AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FASTag KYC: ಜ. 31ರೊಳಗೆ ಕೆವೈಸಿ ಅಪ್​ಡೇಟ್ ಮಾಡದಿದ್ದರೆ ಡೀ ಆ್ಯಕ್ಟಿವೇಟ್ ಆಗಲಿದೆ ಫಾಸ್​ಟ್ಯಾಗ್; ಕೆವೈಸಿ ಅಪ್​ಡೇಟ್ ಮಾಡುವ ಕ್ರಮ ಹೇಗೆ?

KYC Update Method: ಎಲ್ಲಾ ನಾಲ್ಕು ಚಕ್ರ ವಾಹನಗಳು ಹೆದ್ದಾರಿ ಬಳಸುವಾಗ ಫಾಸ್​ಟ್ಯಾಗ್ ಹೊಂದಿರಬೇಕು. ಫಾಸ್​ಟ್ಯಾಗ್​ಗೆ ಕೆವೈಸಿ ಅಪ್​ಡೇಟ್ ಮಾಡಬೇಕು. ಜ. 31ಕ್ಕೆ ಗಡುವು ಕೊಡಲಾಗಿದೆ. ಹೆದ್ದಾರಿ ನಿರ್ವಹಣೆ ಸಂಸ್ಥೆಯ ಫಾಸ್​ಟ್ಯಾಗ್ ಪೋರ್ಟಲ್​ಗೆ ಹೋಗಿ ಆನ್​ಲೈನ್​ನಲ್ಲೇ ಕೆವೈಸಿ ಅಪ್​ಡೇಟ್ ಮಾಡಬಹುದು.

FASTag KYC: ಜ. 31ರೊಳಗೆ ಕೆವೈಸಿ ಅಪ್​ಡೇಟ್ ಮಾಡದಿದ್ದರೆ ಡೀ ಆ್ಯಕ್ಟಿವೇಟ್ ಆಗಲಿದೆ ಫಾಸ್​ಟ್ಯಾಗ್; ಕೆವೈಸಿ ಅಪ್​ಡೇಟ್ ಮಾಡುವ ಕ್ರಮ ಹೇಗೆ?
ಫಾಸ್​ಟ್ಯಾಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 30, 2024 | 11:43 AM

Share

ನವದೆಹಲಿ, ಜನವರಿ 30: ಹೆದ್ದಾರಿ ಬಳಸುವ ಎಲ್ಲಾ ನಾಲ್ಕು ಚಕ್ರ ವಾಹನಗಳಿಗೆ ಫಾಸ್​ಟ್ಯಾಗ್ (FASTag) ಸೌಲಭ್ಯ ಒದಗಿಸಲಾಗಿದೆ. ಟಾಲ್ ಪ್ಲಾಜಾಗಳಲ್ಲಿ ಸಮಯ ವ್ಯಯವಾಗುವುದನ್ನು ತಪ್ಪಿಸಲು ಸರ್ಕಾರ ಕೆಲ ವರ್ಷಗಳ ಹಿಂದೆ ಈ ಹೊಸ ವ್ಯವಸ್ಥೆ ತಂದಿದೆ. ಫಾಸ್​ಟ್ಯಾಗ್ ಇದ್ದರೆ ಟೋಲ್ ಬೂತ್​ಗಳ ಸಮೀಪ ಅಳವಡಿಸಿರುವ ಸ್ಕ್ಯಾನರ್​ಗಳ ಮೂಲಕ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುತ್ತದೆ. ಇದರಿಂದ ಸಮಯ ಉಳಿತಾಯ ಆಗುತ್ತದೆ. ಇದೀಗ ಫಾಸ್​ಟ್ಯಾಗ್​ನ ಕೆವೈಸಿಯನ್ನು (FASTag KYC) ಅಪ್​ಡೇಟ್ ಮಾಡಲು ಈ ತಿಂಗಳು ಡೆಡ್​ಲೈನ್ ಇದೆ. ಜನವರಿ 31ರೊಳಗೆ ಫಾಸ್​ಟ್ಯಾಗ್ ಅಪ್​ಡೇಟ್ ಮಾಡಬೇಕಿದೆ. ಈ ಕಾರ್ಯ ಆಗದಿದ್ದರೆ ಫಾಸ್​ಟ್ಯಾಗ್ ಡೀ ಆ್ಯಕ್ಟಿವೇಟ್ ಆಗುತ್ತದೆ.

ಫಾಸ್​ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ?

ವಾಹನ ಚಲಿಸುತ್ತಿರುವಾಗಲೇ ಸ್ಕ್ಯಾನರ್​ಗಳು ಫಾಸ್​ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತವೆ. ನಿಗದಿತ ಟೋಲ್ ಹಣವನ್ನು ಅಕೌಂಟ್​ನಿಂದ ಕಡಿತಗೊಳಿಸಲಾಗುತ್ತದೆ. ಈ ಫಾಸ್​​ಟ್ಯಾಗ್ ಸಾಧನದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್​ಎಫ್​ಐಡಿ) ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಅದರ ಟ್ಯಾಗ್ ಅನ್ನು ವಾಹನದ ವಿಂಡ್​ಸ್ಕ್ರೀನ್​ಗೆ ಅಂಟಿಸಲಾಗಿರುತ್ತದೆ. ಟೋಲ್ ಪ್ಲಾಜಾ ಬಳಿ ಸ್ಕ್ಯಾನರ್​ ಈ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಗುರುತಿಸುತ್ತದೆ.

ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್​ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?

ಫಾಸ್​ಟ್ಯಾಗ್ ಕೆವೈಸಿ ಅಪ್​ಡೇಟ್ ಮಾಡುವ ಕ್ರಮ

  • ಹೆದ್ದಾರಿ ನಿರ್ವಹಣೆ ಸಂಸ್ಥೆಯಾದ ಐಎಚ್​ಎಂಸಿಎಲ್​ನ ಫಾಸ್​ಟ್ಯಾಗ್ ಪೋರ್ಟಲ್​ಗೆ ಹೋಗಿ: fastag.ihmcl.com/
  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಹಾಗೂ ಪಾಸ್​ವರ್ಡ್ ಅಥವಾ ಒಟಿಪಿ ಬಳಸಿ ಲಾಗಿನ್ ಆಗಿ.
  • ಡ್ಯಾಶ್​ಬೋರ್ಡ್​ನಲ್ಲಿ ಮೈ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.
  • ಇದರಲ್ಲಿ ನೀವು ಹಿಂದೆ ನೊಂದಾಯಿಸುವಾಗ ಸಲ್ಲಿಸಿದ್ದ ನಿಮ್ಮ ಕೆವೈಸಿ ವಿವರವನ್ನು ಕಾಣಬಹುದು.
  • ಕೆವೈಸಿ ಮೇಲೆ ಕ್ಲಿಕ್ ಮಾಡಿ ‘ಕಸ್ಟಮರ್ ಟೈಪ್’ ಅನ್ನು ಆಯ್ಕೆ ಮಾಡಿ
  • ಎಲ್ಲಾ ವಿವರ ಭರ್ತಿ ಮಾಡಿ. ಆಧಾರ್ ಇತ್ಯಾದಿ ಐಡಿ ಮತ್ತು ವಿಳಾಸ ಸಾಕ್ಷ್ಯ ದಾಖಲೆಗಳನ್ನು ಸಲ್ಲಿಸಿ.

ಈ ಪ್ರಕ್ರಿಯೆ ಮುಗಿದ ಬಳಿಕ 7 ಕಾರ್ಯ ದಿನಗಳಲ್ಲಿ ಕೆವೈಸಿ ಅಪ್​ಡೇಟ್ ಆಗುತ್ತದೆ.

ಇದನ್ನೂ ಓದಿ: New IMPS Rules: ಫೆ. 1ರಿಂದ ಹೊಸ ಐಎಂಪಿಎಸ್ ನಿಯಮ; ಹಣ ಪಾವತಿ ವ್ಯವಸ್ಥೆ ಇನ್ನಷ್ಟು ಸರಳ ಹಾಗೂ ಉಪಯುಕ್ತ

ಕೆವೈಸಿಗೆ ಬೇಕಾದ ದಾಖಲೆಗಳು

ಕೆವೈಸಿ ಎಂದರೆ ನೋ ಯುವರ್ ಕಸ್ಟಮರ್ ಎಂದು. ಅಂದರೆ ಗ್ರಾಹಕರ ಬಗ್ಗೆ ಸಂಸ್ಥೆಗಳು ಆಗಾಗ್ಗೆ ಮಾಹಿತಿ ಅಪ್​ಡೇಟ್ ಮಾಡುತ್ತಿರಬೇಕು. ಈ ಕೆಳಗಿನ ದಾಖಲೆಗಳು ಫಾಸ್​ಟ್ಯಾಗ್ ಕೆವೈಸಿಗೆ ಬೇಕಾಗಬಹುದು:

  • ವಾಹನ ನೊಂದಣಿ ಪತ್ರ
  • ಐಡಿ ದಾಖಲೆ
  • ವಿಳಾಸ ದಾಖಲೆ
  • ಪಾಸ್​ಪೋರ್ಟ್ ಗಾತ್ರದ ಫೋಟೋ

ಇಲ್ಲಿ ಐಡಿ ಮತ್ತು ಅಡ್ರೆಸ್ ಪ್ರೂಫ್​ಗೆ ಪಾಸ್​ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಡಿಎಲ್ ಅಥವಾ ಪ್ಯಾನ್ ಕಾರ್ಡ್ ಅನ್ನು ಬಳಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Tue, 30 January 24

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ