ ಸೋತ ಆಟಗಾರರು ಸೋತ ನಿರಾಶೆಯಲ್ಲಿ ತಮ್ಮ ಕೋಪವನ್ನು ಇತರ ವ್ಯಕ್ತಿಗಳ ಮೇಲೆ ಅಥವಾ ವಸ್ತುಗಳ ಮೇಲೆ ತೋರಿಸುತ್ತಾರೆ. ಇದನ್ನು ನಾವು ಕ್ರಿಕೆಟ್​ನಲ್ಲಿ ಸಾಕಷ್ಟು ಬಾರಿ ನೋಡುತ್ತೇವೆ. ಹಾಗೆಯೇ ಟೆನಿಸ್​​ನ್ಲ್ಲೂ ಈ ರೀತಿಯ ಘಟನೆಗಳು ನಡೆಯುವುದು ಸರ್ವೆ ಸಾಮಾನ್ಯ. ಟೆನಿಸ್​ನಲ್ಲಿ ಆಟಗಾರರು ಗೆದ್ದ ಬಳಿಕ ತಮ್ಮ ರ್‍ಯಾಕೆಟ್‌ ಅನ್ನು ನೆಲಕ್ಕೆ ಬಡಿದು ಸಂಭ್ರಮಿಸುವುದನ್ನು ನಾವು ನೋಡಿರುತ್ತೇವೆ. ಇತ್ತ ಸೋತಾಗಲೂ ಸಹ ಆಟಗಾರರು ತಮ್ಮ ರ್‍ಯಾಕೆಟ್‌ ಅನ್ನು ಮುರಿದು ಹಾಕುವ ಮೂಲಕ ತಮ್ಮ ಕೋಪವನ್ನು ಹೊರಹಾಕುವುದನ್ನು ಕಂಡಿರುತ್ತೇವೆ. ಆದರೀಗ ಇದೇ ರೀತಿಯ ವರ್ತನೆ ತೋರಿದ ಖ್ಯಾತ ಟೆನಿಸ್ ಆಟಗಾರ ಡೇನಿಯಲ್ ಮೆಡ್ವೆಡೆವ್​ಗೆ ಭಾರಿ ದಂಡವನ್ನು ವಿಧಿಸಲಾಗಿದೆ.

ವಾಸ್ತವವಾಗಿ 28ರ ಹರೆಯದ ಟೆನಿಸ್ ತಾರೆ ಮೆಡ್ವೆಡೆವ್ ಅವರಿಗೆ 2025ರ ಆರಂಭ ಚೆನ್ನಾಗಿಲ್ಲ. ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್, ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರು ಎರಡನೇ ಸುತ್ತಿನಲ್ಲಿಯೇ ಸೋಲನ್ನು ಎದುರಿಸಬೇಕಾಯಿತು. ಇದರಿಂದಾಗಿ ಅವರು ಗ್ರ್ಯಾಂಡ್ ಸ್ಲಾಮ್​ನಿಂದ ಹೊರಬೀಳಬೇಕಾಯಿತು. 5 ಸೆಟ್‌ಗಳ ಕಾಲ ನಡೆದ ಈ ಪಂದ್ಯದಲ್ಲಿ ಮೊದಲ ಸುತ್ತನ್ನು ಗೆದ್ದುಕೊಂಡ ಮೆಡ್ವೆಡೆವ್​ ಆ ಬಳಿಕ ಅಮೆರಿಕದ ಲೆರ್ನರ್ ಟಿಯಾನ್ ವಿರುದ್ಧ 6-3 7-6 6-7 1-6 7-6 ರಿಂದ ಸೋಲಬೇಕಾಯಿತು.

ಕ್ಯಾಮರಾ ಮತ್ತು ರಾಕೆಟ್ ಮೇಲೆ ಕೋಪ

19 ವರ್ಷದ ಆಟಗಾರನ ವಿರುದ್ಧ ಸೋತ ಬಳಿಕ ತಾಳ್ಮೆ ಕಳೆದುಕೊಂಡ ಮೆಡ್ವೆಡೆವ್, ತಮ್ಮ ರ್‍ಯಾಕೆಟ್​ನಿಂದ ನೆಟ್​ಗೆ ಅಳವಡಿಸಿದ್ದ ಚಿಕ್ಕ ಕ್ಯಾಮೆರಾಕ್ಕೆ ಹೊಡೆಯಲಾರಂಭಿಸಿದರು. ಮೆಡ್ವೆಡೆವ್ ಈ ರೀತಿ ಮಾಡಿದ್ದು, ಸ್ಪಷ್ಟವಾಗಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದಲ್ಲದೆ ಟಿವಿಯಲ್ಲೂ ನೇರ ಪ್ರಸಾರವಾಯಿತು. ಇತ್ತ ಮೆಡ್ವೆಡೆವ್ ಕೋಪಕ್ಕೆ ಕ್ಯಾಮೆರಾ ಹಾನಿಗೊಳಗಾದರೆ ಅವರ ರಾಕೆಟ್ ಕೂಡ ಮುರಿದುಹೋಯಿತು.

ದಂಡ ವಿಧಿಸಿದ ಆಸ್ಟ್ರೇಲಿಯನ್ ಓಪನ್

ಇದು ಸಾಲದೆಂಬಂತೆ ಪಂದ್ಯವನ್ನು ಸೋತ ಬಳಿಕ ಮೆಡ್ವೆಡೆವ್ ಪತ್ರಿಕಾಗೋಷ್ಠಿಗೆ ಬರಲಿಲ್ಲ. ಪಂದ್ಯಾವಳಿಯ ನಿಯಮಗಳ ಪ್ರಕಾರ ಪ್ರತಿ ಆಟಗಾರ ಪಂದ್ಯದಲ್ಲಿ ಗೆದ್ದರೂ ಅಥವಾ ಸೋತರೂ ಪತ್ರಿಕಾಗೋಷ್ಠಿಗೆ ಬರುವುದು ಕಡ್ಡಾಯವಾಗಿದೆ. ಆದಾಗ್ಯೂ ಮೆಡ್ವೆಡೆವ್ ಪತ್ರಿಕಾಗೋಷ್ಠಿಗೆ ಬಂದಿಲ್ಲ. ಹೀಗಾಗಿ ಆಸ್ಟ್ರೇಲಿಯನ್ ಓಪನ್ ಆಯೋಜಕರು ಮೆಡ್ವೆಡೆವ್‌ಗೆ ಭಾರಿ ದಂಡ ವಿಧಿಸಿದ್ದಾರೆ. ನೀತಿ ಸಂಹಿತೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಸಾಬೀತಾದ ನಂತರ ಮೆಡ್ವೆಡೆವ್‌ಗೆ 76 ಸಾವಿರ ಅಮೆರಿಕನ್ ಡಾಲರ್ ಅಂದರೆ ಸುಮಾರು 66 ಲಕ್ಷ ರೂಗಳನ್ನು ದಂಡವಾಗಿ ವಿಧಿಸಿದ್ದಾರೆ. 2021 ರ ಯುಎಸ್ ಓಪನ್ ಚಾಂಪಿಯನ್ ಮೆಡ್ವೆಡೆವ್ ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ತಲುಪಿದರಾದರೂ ಪ್ರತಿ ಬಾರಿ ಸೋಲನ್ನು ಎದುರಿಸಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:51 pm, Sun, 19 January 25

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ